ಈ ರಾಶಿಯವರ ಬದುಕಿನುದ್ದಕ್ಕೂ ಇರುತ್ತೆ ಹನುಮಂತನ ಕೃಪೆ: ಯಾರೇ ಕೆಡುಕು ಬಯಸಿದರೂ ತಟ್ಟದಂತೆ ಕಾಯುತ್ತಾನೆ ಮಾರುತಿರಾಯ
ಕೆಲ ರಾಶಿಗಳೆಂದರೆ ಹನುಮಂತ ದೇವನಿಗೆ ಬಹಳ ಪ್ರಿಯ. ಇವರು ಎಂತಹದ್ದೇ ಸಂಕಷ್ಟಕ್ಕೆ ಸಿಲುಕಿದ್ದರೂ ತ್ವರಿತವಾಗಿ ಮುಕ್ತಿ ನೀಡುತ್ತಾನೆ ಹನುಮಂತ. ಅಂದರೆ ಕೆಲವು ರಾಶಿಯವರಿಗೆ ಹನುಮಂತನ ಕೃಪೆ ಸದಾ ಇರುತ್ತದೆ.
ಹಿಂದೂ ನಂಬಿಕೆಯ ಪ್ರಕಾರ, ರಾಮ ಭಕ್ತ ಹನುಮಂತನ ಕೃಪೆಯನ್ನು ಹೊಂದಿರುವ ವ್ಯಕ್ತಿಯು ಯಾವುದೇ ಸಮಸ್ಯೆಗಳಾಗಲಿ, ತೊಂದರೆಗಳಾಗಲಿ ಅವುಗಳಿಂದ ಸುರಕ್ಷಿತವಾಗಿ ಹೊರಬರಬಹುದು ಎಂದರ್ಥ. ಇನ್ನು ಆಂಜನೇಯನ ಕೃಪೆ ಇರುವ ರಾಶಿಗಳು ಯಾವುವು ಎಂಬುದನ್ನು ನೋಡೋಣ...
ಮೇಷ: ಮೇಷ ರಾಶಿಯವರಿಗೆ ಇಂದು ತುಂಬಾ ಒಳ್ಳೆಯ ದಿನವಾಗಿರುತ್ತದೆ. ಉದ್ಯೋಗಿಗಳಿಗೆ ಪ್ರಗತಿಗೆ ಅವಕಾಶವಿರುತ್ತದೆ. ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.
ವೃಷಭ ರಾಶಿ: ಮಂಗಳವಾರ ಸಾಮಾನ್ಯವಾಗಿ ವೃಷಭ ರಾಶಿಯವರಿಗೆ ತುಂಬಾ ಸಂತೋಷದ ದಿನ. ಹನುಮಂತನ ಕೃಪೆಯಿಂದ ವ್ಯಾಪಾರದಲ್ಲಿ ಲಾಭವಾಗಲಿದೆ. ಯೋಜನೆಗಳು ಪೂರ್ಣಗೊಳ್ಳಲಿವೆ. ಪ್ರಗತಿಯ ಹೊಸ ಹಾದಿ ತೆರೆದುಕೊಳ್ಳುತ್ತದೆ.
ಕರ್ಕಾಟಕ: ಕರ್ಕಾಟಕ ರಾಶಿಯವರಿಗೆ ಇಂದು ಶುಭವಾಗಲಿದೆ. ಭಜರಂಗಬಲಿಯ ಆಶೀರ್ವಾದದಿಂದ ಒಳ್ಳೆಯ ಸುದ್ದಿ ಸಿಗಲಿದೆ. ಕುಟುಂಬ ಸಮೇತ ಪ್ರಯಾಣ ಹೋಗುವ ಸಾಧ್ಯತೆ ಇದೆ.
ತುಲಾ: ತುಲಾ ರಾಶಿಯವರಿಗೆ ಹನುಮಂತನ ಆಶೀರ್ವಾದ ಸಿಗಲಿದೆ. ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಹೊಸ ವಾಹನ ಖರೀದಿ ಮತ್ತು ಆದಾಯದಲ್ಲಿ ಹೆಚ್ಚಳವಾಗಲಿದೆ.
ಧನು ರಾಶಿ: ಧನು ರಾಶಿಗೆ ಇಂದು ಹನುಮಂತನ ಕೃಪೆಯಿಂದ ಹೊಸ ಉದ್ಯೋಗಾವಕಾಶ ದೊರೆಯಲಿದೆ. ಪ್ರಗತಿಯ ಹಾದಿ ತೆರೆದುಕೊಳ್ಳಲಿದೆ. ನಿರುದ್ಯೋಗಿಗಳಿಗೆ ಉದ್ಯೋಗವನ್ನು ಪಡೆಯುವ ಬಲವಾದ ಅವಕಾಶವಿದೆ.
ಮಕರ: ಮಕರ ರಾಶಿಯವರಿಗೆ ಇಂದು ಅನಿರೀಕ್ಷಿತ ಆರ್ಥಿಕ ಲಾಭವಾಗಲಿದೆ. ಸಣ್ಣ ಉದ್ಯಮಿಗಳು ಇಂದು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ.
ಮೀನ: ಮಕ್ಕಳಿಂದ ಸಂತಸದ ಸುದ್ದಿ ಸಿಗಲಿದೆ. ಹೂಡಿಕೆಗೆ ಈ ಸಮಯ ಉತ್ತಮವಾಗಿದೆ. ಹನುಮಂತನ ಕೃಪೆಯಿಂದ ಭೂಮಿ ಖರೀದಿ, ಕಟ್ಟಡ ನಿರ್ಮಾಣ ಸಾಧ್ಯತೆ ಇದೆ.
(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)