Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಇವುಗಳನ್ನು ಸೇವಿಸಿ
ಬೆಳ್ಳುಳ್ಳಿ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ವಾರದಲ್ಲಿ 6ಕ್ಕಿಂತ ಹೆಚ್ಚಿನ ಬೆಳ್ಳುಳ್ಳಿ ಎಸಳುಗಳನ್ನು ತಿಂದರೆ ಕ್ಯಾನ್ಸರ್ ಸಮಸ್ಯೆ ಕಮ್ಮಿ ಆಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ನಿಯಮಿತವಾಗಿ ಬೆಳ್ಳುಳ್ಳಿ ಸೇವಿಸಬೇಕು.
ಅಣಬೆಯು ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಬಿಳಿ ರಕ್ತಕಣಗಳ ಕಾರ್ಯ ಚಟುವಟಿಕೆಗಳನ್ನು ಆರೋಗ್ಯ ಪೂರ್ಣವಾಗಿರಿಸುತ್ತದೆ. ಅಣಬೆ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.
ಗೆಣಸಿನಲ್ಲಿರುವ ವಿಟಮಿನ್ ʼಎʼ ತ್ವಚೆಯನ್ನು ಆರೋಗ್ಯಪೂರ್ಣವಾಗಿರಿಸುತ್ತದೆ. ಇದರ ಜೊತೆಗೆ ಕ್ಯಾರೆಟ್ ಮತ್ತು ಕುಂಬಳಕಾಯಿ ಕೂಡ ಸೇವಿಸಬಹುದು.
ಚಳಿಗಾಲದಲ್ಲಿ ಸಿಗುವ ಕಿತ್ತಳೆಯಂಥ ಹಣ್ಣುಗಳನ್ನು ಯಥೇಚ್ಛವಾಗಿ ಸೇವಿಸಬೇಕು. ವಿಟಮಿನ್ ʼಸಿʼ ಸಮೃದ್ಧವಾಗಿರುವ ಈ ಹಣ್ಣುಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಶಕ್ತಿ ಇರುತ್ತದೆ.
ಶುಂಠಿಗೆ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ನಿಮ್ಮನ್ನು ಕಾಪಾಡುವ ಶಕ್ತಿ ಇದೆ. ಬಿಸಿಯಾದ ಪಾನೀಯಗಳ ಜೊತೆ ಇದನ್ನು ಸೇರಿಸಿ ಕುಡಿದರೆ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.