Health Tips: ಸಕ್ಕರೆ ಖಾಯಿಲೆ ಇದ್ದವರಿಗೆ ರಾಮಬಾಣ ನಕ್ಷತ್ರ ಹಣ್ಣು!
ನಕ್ಷತ್ರ ಹಣ್ಣಿನಲ್ಲಿ ವಿಟಮಿನ್ ʼBʼ, ʼCʼ, ಸೋಡಿಯಂ, ಪೊಟ್ಯಾಸಿಯಂ, ಫೈಬರ್, ಕ್ಯಾಲ್ಸಿಯಂ ಸಮೃದ್ಧವಾಗಿವೆ. ನಿಯಮಿತವಾಗಿ ಈ ಹಣ್ಣು ಸೇವಿಸಿದ್ರೆ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯುತ್ತೀರಿ.
ನಕ್ಷತ್ರ ಹಣ್ಣು ಹೃದಯದ ಆರೋಗ್ಯಕ್ಕೆ ಸಹಕಾರಿಯಾಗಿದೆ. ಇದರಲ್ಲಿರುವ ಕ್ಯಾಲ್ಸಿಯಂ, ಪೊಟ್ಯಾಸಿಯಂ ಅಂಶಗಳು ರಕ್ತದ ಹರಿವನ್ನು ಸುಧಾರಿಸುತ್ತದೆ. ಸ್ಟಾರ್ ಫ್ರುಟ್ ಹೃದಯವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಾರ್ಟ್ ಅಟ್ಯಾಕ್‌ನಂತಹ ಅಪಾಯದಿಂದ ನಿಮ್ಮನ್ನು ಪಾರು ಮಾಡುತ್ತದೆ.
ಮಧುಮೇಹಿಗಳು ನಕ್ಷತ್ರ ಹಣ್ಣನ್ನು ಸೇವಿಸಬಹುದು. ಇದು ರಕ್ತದಲ್ಲಿನ ಇನ್ಸುಲಿನ್ ಮಟ್ಟವನ್ನು ಸುಧಾರಿಸಲು ಸಹಕಾರಿಯಾಗಿದೆ. ಸ್ಟಾರ್ ಫ್ರುಟ್‌ನಲ್ಲಿ ಫೈಬರ್ ಅಂಶ ಸಮೃದ್ಧವಾಗಿದ್ದು, ಮಧುಮೇಹವನ್ನು ನಿಯಂತ್ರಿಸುತ್ತದೆ.
ನಕ್ಷತ್ರ ಹಣ್ಣಿನಲ್ಲಿರುವ ಫೈಬರ್ ಅಂಶವು ಜೀರ್ಣಕ್ರಿಯೆಗೆ ಉಪಯುಕ್ತವಾಗಿದೆ. ಫೈಬರ್ ಅಂಶವು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ ಈ ಹಣ್ಣನ್ನು ನಿಯಮಿತವಾಗಿ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.
ನಕ್ಷತ್ರ ಹಣ್ಣಿನಲ್ಲಿ ವಿಟಮಿನ್ ʼCʼ ಸಮೃದ್ಧವಾಗಿದ್ದು, ದೇಹದಲ್ಲಿನ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಇದರಲ್ಲಿ ಹೇರಳ ನೀರಿನಾಂಶವಿರುವ ಕಾರಣ ದೇಹ ನಿರ್ಜಲೀಕರಣವಾಗದಂತೆ ತಡೆಯುತ್ತದೆ.