`ಪಾರಿಜಾತ` ಹೂವಿನಲ್ಲಿರುವ ಔಷಧೀಯ ಗುಣಗಳ ಬಗ್ಗೆ ತಿಳಿಯಿರಿ
ನವದೆಹಲಿ: ಪ್ರಕೃತಿ ನಮ್ಮ-ನಿಮ್ಮೆಲ್ಲರ ಜೀವನದ ಒಂದು ಪ್ರಮುಖ ಭಾಗವಾಗಿದೆ. ಇಂದು ನಾವು ಅಂತಹ ಒಂದು ಮರದ ಬಗ್ಗೆ ಮಾತನಾಡುತ್ತಿದ್ದೇವೆ. ಅದರ ಹೂವುಗಳು ಬಹಳ ಆಕರ್ಷಕ. ಅದು ನಮಗೆ ಸಾಮಾನ್ಯವಾಗಿ ಸಿಗುವ ಪಾರಿಜಾತ. ಪಾರಿಜಾತವನ್ನು ಪ್ರಜಕ್ತ ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಜನರು ಪಾರಿಜಾತ ಹೂಗಳನ್ನು ಪೂಜೆಗೆ ಮಾತ್ರ ಬಳಸುತ್ತಾರೆ. ಆದರೆ ಅದರ ಗುಣಲಕ್ಷಣಗಳ ಬಗ್ಗೆ ಹಲವರಿಗೆ ತಿಳಿದಿರುವುದಿಲ್ಲ. ಹಲವು ಪ್ರಾಚೀನ ಗ್ರಂಥಗಳಲ್ಲಿ ಪಾರಿಜಾತ ಹೂವಿನ ಉಲ್ಲೇಖವಿದೆ. ಪಾರಿಜಾನತ ಹೂವಿರಲಿ, ಅದರ ಎಲೆಗಳಿರಲಿ ಅಥವಾ ಬೀಜಗಳಿರಲಿ ಎಲ್ಲವೂ ಆರೋಗ್ಯಕ್ಕೆ ಒಳ್ಳೆಯದು. ಆದ್ದರಿಂದ 'ಪಾರಿಜಾತ' ಮರದ ಔಷದೀಯ ಗುಣಗಳ ಬಗ್ಗೆ ತಿಳಿದುಕೊಳ್ಳೋಣ...
(ಎಲ್ಲಾ ಫೋಟೋಗಳ ಕೃಪೆ: Getty Images)
ಪಾರಿಜಾತಕ್ಕೆ ಖಿನ್ನತೆಯನ್ನು ನಿವಾರಿಸುವ ಸಾಮರ್ಥ್ಯವಿದೆ. ಪಾರಿಜಾತ ಎಲೆಗಳ ಚಹಾ ಕುಡಿಯುವುದರಿಂದ ಒತ್ತಡ ಉಂಟಾಗುವುದಿಲ್ಲ.
ಪಾರಿಜಾತ ಎಲೆಗಳ ರಸವನ್ನು ಕುಡಿಯುವ ಮೂಲಕ ಮಲೇರಿಯಾ ರೋಗವನ್ನು ಗುಣಪಡಿಸಲಾಗುತ್ತದೆ.
ಪಾರಿಜಾತ ಆಸ್ತಮಾವನ್ನು ಕೂಡ ನಿವಾರಿಸುತ್ತದೆ. ಪಾರಿಜಾತ ಹೂವುಗಳ ಪುಡಿಯನ್ನು ತಿನ್ನುವುದರಿಂದ ಆಸ್ತಮಾದ ಸಮಸ್ಯೆಯನ್ನು ನಿರ್ಮೂಲನೆ ಮಾಡುತ್ತದೆ.
ಪಾರಿಜಾತ ಎಲೆಗಳ ಕಷಾಯವನ್ನು ಕುಡಿಯುವುದರಿಂದ ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಪಾರಿಜಾತ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಪಾರಿಜಾತ ಹೂವುಗಳ ರಸವನ್ನು ಕುಡಿಯುವುದು ಹೃದ್ರೋಗಕ್ಕೆ ಪ್ರಯೋಜನಕಾರಿ.
ಪಾರಿಜಾತ ಎಲೆಗಳು ಹೊಟ್ಟೆಯ ಹುಳುಗಳಿಂದ ಅಂದರೆ ಜಂತುಹುಳುಗಳಿಂದ ಪರಿಹಾರವನ್ನು ನೀಡುತ್ತವೆ. ಪಾರಿಜಾತ ಎಲೆಗಳ 5 ಮಿಲಿ ರಸವನ್ನು ಸಕ್ಕರೆಯೊಂದಿಗೆ ತೆಗೆದುಕೊಳ್ಳಿ, ಇದು ಹೊಟ್ಟೆಯ ಹುಳುಗಳ ಸಮಸ್ಯೆಯನ್ನು ನಿವಾರಿಸುತ್ತದೆ.
ಒಣ ಕೆಮ್ಮಿಗೂ ಕೂಡ ಪಾರಿಜಾತ ಪ್ರಯೋಜನಕಾರಿಯಾಗಿದೆ. ಪಾರಿಜಾತ ಎಲೆಗಳ ರಸವನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಒಣ ಕೆಮ್ಮು ನಿವಾರಣೆಯಾಗುತ್ತದೆ.
ಪಾರಿಜಾತ ಎಲೆಗಳ ರಸವನ್ನು ಕುಡಿಯುವುದರಿಂದ ಶೀತ ಮತ್ತು ಜ್ವರದ ಸಮಸ್ಯೆ ನಿವಾರಣೆಯಾಗುತ್ತದೆ.
ಮೂಗಿನ ರಕ್ತಸ್ರಾವ ಸಮಸ್ಯೆಯಿರುವವರಿಗೆ ಪಾರಿಜಾತ ಮರ ಪ್ರಯೋಜನಕಾರಿಯಾಗಿದೆ. ಪಾರಿಜಾತ ಮರದ ಬೇರನ್ನು ಅಗಿಯುವುದರಿಂದ ಮೂಗಿನಿಂದ ರಕ್ತಸ್ರಾವವಾಗುವುದನ್ನು ನಿಲ್ಲಿಸುತ್ತದೆ.
ಪಾರಿಜಾತ ಅದ್ಭುತ ಔಷಧೀಯ ಗುಣಗಳನ್ನು ಹೊಂದಿದೆ. ಪಾರಿಜಾತ ಬೀಜಗಳ ಪೇಸ್ಟ್ ಹಚ್ಚುವ ಮೂಲಕ ಗಾಯಗಳನ್ನು ಗುಣಪಡಿಸಲಾಗುತ್ತದೆ.