Health Tips: ಬೂದು ಕುಂಬಳಕಾಯಿ ಸೇವಿಸಿದ್ರೆ ಕಾಯಿಲೆಗಳು ಹತ್ತಿರ ಬರಲ್ಲ!

Mon, 22 Jul 2024-4:46 pm,

ಬೂದು ಕುಂಬಳಕಾಯಿ ಆರೋಗ್ಯದ ಖಜಾನೆ ಎಂದರೆ ತಪ್ಪಲ್ಲ. ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಫಾಸ್ಫರಸ್, ಸತು, ಮೆಗ್ನೀಸಿಯಮ್, ತಾಮ್ರ ಮತ್ತು ಮ್ಯಾಂಗನೀಸ್‌, ನಿಯಾಸಿನ್, ಥಯಾಮಿನ್, ವಿಟಮಿನ್ ಸಿ ಮತ್ತು ರೈಬೋಫ್ಲಾವಿನ್‌ನಂತಹ ವಿಟಮಿನ್‌ಗಳು, ಖನಿಜಗಳು, ಪೋಷಕಾಂಶಗಳು ಹೇರಳವಾಗಿವೆ.

ಶರೀರದಲ್ಲಿ ಉಷ್ಣ, ನೋವು ಕಂಡುಬಂದರೆ ಕುಂಬಳಕಾಯಿ ಗೊಜ್ಜು ತಿಂದರೆ ಬಹಳಷ್ಟು ಪರಿಣಾಮಕಾರಿ. ಮೂತ್ರಕೋಶದಲ್ಲಿ ಕಲ್ಲು, ಸೋಂಕಿನ ಸಮಸ್ಯೆ, ಉರಿಮೂತ್ರವಿದ್ದರೆ ಜ್ಯೂಸ್ ಮಾಡಿಕೊಂಡು ಬೆಳಗ್ಗೆ ಹೊತ್ತು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಕೊಲೆಸ್ಟ್ರಾಲ್ ಸಮಸ್ಯೆಯಿದ್ದರೆ ಪ್ರತಿನಿತ್ಯ ಜ್ಯೂಸ್ ಮಾಡಿ ಅದಕ್ಕೆ ಸ್ವಲ್ಪ ಕಾಳುಮೆಣಸು ಪುಡಿ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ದಿನನಿತ್ಯ ಕುಡಿದರೆ ಕೊಬ್ಬು ಕರಗುತ್ತದೆ.

ಬೂದು ಕುಂಬಳಕಾಯಿಯ ಬೀಜದ ತೈಲದಿಂದ ತಲೆಗೆ ಮಸಾಜ್ ಮಾಡುವುದರಿಂದ ತಲೆನೋವು ನಿವಾರಣೆ ಜೊತೆಗೆ ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ. ನೆನಪಿನ ಶಕ್ತಿ ಸುಧಾರಿಸುತ್ತದೆ. ಕುಂಬಳಕಾಯಿ ಜ್ಯೂಸ್‌ ಸೇವಿಸುವುದರಿಂದ ದಾಹ ನಿವಾರಣೆಯಾಗುವುದು. ಹೊಟ್ಟೆಯಲ್ಲಿ ಹುಳ ತುಂಬಿದ್ದರೆ ಕುಂಬಳಕಾಯಿ ಬೀಜವನ್ನು ಅರೆದು ಸೇವಿಸಿದರೆ ಪರಿಹಾರ ಸಿಗುತ್ತದೆ.

ಬೂದು ಕುಂಬಳಕಾಯಿಯಲ್ಲಿ ಫೈಬರ್ ಹೆಚ್ಚಿರುವುದರಿಂದ ಮಲಬದ್ಧತೆ, ಗ್ಯಾಸ್ ಮತ್ತು ಅಸಿಡಿಟಿಯಂತಹ ಅಜೀರ್ಣ ಸಮಸ್ಯೆಗಳಿರುವವರು ಹೆಚ್ಚು ಬಳಸಬೇಕು. ಇದರಿಂದ ತಯಾರಿಸಿದ ಕೂಷ್ಮಾಂಡ ಲೇಹವನ್ನು ಪ್ರತಿನಿತ್ಯ ಸ್ವಲ್ಪ ಪ್ರಮಾಣದಲ್ಲಿ ಸೇವಿಸುತ್ತಾ ಬಂದರೆ ಶ್ವಾಸಕೋಶದ ಆರೋಗ್ಯಕ್ಕೆ ಒಳ್ಳೆಯದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link