Coconut Water Health Benefits: ಎಳನೀರು ಸೇವನೆಯಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ
ನಿಯಮಿತವಾಗಿ ಎಳನೀರು ಸೇವನೆಯಿಂದ ನೀವ ಅನೇಕ ರೋಗಗಳಿಂದ ದೂರವಿರಬಹುದು. ಎಳನೀರು ರಕ್ತದಲ್ಲಿರುವ ಗ್ಲುಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ದೇಹವು ಡಿಹೈಡ್ರೇಶನ್ ಆಗುವುದನ್ನು ತಪ್ಪಿಸುತ್ತದೆ. ಸಕ್ಕರೆ ಬೆರೆಸಿದ ಇತರ ಹಣ್ಣಿನ ಪಾನೀಯಗಳಿಗಿಂತ ಎಳನೀರು ಬಹಳ ಒಳ್ಳೆಯದು.
ವ್ಯಾಯಾಮದ ಬಳಿಕ ಎಳನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಎಳನೀರು ರಕ್ತದೊತ್ತಡವನ್ನು ನಿಯಂತ್ರಿಸಿ ದೇಹದ ಪೊಟ್ಯಾಷಿಯಂ ಅಂಶ ಕಡಿಮೆ ಮಾಡಲು ಸಹಾಯಮಾಡುತ್ತದೆ. ಇದು ನೈಸರ್ಗಿಕವಾಗಿ ಕಡಿಮೆ ಕ್ಯಾಲರಿ ಹೊಂದಿದ್ದು, ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.
ಗ್ಯಾಸ್ಟ್ರಿಕ್ ಸಮಸ್ಯೆಗೂ ಎಳನೀರು ಉತ್ತಮ ಮದ್ದಾಗಿದೆ. ಖನಿಜ ಮತ್ತು ಪೊಟ್ಯಾಸಿಯಂ ಹೇರಳವಾಗಿರುವ ಎಳನೀರು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.
ಮೂತ್ರಪಿಂಡ ಮತ್ತು ಹೊಟ್ಟೆಯ ಉರಿ ಸಮಸ್ಯೆ ಹೊಂದಿರುವವರು ನಿಯಮಿತವಾಗಿ ಎಳನೀರು ಸೇವಿಸಬೇಕು. ಅಜೀರ್ಣದೊಂದಿಗೆ ಮಲಬದ್ಧತೆ ಇರುವವರು ನಿತ್ಯವೂ ಎಳನೀರು ಸೇವನೆ ಮಾಡಬೇಕು.
ಮಲಗುವ ಮೊದಲು 1 ಲೋಟ ಎಳನೀರು ಕುಡಿದರೆ ಒತ್ತಡ ನಿವಾರಣೆ ಆಗುವುದು ಮತ್ತು ಮನಸ್ಸು ಶಾಂತವಾಗುವುದು. ದೇಹದಲ್ಲಿನ ವಿಷಕಾರಿ ಅಂಶವು ಹೊರಗೆ ಹಾಕಲು ಮತ್ತು ಮೂತ್ರಕೋಶ ಶುಚಿಗೊಳಿಸಲು ಎಳನೀರು ಸಹಕಾರಿ.