ಫ್ರೆಂಡ್ಸ್ ಜೊತೆ ಬಾಲಿಯಲ್ಲಿ ಹರ್ಷಿಕಾ ಎಂಜಾಯ್ಮೆಂಟ್..! ಬ್ಯಾಚುಲರ್ ಪಾರ್ಟಿನಾ..?
ನಟಿ ಹರ್ಷಿಕಾ ಬಾಲಿಗೆ ತೆರಳಿದ್ದು, ತಮ್ಮ ಸ್ನೇಹಿತರೊಂದಿಗೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಮದುವೆಗೆ ಕೆಲವೇ ಕೆಲುವು ದಿನಗಳು ಬಾಕಿ ಇರುವಾಗಲೇ ಬಾಲಿಗೆ ಬ್ಯಾಚುಲರ್ ಪಾರ್ಟಿ ಮಾಡೋಕೆ ಹೋಗಿದ್ದಾರೆ ಅಂತ ಅವರ ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ.
ಕೊಡವ ಸಂಪ್ರದಾಯದಂತೆ ಹರ್ಷಿಕಾ-ಭುವನ್ ಅವರು ಆಗಸ್ಟ್ 24ಕ್ಕೆ ವಿರಾಜ್‌ಪೇಟೆಯಲ್ಲಿ ಅದ್ದೂರಿಯಾಗಿ ಮದುವೆಯಾಗಲಿದ್ದಾರೆ.
ಹಸೆಮಣೆ ಏರುವ ಮುಂಚೆಯೇ ನಟಿ ಹರ್ಷಿಕಾ ಸಿಂಗಲ್ ಲೈಫ್ ಎಂಜಾಯ್ ಮಾಡೋಕೆ ಬಾಲಿಗೆ ಸ್ನೇಹಿತರ ಜೊತೆ ಹೋಗಿದ್ದಾರೆ.
ಈ ಕುರಿತು ನಟಿ ಸೋಷಿಯಲ್ ಮೀಡಿಯಾದಲ್ಲಿ ಹಲವಾರು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಬಾಲಿಯ ಸುಂದರ ದ್ವೀಪದಲ್ಲಿ ಸ್ಯಾಂಡಲ್‌ವುಡ್ ಕ್ಯೂಟ್ ಹುಡುಗಿ ಸಖತ್ತಾಗಿ ಕಾಣುತ್ತಿದ್ದಾರೆ.