ಕನ್ನಡದ ಈ ಸೂಪರ್’ಹಿಟ್ ಸಿನಿಮಾದಲ್ಲಿ ನಟಿಸಿದ್ರು ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ: ಯೋಗರಾಜ್ ಭಟ್ರ ಸಿನಿಮಾ ಅದು!

Sun, 26 May 2024-6:21 pm,

ಸದ್ಯ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಹಾಗೂ ನಟಿ ನತಾಶಾ ಸ್ಟಾಂಕೋವಿಕ್ ವಿಚ್ಛೇದನದ ಸುದ್ದಿ ಭಾರೀ ಸದ್ದು ಮಾಡುತ್ತಿದೆ.

ಈ ವದಂತಿಯ ಬೆನ್ನಲ್ಲೇ ನಟಿ ನತಾಶಾ ಸ್ಟಾಂಕೋವಿಕ್ ಬೇರೊಬ್ಬ ವ್ಯಕ್ತಿಯ ಜೊತೆ ಸುತ್ತಾಡುತ್ತಿರುವುದು ಕಂಡುಬಂದಿದೆ. ಇದರ ಫೋಟೋಸ್ ಇದೀಗ ಎಲ್ಲೆಡೆ ವೈರಲ್ ಆಗಿವೆ.

ಅಲೆಕ್ಸಾಂಡರ್ ಅಲೆಕ್ಸ್ಲಿಕ್ ಎಂಬಾತನ ಜೊತೆ ನತಾಶಾ ಕಾಣಿಸಿಕೊಂಡಿದ್ದಾರೆ. ಇದೇ ವೇಳೆ ಹಾರ್ದಿಕ್ ಜೊತೆ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ವದಂತಿಗಳ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ‘ಥ್ಯಾಂಕ್ಯೂ’ ಎಂದಷ್ಟೇ ಹೇಳಿ ನತಾಶಾ ಅಲ್ಲಿಂದ ಹೊರಟು ಹೋಗಿದ್ದಾರೆ.

ನತಾಶಾ ಸ್ಟಾಂಕೋವಿಕ್ ನಟಿ, ಮಾಡೆಲ್ ಹಾಗೂ ಡ್ಯಾನ್ಸರ್ ಕೂಡ ಹೌದು. ಇನ್ನು ಬಾಲಿವುಡ್’ನಲ್ಲಿ ಮಾತ್ರವಲ್ಲದೆ, ಕನ್ನಡದ ಸಿನಿಮಾವೊಂದರಲ್ಲಿ ನತಾಶಾ ಅಭಿನಯಿಸಿದ್ದಾರೆ

ನತಾಶಾ ಸ್ಟಾಂಕೋವಿಕ್ ಯೋಗರಾಜ್ ಭಟ್ ನಿರ್ದೇಶನದ ದುನಿಯಾ ವಿಜಯ್‌ ಅಭಿನಯದ ‘ದನ ಕಾಯೋನು’ ಸಿನಿಮಾದಲ್ಲಿ ಸೊಂಟ ಬಳುಕಿಸಿ ಕುಣಿದಿದ್ದಾರೆ.

‘ದನ ಕಾಯೋನು’ ಸಿನಿಮಾ 2016ರಲ್ಲಿ ಬಿಡುಗಡೆಯಾಗಿದ್ದು, ದುನಿಯಾ ವಿಜಯ್ ಮತ್ತು ಪ್ರಿಯಾಮಣಿ ಮುಖ್ಯ ಭೂಮಿಕೆಯಲ್ಲಿ ಬಣ್ಣಹಚ್ಚಿದ್ದರು. ಇನ್ನು ಈ ಈ ಸಿನಿಮಾದಲ್ಲಿ ವಿದೇಶದಿಂದ ಬರುವ ಮಹಿಳಾ ಪಶುವೈದ್ಯೆಯಾಗಿ ನತಾಶಾ ಅಭಿನಯಿಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link