ಎಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೂ ರಾಮಬಾಣ ಈ ತರಕಾರಿ..! ಹೀಗೆ ಸೇವಿಸಿದರೆ ಯಾವ ರೋಗವೂ ಭಾದಿಸೋದಿಲ್ಲ

Mon, 28 Oct 2024-5:55 pm,

ಪ್ರತಿದಿನ ಸಲಾಡ್ ರೂಪದಲ್ಲಿ ಮೂಲಂಗಿ ಸೇವಿಸುತ್ತಿದ್ದರೆ ಜೀರ್ಣಕ್ರಿಯೆ ಅಥವಾ ಮಲಬದ್ಧತೆ ಸಮಸ್ಯೆ ಬರುವುದಿಲ್ಲ. ಇದರಲ್ಲಿ ಸಮೃದ್ಧ ಪ್ರಮಾಣದ ಕರಗುವ ಮತ್ತು ಕರಗದ ನಾರಿನಂಶಗಳಿವೆ. ಇವು ಜೀರ್ಣಕ್ರಿಯೆಯನ್ನು ಸುಲಭಗೊಳಿಸುವ ಜೊತೆಗೆ ಪಿತ್ತರಸದ ಉತ್ಪಾದನೆ ನಿಯಂತ್ರಿಸುವ ಮೂಲಕ ಯಕೃತ್ ಮತ್ತು ಪಿತ್ತಕೋಶಗಳನ್ನು ರಕ್ಷಿಸುತ್ತದೆ. ಈ ನಾರಿನಂಶಗಳು ಜೀರ್ಣಾಂಗದಲ್ಲಿ ಸಾಕಷ್ಟು ನೀರಿನಂಶವನ್ನು ಉಳಿಸಿಕೊಂಡು ಮಲಬದ್ಧತೆಯಾಗದಂತೆ ತಡೆಯುತ್ತವೆ.

ಕೆಂಪು ಮೂಲಂಗಿಗಳಲ್ಲಿ ವಿಟಮಿನ್ E, A, C, B6, ಮತ್ತು K ಸಮೃದ್ಧವಾಗಿವೆ. ಪ್ರತಿಯೊಂದು ಪೋಷಕಾಂಶವೂ ನಮ್ಮ ದೇಹಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಪ್ರಯೋಜನಕಾರಿ. ಮೂಲಂಗಿ ಎಲೆಗಳು ಬೇರುಗಳಿಗಿಂತ ಹೆಚ್ಚು ಪ್ರೋಟೀನ್, ಕ್ಯಾಲ್ಸಿಯಂ, ಆಸ್ಕೋರ್ಬಿಕ್ ಆಮ್ಲ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ.

ಮೂಲಂಗಿಗಳಲ್ಲಿ ಉತ್ತಮ ಪ್ರಮಾಣದ ಆಂಥೋಸೈಯಾನಿನ್(anthocyanins)ಗಳಿದ್ದು, ಇವು ಹೃದಯದ ಕಾರ್ಯಕ್ಷಮತೆ ಸರಿಯಾದ ಕ್ರಮದಲ್ಲಿರಲು ನೆರವಾಗುತ್ತವೆ. ಈ ಮೂಲಕ ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ. ಇದರಲ್ಲಿರುವ ಅಧಿಕ ಪ್ರಮಾಣದ ವಿಟಮಿನ್ C, ಫೋಲಿಕ್ ಆಮ್ಲ ಮತ್ತು ಫ್ಲೇವನಾಯ್ಡುಗಳು ಹೃದಯದ ಆರೋಗ್ಯವನ್ನು ವೃದ್ಧಿಸುತ್ತವೆ.

ಮೂಲಂಗಿ ನಮ್ಮ ದೇಹಕ್ಕೆ ಅಗತ್ಯ ಪ್ರಮಾಣದ ಪೊಟ್ಯಾಸಿಯಂ ಒದಗಿಸುತ್ತದೆ, ಇದು ನಿಮ್ಮ ರಕ್ತದೊತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ರಕ್ತ ಪರಿಚಲನೆಯನ್ನು ನಿಯಂತ್ರಣದಲ್ಲಿರಿಸುತ್ತದೆ, ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಮೂಲಂಗಿ ನಿಮಗೆ ಅಗತ್ಯ ಆಹಾರ. ಆಯುರ್ವೇದದ ಪ್ರಕಾರ ಮೂಲಂಗಿಯು ರಕ್ತವನ್ನು ತಂಪುಗೊಳಿಸುವ ಪರಿಣಾಮ ಬೀರುತ್ತದೆ.

ಮೂಲಂಗಿಯಲ್ಲಿ ಅಧಿಕ ಪ್ರಮಾಣದ ಚಇರುವ ಕಾರಣ ಇದು ನೆಗಡಿ ಮತ್ತು ಕೆಮ್ಮಿನಿಂದ ನಿಮ್ಮನ್ನು ರಕ್ಷಿಸುತ್ತದೆ. ಇದು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ. ಇದು ಹಾನಿಕಾರಕ ಫ್ರೀರ್‍ಯಾಡಿಕಲ್ ಕಣಗಳು, ಉರಿಯೂತ ಎದುರಾಗುವಿಕೆ ಮತ್ತು ಆರಂಭಿಕ ವಯಸ್ಸಾಗುವಿಕೆಯನ್ನು ನಿಯಂತ್ರಿಸುವ ಮೂಲಕ ಆರೋಗ್ಯವನ್ನು ಕಾಪಾಡುತ್ತದೆ.

ಮೂಲಂಗಿಯು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಒಣ ಮತ್ತು ಬಿರುಕು ಬಿಟ್ಟ ಚರ್ಮವನ್ನು ಗುಣಪಡಿಸುತ್ತದೆ ಮತ್ತು ಸೋಂಕನ್ನು ತಡೆಯುತ್ತದೆ. ಇದು ನಮ್ಮ ರಕ್ತದಲ್ಲಿರುವ ಕೆಂಪು ರಕ್ತಕಣಗಳಿಗೆ ಎದುರಾಗುವ ಘಾಸಿಯನ್ನು ನಿಯಂತ್ರಿಸುತ್ತದೆ. ಈ ಮೂಲಕ ರಕ್ತಕ್ಕೆ ಆಮ್ಲಜನಕವನ್ನ ಕೊಂಡೊಯ್ಯುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link