Health Tips: ಮಲಗುವ ಮುನ್ನ ಹೆಚ್ಚು ನೀರು ಕುಡಿಯುತ್ತೀರಾ? ಹಾಗಾದ್ರೆ ತಪ್ಪದೇ ಈ ಸುದ್ದಿ ಓದಿ
ಮಲಗುವ ಮುನ್ನ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸೇವಿಸಬಾರದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಏಕೆಂದರೆ ಇದು ಅನೇಕ ರೀತಿಯಯಲ್ಲಿ ನಿಮ್ಮ ಆರೋಗ್ಯಕ್ಕೆ ಹಾನಿಯನ್ನುಂಟುಮಾಡುತ್ತದೆ. ಮಲಗುವ ಮುನ್ನ ಹೆಚ್ಚು ನೀರು ಕುಡಿಯುವುದರಿಂದ ಆಗುವ ಅನಾನುಕೂಲಗಳ ಬಗ್ಗೆ ತಿಳಿದುಕೊಳ್ಳಿರಿ.
ರಾತ್ರಿ ಹೆಚ್ಚು ನೀರು ಕುಡಿದರೆ ನಿದ್ದೆಯಿಂದ ಎದ್ದು ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತದೆ. ಇದರಿಂದ ಸುಖವಾಗಿ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ. ಒಟ್ಟಾರೆ ಆರೋಗ್ಯಕ್ಕೆ ಶಾಂತಿಯುತ ನಿದ್ರೆ ಮುಖ್ಯ. ನಿದ್ರೆ ಸರಿಯಾಗಿ ಆಗದಿದ್ದಲ್ಲಿ ಮರುದಿನ ನೀವು ಆಯಾಸ ಮತ್ತು ಆಲಸ್ಯವನ್ನು ಎದುರಿಸಬೇಕಾಗುತ್ತದೆ.
ಮಲಗುವ ಮುನ್ನ ಹೆಚ್ಚು ನೀರು ಕುಡಿದರೆ ಹೊಟ್ಟೆ ಭಾರವಾಗುತ್ತದೆ. ಇದು ಕೂಡ ಒಂದು ರೀತಿಯಲ್ಲಿ ಅಸ್ವಸ್ಥತೆಗೆ ಕಾರಣವಾಗಬಹುದು. ಅಷ್ಟೇ ಅಲ್ಲ ನಿದ್ರೆಗೆ ಅಡಚಣೆ ಉಂಟು ಮಾಡಬಹುದು.
ಒಮ್ಮೆಲೇ ಅತಿಯಾಗಿ ನೀರು ಕುಡಿಯುವುದು ಮೂತ್ರಪಿಂಡಗಳಿಗೆ ಒಳ್ಳೆಯದಲ್ಲ. ಮಿತಿ ಮೀರಿ ನೀರು ಸೇವಿಸಿದರೆ ಕಿಡ್ನಿ ಮೇಲೆ ಹೆಚ್ಚುವರಿ ಒತ್ತಡ ಉಂಟಾಗುತ್ತದೆ. ಇದರಿಂದ ಕಿಡ್ನಿಗಳಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು.
ನೀವು ನಿಂತು ನೀರು ಕುಡಿಯುವ ಬದಲು ಕುಳಿತು ಕುಡಿಯುವುದು ಯಾವಾಗಲೂ ಉತ್ತಮ. ಅದೇ ರೀತಿ ಕಾಯಿಸಿ ಆರಿಸಿದ ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಉತ್ತಮ. ಬೆಳಗ್ಗೆ ಎದ್ದಕೂಡಲೇ ಒಂದು ಲೋಟ ಬಿಸಿ ನೀರು ಕುಡಿಯುವುದರಿಂದ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಪ್ರತಿದಿನಕ್ಕೆ 4 ರಿಂದ 5 ಲೀಟರ್ ನೀರು ಕುಡಿಯುವುದು ಉತ್ತಮವೆಂದು ತಜ್ಞರು ಸಲಹೆ ನೀಡಿದ್ದಾರೆ.