Hanuman Favourite Zodiacs: ಈ ರಾಶಿಯವರ ಮೇಲೆ ಸದಾ ಇರುತ್ತೆ ಹನುಮಂತನ ದಯೆ, ಸಿಗುತ್ತೆ ಅಪಾರ ಆಸ್ತಿ-ಸಂಪತ್ತು
ಧಾರ್ಮಿಕ ನಂಬಿಕೆಗಳ ಪ್ರಕಾರ, ಕೆಲವು ರಾಶಿಯವರ ಮೇಲೆ ಹನುಮಂತನ ಕೃಪಾಕಟಾಕ್ಷ ಸದಾ ಇರುತ್ತದೆ ಎಂದು ಹೇಳಲಾಗುತ್ತದೆ. ಹನುಮಂತಹ ಕೃಪೆಯಿಂದಾಗಿ ನಾಲ್ಕು ರಾಶಿಯವರು ಜೀವನದಲ್ಲಿ ಎಂತಹದ್ದೇ ಕಷ್ಟ ಬಂದರೂ ಪಾರಾಗುತ್ತಾರೆ. ಮಾತ್ರವಲ್ಲ, ಅವರು ಅಪಾರ ಆಸ್ತಿ-ಸಂಪತ್ತಿನ ಒಡೆಯರಾಗುತ್ತಾರೆ ಎಂಬ ನಂಬಿಕೆ ಇದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ನೋಡುವುದಾದರೆ...
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇಷ ರಾಶಿಯನ್ನು ಹನುಮಂತನ ನೆಚ್ಚಿನ ರಾಶಿಗಳಲ್ಲಿ ಒಂದು ಎಂದು ನಂಬಲಾಗಿದೆ. ಮೇಷ ರಾಶಿಯವರ ಮೇಲೆ ಭಗವಾನ್ ಹನುಮಂತನ ದಯೆ ಸದಾ ಇರಲಿದ್ದು, ಇವರು ಜೀವಂದಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ಹನುಮಂತನಷ್ಟೇ ಬಲಶಾಲಿಗಳಾಗಿ ಅದರಿಂದ ಹೊರಬರುತ್ತಾರೆ. ಇವರ ಜೀವನದಲ್ಲಿ ಎಂದಿಗೂ ಆರ್ಥಿಕ ಬಿಕ್ಕಟ್ಟು ಎದುರಾಗುವುದಿಲ್ಲ ಎಂದು ನಂಬಲಾಗಿದೆ.
ಸೂರ್ಯನ ರಾಶಿಚಕ್ರ ಚಿಹ್ನೆಯಾದ ಸಿಂಹ ರಾಶಿಯವರಿಗೂ ಕೂಡ ಸದಾ ಹನುಮಂತನ ಆಶೀರ್ವಾದ ಇರುತ್ತದೆ. ಹನುಮಂತನ ಆಶೀರ್ವಾದದಿಂದಾಗಿ ಈ ರಾಶಿಯವರು ಜೀವನದಲ್ಲಿ ಎದುರಾಗುವ ಸಕಲ ರೀತಿಯ ಸಂಕಷ್ಟಗಳಿಂದಲೂ ಪಾರಾಗುತ್ತಾರೆ. ಮಾತ್ರವಲ್ಲ, ತುಂಬಾ ಎತ್ತರಕ್ಕೆ ಬೆಳೆಯುತ್ತಾರೆ. ಇವರ ಈ ಕಠಿಣ ಪರಿಶ್ರಮವೇ ಇವರ ಪ್ರಗತಿಗೆ ಹಾದಿ ಎಂದು ಹೇಳಲಾಗುತ್ತದೆ.
ವೃಶ್ಚಿಕ ರಾಶಿಯವರ ಹೃದಯ ಎಷ್ಟು ನಿಷ್ಕಲ್ಮಶವಾಗಿದೆಯೋ ಅಂತೆಯೇ ಅವರ ಜೀವನವೂ ಬಿಳಿ ಹಾಳೆ ಇದ್ದಂತೆ. ಇತರರಿಗೆ ಎಂದೂ ಕೂಡ ಕೇಡು ಬಯಸದ ಇವರ ಮೇಲೆ ಹನುಮಂತನ ವಿಶೇಷ ಆಶೀರ್ವಾದ ಇರುತ್ತದೆ. ಇದರಿಂದಾಗಿ, ಇವರ ಬದುಕಿನಲ್ಲಿ ನಾನಾ ರೀತಿಯ ಕಷ್ಟಗಳು ಎದುರಾದರೂ ಕೂಡ ಎಂದಿಗೂ ಅವರು ಯಾವುದೇ ಕೆಲಸದಿಂದಲೂ ಹಿಂದೆ ಸರಿಯುವ ಮಾತೇ ಬರುವುದಿಲ್ಲ. ಹಣಕಾಸಿನ ವಿಷಯದಲ್ಲಿಯೂ ಕೂಡ ಇವರು ಅದೃಷ್ಟವಂತರು ಎಂತಲೇ ಹೇಳಬಹುದು.
ಹನುಮಂತನ ಪ್ರೀತಿಯ ರಾಶಿಗಳಲ್ಲಿ ಕುಂಭ ರಾಶಿಯೂ ಒಂದು. ಜನ್ಮತಃ ಅದೃಷ್ಟವಂತರಾಗಿ ಹುಟ್ಟುವ ಈ ರಾಶಿಯವರ ಮೇಲೆ ಹನುಮಂತನ ಆಶೀರ್ವಾದ ಸದಾ ಇರುತ್ತದೆ. ಇದರಿಂದಾಗಿ ಇವರ ಜೀವನದಲ್ಲಿ ಸುಖ-ಸಂತೋಷಕ್ಕೆ, ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಕೊರತೆ ಇರುವುದಿಲ್ಲ ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.