ನೀವು ಕೂಡಾ ಕನಸಿನಲ್ಲಿ ಕಾಮನ ಬಿಲ್ಲು ಕಂಡಿದ್ದೀರಾ ? ಅದು ಯಾವ ಶಕುನ ಸೂಚಿಸುತ್ತದೆ ತಿಳಿಯಿರಿ..!

Mon, 26 Apr 2021-4:16 pm,

ಕನಸಿನಲ್ಲಿ ಕೆಲವೊಂದು ವಸ್ತುಗಳು ಕಂಡರೆ ಅದು ಶುಭವಾಗಿರುತ್ತದೆಯಂತೆ. ಇನ್ನು ಕೆಲ ವಸ್ತುಗಳು ಕನಸಲ್ಲಿ ಬಂದರೆ ಅದು ಅಶುಭವಂತೆ. ಒಂದು ವೇಳೆ ನಿಮ್ಮ ಕನಸಲಲಿ ನೀವು ಕಾಮನಬಿಲ್ಲು ಕಂಡರೆ ಅದು ಶುಭ ಸಂಕೇತನಾ? ಅಥವಾ ಅಶುಭನಾ ಎಂಬುದನ್ನು ತಿಳಿಯೋಣ.. 

ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಕಾಮನಬಿಲ್ಲು ಕಂಡರೆ ಅದು ಶುಭವಂತೆ. ಇದರರ್ಥ ನಿಮ್ಮ ಜೀವನದಲ್ಲಿ ಸುಖ ಸಮೃದ್ಧಿ ಎದುರಾಗಲಿದೆ ಎಂದು..

ಕನಸಿನಲ್ಲಿ ಕಾಮನಬಿಲ್ಲು ಕಂಡರೆ ಆ ವ್ಯಕ್ತಿಯ ಜೀವನದಲ್ಲಿ ಸಮೃದ್ಧಿ, ಪ್ರಸಿದ್ದಿ ಪ್ರತಿಷ್ಠೆ ಹೆಚ್ಚುತ್ತದೆ ಎಂದರ್ಥ. ಉದ್ಯೋಗದಲ್ಲಿ ಸಫಲತೆ ಸಿಗುವ ಸಂಕೇತವಾಗಿರುತ್ತದೆ. ಯಾರಾದರೂ ಕೆಲಸದ ಹುಡುಕಾಟದಲ್ಲಿದ್ದು, ಅವರ ಕನಸಿನಲ್ಲಿ ಕಾಮನಬಿಲ್ಲು ಕಂಡರೆ ಶೀಘ್ರವೇ ಅವರಿಗೆ ಉದ್ಯೋಗ ಸಿಗಲಿದೆ ಎಂದರ್ಥ. 

ವಿವಾಹಿತ ಪುರುಷರ ಕನಸಲ್ಲಿ ಕಾಮನಬಿಲ್ಲು ಕಂಡರೆ, ಅದು ಶುಭವಂತೆ. ಮುಂಬರುವ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಸಂತೋಷ ಸಿಗಲಿದೆ . ಆದರೆ ವಿವಹಿತ ಮಹಿಳೆಯ ಕನಸಲ್ಲಿ ಕಾಮನಬಿಲ್ಲು ಕಂಡರೆ ಅದು ಅಶುಭವಂತೆ. ಈ ಕನಸು ಬಂದರೆ ಮುಂಬರುವ ದಿನಗಳಲ್ಲಿ ಮಹಿಳೆ ತನ್ನ ಪತಿಯಿಂದ  ದೂರವಿರಬೇಕಾಗುತ್ತದೆಯಂತೆ,.

ZEENEWS TRENDING STORIES

By continuing to use the site, you agree to the use of cookies. You can find out more by Tapping this link