ಬಿಗ್ ಬಾಸ್ ಫಿನಾಲೆ ತಲುಪಿ ಕಪ್ ಗೆಲ್ಲುತ್ತಾರೆ ಎನ್ನುತ್ತಿರುವಾಗಲೇ ಜೈಲು ಪಾಲಾದ ಹನುಮಂತು !ಇದೇ ನೋಡಿ ಇವರ ಮೇಲಿನ ಆರೋಪ
ಬಿಗ್ ಬಾಸ್ ಇನ್ನೇನು ಮುಕ್ತಾಯದ ಹಂತ ತಲುಪುತ್ತಿದೆ. ಇನ್ನೇನು ಕೆಲವೇ ವಾರಗಳಲ್ಲಿ ಈ ಸೀಸನ್ ಗೆ ತೆರೆ ಬೀಳಲಿದೆ.
ಇದಾಗಲೇ ಫೈನಲ್ ತಲುಪುವ ಸ್ಪರ್ಧಿ ಯಾರಾಗಿರಬಹುದು ಎನ್ನುವ ಒಂದು ಲೆಕ್ಕಾಚಾರ ನಡೆಯುತ್ತಿದೆ.
ಈ ಪೈಕಿ ಅತಿ ಹೆಚ್ಚು ಮತ ಪಡೆಯುತ್ತಿರುವುದು ಹನುಮಂತು ಎಂದೇ ಹೇಳಲಾಗುತ್ತಿದೆ. ತನ್ನ ಮುಗ್ದ ಸ್ವಭಾವದಿಂದಲೇ ಎಲ್ಲರ ಮನಗೆದ್ದ ಹನುಮಂತು ಕಪ್ ಗೆಲ್ಲುವುದು ಪಕ್ಕಾ ಎಂದೇ ಹೇಳಲಾಗುತ್ತಿದೆ.
ಈ ಮಧ್ಯೆ ಬಿಗ್ ಬಾಸ್ ವೀಕ್ಷಕರಿಗೆ ಶಾಕಿಂಗ್ ಎನ್ನುವಂತ ಸನ್ನಿವೇಶ. ಮುಗ್ದ ಹುಡುಗ ಯಾರ ತಂಟೆ ತಕರಾರಿಗೂ ಹೋಗದ ಹನುಮಂತು ಜೈಲು ಸೇರಿದ್ದಾರೆ.
ವಾರದ ಕಳಪೆ ಯಾರು ಎನ್ನುವ ಆಯ್ಕೆಯಲ್ಲಿ ಹನುಮಂತುಗೆ ಅತಿ ಹೆಚ್ಚು ಮತ ಬಿದ್ದಿದ್ದು, ಕಳಪೆ ಪಟ್ಟ ಹೊತ್ತುಕೊಂಡು ಅವರು ಬಿಗ್ ಬಾಸ್ ಮನೆಯ ಜೈಲು ಸೇರಿದ್ದಾರೆ.
ಈ ವಾರದ ಟಾಸ್ಕ್ ನಲ್ಲಿ ಶುಚಿತ್ವ ಕಾಪಾಡಿಕೊಂಡಿಲ್ಲ, ಟಾಸ್ಕ್ ಸರಿಯಾಗಿ ಆಡಿಲ್ಲ ಎನ್ನುವ ಆಪಾದನೆಯನ್ನೇ ಹನುಮಂತು ಮೇಲೆ ಹೊರಿಸಲಾಗಿದೆ.