Benefits of Coriander for health: ‘ಕೊತ್ತಂಬರಿ ಬೀಜʼ ಸೇವನೆಯಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ
ಆಸಿಡಿಟಿಗೆ ಕೊತ್ತಂಬರಿ ಹೇಳಿ ಮಾಡಿಸಿದ ಔಷಧಿಯಾಗಿದೆ. 2 ಚಮಚ ಕೊತ್ತಂಬರಿ ಬೀಜಕ್ಕೆ 2 ಲೋಟ ನೀರು ಬೆರೆಸಿ 10 ನಿಮಿಷ ಕುದಿಸಿ ಬಳಿಕ ಸೋಸಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆಸಿಡಿಟಿ ದೂರವಾಗುತ್ತದೆ.
ಕೊತ್ತಂಬರಿಗೆ ದೇಹವನ್ನು ತಂಪುಗೊಳಿಸುವ ವಿಶೇಷ ಶಕ್ತಿ ಇದೆ. ಹೀಗಾಗಿ ಹಾಲಿಗೆ ಕೊತ್ತಂಬರಿ ನೀರನ್ನು ಹಾಕಿ ಕುಡಿಯುವುದು ಸಹ ಆರೋಗ್ಯಕ್ಕೆ ಒಳ್ಳೆಯದು.
ಕೊತ್ತಂಬರಿಯನ್ನು ಪುಡಿ ಮಾಡಿ 6 ಲೋಟ ನೀರನ್ನು ಕುದಿಸಿ 3 ಲೋಟಕ್ಕೆ ಇಳಿಸಿ ಸೇವಿಸುವುದರಿಂದ ಬಾಯಿಹುಣ್ಣಿನ ಸಮಸ್ಯೆಯೂ ದೂರವಾಗುತ್ತದೆ. ಮೂಲವ್ಯಾಧಿ ಸಮಸ್ಯೆಗೂ ಇದು ಹೇಳಿ ಮಾಡಿಸಿದ ಕಷಾಯವಾಗಿದೆ.
ಕೊತ್ತಂಬರಿ ಬೀಜದ ಪುಡಿಗೆ ಒಂದು ತುಂಡು ಬೆಲ್ಲ ಹಾಕಿ ಕುದಿಸಿ ಕುಡಿಯುವುದರಿಂದ ಗರ್ಭಿಣಿಯರ ವಾಂತಿ, ವಾಕರಿಕೆ ಕಡಿಮೆಯಾಗುತ್ತದೆ.
ಕೊತ್ತಂಬರಿ ವಿಟಮಿನ್ K, C ಮತ್ತು A ಯಿಂದ ಸಮೃದ್ಧವಾಗಿದೆ. ಇದು ಕೂದಲನ್ನು ಬಲಪಡಿಸಲು ಮತ್ತು ಬೆಳೆಯಲು ಸಹಾಯ ಮಾಡುತ್ತದೆ.