Health Benefits of Peppermint: ಪುದೀನಾ ಸೇವನೆಯಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ

Thu, 21 Sep 2023-4:52 pm,

ಪುದೀನಾದಲ್ಲಿರುವ ಪೋಷಕಾಂಶ, ಮ್ಯಾಂಗನೀಸ್​, ವಿಟಮಿನ್​ A ಹಾಗೂ C, ಕಬ್ಬಿಣಾಂಶ ಸೇರಿದಂತೆ ಹಲವಾರು ಅಂಶಗಳು ದೇಹದ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಿವೆ.

ಹೊಟ್ಟೆನೋವಿನಿಂದ ಬಳಲುತ್ತಿರುವವರು ಬಿಸಿನೀರಿಗೆ 1 ಚಮಚ ಜೇನುತುಪ್ಪ ಹಾಗೂ 1 ಚಮಚ ಪುದೀನಾ ರಸವನ್ನು ಸೇರಿಸಿ ಕುಡಿಯಬಹುದಾಗಿದೆ. ಇದರಿಂದ ನಿಮ್ಮ ಹೊಟ್ಟೆಯ ಆರೋಗ್ಯ ಸುಧಾರಿಸಲಿದೆ.

ಕಾಳು ಮೆಣಸು, ಬ್ಲಾಕ್ ಸಾಲ್ಟ್​ ಹಾಗೂ ಪುದೀನಾ ರಸದಿಂದ ಚಹಾ ತಯಾರಿಸಿ ಸೇವಿಸುವುದರಿಂದ ಜ್ವರ ಹಾಗೂ ಕೆಮ್ಮು ಹೋಗಲಾಡಿಸಬಹುದು. ತಲೆಗೆ ಪುದೀನಾ ರಸ ಹಚ್ಚಿಕೊಳ್ಳುವುದರಿಂದ ತಲೆನೋವು ಸಹ ಶಮನವಾಗಲಿದೆ.

ಅಸ್ತಮಾ ಸಮಸ್ಯೆ ಉಳ್ಳವರು ಮತ್ತು ಮಾಂಸಖಂಡಗಳಲ್ಲಿ ನೋವು ಹೊಂದಿರುವವರು ಪುದೀನಾ ಸೇವನೆ ಮಾಡಬೇಕು. ತ್ವಚೆಯ ಆರೋಗ್ಯ ಕಾಪಾಡಲು ಹಾಗೂ ನೀಳ ಕೇಶರಾಶಿಗಾಗಿ ಪುದೀನಾ ಸೇವಿಸಬೇಕು.

2 ಹನಿ ಪುದೀನಾ ರಸಕ್ಕೆ ಸ್ವಲ್ಪ ಜೇನುತುಪ್ಪವನ್ನ ಸೇರಿಸಿ ಕುಡಿಯುವುದರಿಂದ ವಾಂತಿಯ ಸಮಸ್ಯೆಗೆ ಮುಕ್ತಿ ಸಿಗಲಿದೆ. ಅತಿಯಾದ ಪುದೀನಾ ಸೇವನೆಯಿಂದ ಮೂತ್ರಪಿಂಡಗಳಿಗೆ ಹಾನಿ ಉಂಟಾಗಬಹುದು. ಹೀಗಾಗಿ ಎಚ್ಚರಿಕೆ ವಹಿಸುವುದು ಸೂಕ್ತ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link