Benefits of Bitter Melon: ಹಾಗಲಕಾಯಿ ಸೇವನೆಯಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ
ಪ್ರತಿದಿನ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ 1 ಲೋಟ ಹಾಗಲಕಾಯಿ ಜ್ಯೂಸ್ ಕುಡಿದರೆ ರಕ್ತದಲ್ಲಿ ಹೆಚ್ಚಾಗಿರುವ ಸಕ್ಕರೆಯ ಅಂಶ 3 ದಿನದಲ್ಲಿ ತಹಬದಿಗೆ ಬರುತ್ತದೆ. ಇದರಲ್ಲಿರುವ ಪೋಷಕಾಂಶಗಳು ಇನ್ಸುಲಿನ್ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ. ಹೀಗಾಗಿ ಮಧುಮೇಹಿಗಳು ನಿಯಮಿತವಾಗಿ ಹಾಗಲಕಾಯಿ ಜ್ಯೂಸ್ ಸೇವಿಸುವುದು ಉತ್ತಮ.
ಕೆಲವೊಮ್ಮೆ ಆಹಾರ ಜೀರ್ಣವಾಗಲು ಹೆಚ್ಚಿನ ಸಮಯ ಬೇಕಾಗುತ್ತದೆ. ಇದರಿಂದ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಉಂಟಾಗುತ್ತದೆ. ಈ ಅಜೀರ್ಣ ವ್ಯಾಧಿ ತೊಂದರೆಗೆ ಹಾಗಲಕಾಯಿಯ ಜ್ಯೂಸ್ ಪರಿಣಾಮಕಾರಿ. ಈ ಜ್ಯೂಸ್ ಹೊಟ್ಟೆ ಸೇರಿದ ಬಳಿಕ ಜೀರ್ಣರಸಗಳನ್ನು ಅಗತ್ಯ ಪ್ರಮಾಣದಲ್ಲಿ ಸ್ರವಿಸಲು ಜಠರಕ್ಕೆ ಪ್ರಚೋದನೆ ನೀಡುತ್ತದೆ. ಪರಿಣಾಮ ಹುಳಿತೇಗು, ಗ್ಯಾಸ್ಟ್ರಿಕ್, ಹೊಟ್ಟೆಯ ಹುಣ್ಣು ಮೊದಲಾದ ತೊಂದರೆಗಳಿಂದ ನಿಮಗೆ ಮುಕ್ತಿ ಸಿಗುತ್ತದೆ.
ಹಾಗಲಕಾಯಿ ಜ್ಯೂಸ್‍ನಲ್ಲಿ ಬೀಟಾ-ಕ್ಯಾರೋಟೀನ್ ಮತ್ತು ವಿಟಮಿನ್ ‘A’ ಪೋಷಕಾಂಶಗಳು ಸಮೃದ್ಧವಾಗಿವೆ. ಇದರ ಸೇವನೆಯಿಂದ ಕಣ್ಣಿಗೆ ಅಗತ್ಯ ಪೋಷಕಾಂಶಗಳು ದೊರೆತು ಕಣ್ಣಿನ ತೊಂದರೆಗಳಿಂದ ರಕ್ಷಣೆ ದೊರೆಯುತ್ತದೆ. ಇದರಲ್ಲಿ ವಿಟಮಿನ್ ‘ಸಿ’ ಮತ್ತು ಆಂಟಿ ಆಕ್ಸಿಡೆಂಟುಗಳು ಉತ್ತಮ ಪ್ರಮಾಣದಲ್ಲಿದ್ದು, ಮಧುಮೇಹದ ಕಾರಣದಿಂದ ಉತ್ಪತ್ತಿಯಾಗುವ ದೃಷ್ಟಿದೋಷಕ್ಕೆ ಪರಿಹಾರ ಸಿಗುತ್ತದೆ. ಹಾಗಲಕಾಯಿಯ ನಿಯಮಿತ ಸೇವನೆಯು ಕಣ್ಣುಗಳ ಉತ್ತಮ ಆರೋಗ್ಯಕ್ಕೆ ಸಹಕಾರಿ.
ಹಾಗಲಕಾಯಿಯಲ್ಲಿ ಫೈಟೋನ್ಯೂಟ್ರಿಯೆಂಟ್‌ಗಳೆಂಬ ಆಂಟಿ ಆಕ್ಸಿಡೆಂಟುಗಳಿದ್ದು, ಇವು ಕೆಟ್ಟ ಕೊಲೆಸ್ಟಾಲ್ ನಿಯಂತ್ರಿಸಲು ಸಹಕಾರಿಯಾಗಿವೆ. ಹಾಗಲಕಾಯಿಯನ್ನು ಆಲಿವ್ ಎಣ್ಣೆಯೊಂದಿಗೆ ತರಕಾರಿ ರೂಪದಲ್ಲಿ ಸೇವಿಸಿದರೆ ನಿಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ನಿವಾರಿಸುವ ಮೂಲಕ ಆರೋಗ್ಯ ವೃದ್ಧಿಸುತ್ತದೆ.
ಪ್ರತಿದಿನ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ 1 ಲೋಟ ಹಾಗಲಕಾಯಿ ಜ್ಯೂಸ್ ಸೇವಿಸುವುದರಿಂದ ರಕ್ತ ಶುದ್ಧಿಯಾಗುತ್ತದೆ. ಚರ್ಮದ ವಿವಿಧ ತೊಂದರೆಗಳು ಮಾಯವಾಗಿ ಕಾಂತಿಯುಕ್ತ ಚರ್ಮ ಪಡೆಯಲು ಸಾಧ್ಯವಾಗುತ್ತದೆ. ಶುದ್ದೀಕರಣಗೊಂಡ ರಕ್ತದ ಮೂಲಕ ಇಡೀ ಶರೀರದ ಆರೋಗ್ಯ ಉತ್ತಮವಾಗುತ್ತದೆ.