Cucumber Health Benefits: ಬೇಸಿಗೆಯಲ್ಲಿ ಸೌತೆಕಾಯಿ ಸೇವಿಸಿದ್ರೆ ಅನೇಕ ಆರೋಗ್ಯ ಲಾಭಗಳಿವೆ
ಸೌತೆಕಾಯಿಯಲ್ಲಿ ವಿಟಮಿನ್ A, B 1, B 6, C, ಪೊಟ್ಯಾಸಿಯಮ್, ಫಾಸ್ಫರಸ್, ಕಬ್ಬಿಣ ಅಂಶಗಳಿದ್ದು, ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ.
ಬೇಸಿಗೆಯಲ್ಲಿ ನಮ್ಮ ದೇಹದ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಪ್ರತಿದಿನ ಸೌತೆಕಾಯಿ ಸೇವನೆ ಮಾಡಿದ್ರೆ ದೇಹಕ್ಕೆ ಬೇಕಾದ ನೀರಿನಂಶವನ್ನು ಇದು ಒದಗಿಸುತ್ತದೆ, ಇದು ದೇಹದಲ್ಲಿರುವ ತ್ಯಾಜ್ಯವನ್ನು ಹೊರಗೆ ಹಾಕಲು ನೆರವಾಗುತ್ತದೆ.
ಬೇಸಿಗೆಯಲ್ಲಿ ಅನೇಕರನ್ನು ಮಲಬದ್ಧತೆ ಸಮಸ್ಯೆ ಕಾಡುತ್ತದೆ. ಊರಿಯೂತ, ಶರೀರದಲ್ಲಿ ಉರಿ ಕಂಡು ಬಂದರೆ ಸೌತೆಕಾಯಿ ಸೇವನೆ ಒಳ್ಳೆಯದು.
ಸೌತೆಕಾಯಿಯಲ್ಲಿ ವಿಟಮಿನ್ B, ಸಕ್ಕರೆ ಹಾಗೂ ಎಲೆಕ್ಟ್ರೋಲೈಟ್ ಅಂಶವಿರುತ್ತದೆ. ಇದು ತಲೆನೋವು ಕಡಿಮೆ ಮಾಡಲು ಸಹಕಾರಿ. ಬೆಳಗ್ಗೆ ಎದ್ದಕೂಡಲೇ ನಿಮಗೆ ತಲೆನೋವು ಅಥವಾ ಆಲಸ್ಯ ಕಾಣಿಸಿಕೊಂಡರೆ ರಾತ್ರಿ ಮಲಗುವ ವೇಳೆ ಸೌತೆಕಾಯಿ ಸೇವಿಸಿರಿ.
ಪ್ರತಿದಿನವೂ ನಿಯಮಿತವಾಗಿ ಸೌತೆಕಾಯಿ ಸೇವನೆ ಮಾಡುವುದರಿಂದ ದೇಹದಲ್ಲಿರುವ ಯೂರಿಕ್ ಆಮ್ಲದ ಮಟ್ಟ ನಿಯಂತ್ರಣದಲ್ಲಿರುತ್ತದೆ.