2011ರಲ್ಲಿ ವಿಶ್ವಕಪ್ ಗೆಲ್ಲುತ್ತಿದ್ದಂತೆ… ತಂದೆಯ ಸ್ನೇಹಿತನ ಮಗಳನ್ನೇ ಪಟಾಯಿಸಿ ಮದುವೆಯಾದ ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್’ಮನ್ ಈತ!
ವಿಶೇಷ ಎಂಬಂತೆ ಗೌತಮ್ ಗಂಭೀರ್ ಹೆಸರು ಯಾವೊಂದು ಹುಡುಗಿಯ ಜೊತೆಯೂ ಕೇಳಿಬಂದಿರಲಿಲ್ಲ. ಮಾಧ್ಯಮಗಳಲ್ಲಿ ಹಲವು ವದಂತಿಗಳು ಹಬ್ಬಿದ್ದರೂ ಸಹ, ಗಂಭೀರ್ ಅದಕ್ಕೆಲ್ಲಾ ಪ್ರಾಮುಖ್ಯತೆ ನೀಡಲಿಲ್ಲ. ಆದರೆ ಇವರು ನಿಜವಾಗಿಯೂ ಪ್ರೀತಿಸಿ ಮದುವೆಯಾಗಿದ್ದು, ಅವರ ತಂದೆಯ ಗೆಳೆಯ ಮಗಳನ್ನು.
ನತಾಶಾ ಜೈನ್. ಗೌತಮ್ ಗಂಭೀರ್ ಅವರ ಮುದ್ದಿನ ಮಡದಿ. ಇವರನ್ನು ಕಂಡ ಕ್ಷಣದಲ್ಲೇ ಪ್ರೀತಿಯಲ್ಲಿ ಬಿದ್ದಿದ್ದರಂತೆ ಗೌತಮ್, ಗೌತಮ್ ಗಂಭೀರ್ ಒಂದೊಮ್ಮೆ ತನ್ನ ಮದುವೆಯ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು, 'ನತಾಶಾ ತುಂಬಾ ಸ್ವೀಟ್. ಜೊತೆಗೆ ತುಂಬಾ ಚೆನ್ನಾಗಿ ಅರ್ಥಮಾಡಿಕೊಳ್ಳುವವಳು. ನಮ್ಮ ಮಧ್ಯೆ ಕ್ರಿಕೆಟ್ ಬಗ್ಗೆ ಯಾವುದೇ ಚರ್ಚೆ ನಡೆಯುವುದಿಲ್ಲ. ಅವರಲ್ಲಿ ನನಗೆ ಇಷ್ಟವಾದದ್ದು ಇದೇ ವಿಚಾರ” ಎಂದಿದ್ದಾರೆ.
“ನಾನು ಕ್ರಿಕೆಟ್‌ಗಾಗಿ ಸಾಕಷ್ಟು ಅಭ್ಯಾಸ ಮಾಡುತ್ತೇನೆ. ಅದಕ್ಕಾಗಿಯೇ ನಾನು ಮನೆಗೆ ಬಂದಾಗ ನನ್ನ ಮನೆಯವರು ಅದರ ಬಗ್ಗೆ ಮಾತನಾಡಲು ನಾನು ಬಯಸುವುದಿಲ್ಲ. ಇವೆಲ್ಲದರ ಬಗ್ಗೆ ನತಾಶಾ ಯಾವತ್ತೂ ನನ್ನನ್ನು ಕೇಳುವುದಿಲ್ಲ' ಅಂತ ಹೇಳಿದ್ದದಾರೆ.
ಅಂದಹಾಗೆ ಇವರ ಮದುವೆಗೂ ಮುನ್ನ, ನತಾಶಾಗೆ ಗೌತಮ್ ಕಂಡೀಷನ್ ಹಾಕಿದ್ದರಂತೆ. 2011 ರ ವಿಶ್ವಕಪ್ ನಂತರ ನಾನು ಮದುವೆಯಾಗುವುದು. ಏಕೆಂದರೆ ವಿಶ್ವಕಪ್’ಗೆ ನನ್ನ ಸಂಪೂರ್ಣ ಗಮನವನ್ನು ನೀಡಬೇಕು ಎಂದಿದ್ದರಂತೆ. ಅದಕ್ಕೆ ನತಾಶಾ ಅವರ ಭಾವನೆಗಳನ್ನು ಅರ್ಥಮಾಡಿಕೊಂಡು ಒಪ್ಪಿಗೆ ಸೂಚಿಸಿದ್ದರಂತೆ.
ಸಾಮಾನ್ಯವಾಗಿ ಕ್ರಿಕೆಟ್ ಮತ್ತು ರಾಜಕೀಯ ಕಾರ್ಯಕ್ರಮಗಳಿಂದ ದೂರ ಉಳಿಯುವ ನತಾಶಾ ಸಂದರ್ಶನವೊಂದರಲ್ಲಿ ಮಾತನಾಡಿ, “ಗೌತಮ್ ಗಂಭೀರ್ ಅವರನ್ನು ಭೇಟಿಯಾದ ನಂತರ ಸರಳತೆ ಅಂದ್ರೆ ಏನು ಎಂದು ನನಗೆ ಗೊತ್ತಾಯಿತು?” ಎಂದು ಹೇಳಿದ್ದಾರೆ.
ಅಂದಹಾಗೆ ಗಂಭೀರ್ ಮತ್ತು ನತಾಶಾ ಅವರ ತಂದೆ ಉತ್ತಮ ಸ್ನೇಹಿತರಾಗಿದ್ದು, ಸುಮಾರು 35 ವರ್ಷಗಳ ಅಮೂಲ್ಯ ಸಂಬಂಧ ಹೊಂದಿದ್ದಾರೆ. ಗಂಭೀರ್ ತಂದೆ ದೀಪಕ್ ಟೆಕ್ಸ್ಟ್ಟೈಲ್ ಉದ್ಯಮ ನಡೆಸುತ್ತಿದ್ದರೆ, ನತಾಶಾ ತಂದೆ ರವೀಂದ್ರ ಜೈನ್ ಉದ್ಯಮಿಯಾಗಿದ್ದರು.