Health Tips: ಬಿಸಿ ಬಿಸಿ ಹಾಲಿಗೆ ಬೆಲ್ಲ ಹಾಕಿ ಕುಡಿದರೆ ಏನಾಗುತ್ತೆ ಗೊತ್ತಾ?
ರಕ್ತಹೀನತೆಯಿಂದ ಬಳಲುವವರು ಬೆಲ್ಲದ ಹಾಲು ಸೇವಿಸಿದರೆ ತುಂಬಾ ಉತ್ತಮ. ಇದರಿಂದ ರಕ್ತಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ. ಮಹಿಳೆಯರಿಗೆ ಆರೋಗ್ಯಕ್ಕೆ ಇದು ವರದಾನ ಅಂತಾನೇ ಹೇಳಬಹುದು.
ಬಿಸಿ ಬಿಸಿ ಹಾಲಿಗೆ ಬೆಲ್ಲ ಸೇರಿಸಿ ಸೇವಿಸಿದರೆ ಸ್ಥೂಲಕಾಯ ನಿವಾರಣೆಯಾಗುತ್ತದೆ. ಬೆಲ್ಲದಲ್ಲಿರುವ ಔಷಧೀಯ ಗುಣಗಳಿಂದ ಶರೀರದಲ್ಲಿರುವ ಕೊಬ್ಬು ಕಡಿಮೆಯಾಗುತ್ತದೆ. ಹೀಗಾಗಿ ದೇಹದ ತೂಕ ಕಡಿಮೆಯಾಗುತ್ತದೆ.
ಬೆಲ್ಲದ ಹಾಲಿನಲ್ಲಿರುವ ಪೋಷಕಾಂಶಗಳಿಂದ ತಲೆಗೂದಲು ಹೊಳಪಾಗುತ್ತದೆ. ಕೂದಲು ಉದುರುವುದು ನಿಂತು ಹೋಗುತ್ತದೆ, ತಲೆಹೊಟ್ಟು ನಿವಾರಣೆಯಾಗುತ್ತದೆ.
ಋತುಸ್ರಾವದ ಸಮಯದಲ್ಲಿ ಮಹಿಳೆಯರಿಗೆ ಕಾಡುವ ಹೊಟ್ಟೆ ನೋವು, ಬೆನ್ನು ನೋವು ಮುಂತಾದ ಸಮಸ್ಯೆಗಳಿಗೆ ಬೆಲ್ಲದ ಹಾಲು ರಾಮಬಾಣವಾಗಿ ಕೆಲಸ ಮಾಡುತ್ತದೆ.
ಬೆಲ್ಲದ ಹಾಲಿನಲ್ಲಿ ನೈಸರ್ಗಿಕ ಆಂಟಿ ಬಯೋಟಿಕ್ ಮತ್ತು ಆಂಟಿ ವೈರಲ್ ಗುಣಗಳಿವೆ. ಇವು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ವೃದ್ಧಾಪ್ಯದಲ್ಲಿ ಕಾಡುವ ಕೀಲು ನೋವು ಸಮಸ್ಯೆಗೆ ಬೆಲ್ಲದ ಹಾಲಿನ ಸೇವನೆ ಉತ್ತಮ. ಇದರಿಂದ ನೋವು ಕಡಿಮೆಯಾಗಿ ಕೀಲುಗಳು ಸದೃಢವಾಗುತ್ತವೆ.