ಫ್ಯಾಷನ್ ಶೋಗಾಗಿ ಮಾರ್ಡ್ರನ್ ಡ್ರೇಸ್ ತೊಟ್ರು ಮಾಂಗಲ್ಯ ತೆಗೆಯದ ಹರ್ಶಿಕಾ..! ನಟಿಗೆ ಜನರ ಮೆಚ್ಚುಗೆ
ಹರ್ಷಿಕಾ ಮತ್ತು ಭುವನ ಅಮೆರಿಕಾ ಪ್ರವಾಸದಲ್ಲಿದ್ದಾರೆ. ಅಲ್ಲಿ ಫ್ಯಾಷನ್ ಶೋವೊಂದರಲ್ಲಿ ಭಾಗವಹಿಸಿದ್ದು ಈ ಕುರಿತ ಫೋಟೋಸ್ ಹಂಚಿಕೊಂಡಿದ್ದಾರೆ.
ರೆಡ್ ಕಲರ್ ಉಡುಗೆಯಲ್ಲಿ ಸಖತ್ ಗ್ಲ್ಯಾಮರಸ್ ಆಗಿ ಮಿಂಚಿರುವ ನಟಿ ಹರ್ಷಿಕಾ ಫೋಟೋಸ್ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿವೆ.
ಫ್ಯಾಷನ್ ಡ್ರೆಸ್ ಧರಿಸಿದ್ದರೂ ಸಹ ಮಾಂಗಲ್ಯ ತೆಗೆಯದೇ ಸಂಪ್ರದಾಯ ಮೆರೆದ ನಟಿಯ ನಡೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಆಗಸ್ಟ್ 24ರಂದು ಹರ್ಷಿಕಾ-ಭುವನ್ ನವ ಜೀವನಕ್ಕೆ ಕಾಲಿಟ್ಟರು. ಕೊಡವ ಪದ್ಧತಿಯಂತೆ ಅದ್ದೂರಿಯಾಗಿ ಮದುವೆಯಾದರು.
ಸಧ್ಯ ಹರ್ಷಿಕಾ ಪೂಣಚ್ಚ ಮಾಲಾಶ್ರೀ ನಟನೆಯ ಮಾರಕಾಸ್ತ್ರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಅಲ್ಲದೆ, ಭುವನ್ ನಟಿಸಿ ನಿರ್ದೇಶಿಸಲಿರುವ ಹೊಸ ಸಿನಿಮಾಗೆ ಹರ್ಷಿಕಾ ನಿರ್ಮಾಪಕಿಯಾಗುವ ಮೂಲಕ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.