Health Tips: ಅಡುಗೆಯಲ್ಲಿ ಬಳಸುವ ಚಕ್ರಮೊಗ್ಗಿನ ಆರೋಗ್ಯಕರ ಪ್ರಯೋಜನಗಳು
ಚಕ್ರಮೊಗ್ಗನ್ನು ಏಲಕ್ಕಿ, ಬೇ ಎಲೆ, ಶುಂಠಿ, ದಾಲ್ಚಿನಿ, ಮೆಣಸು ಮುಂತಾದ ಮಸಾಲೆ ಪದಾರ್ಥದೊಂದಿಗೆ ಮಿಶ್ರಣ ಅಡುಗೆ ಮಾಡಬಹುದು.
ಚಕ್ರಮೊಗ್ಗು ಅಥವಾ ಸ್ಟಾರ್ ಹೂವಿನ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯುತ್ತೀರಿ. ಇದರ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಣೆಯಾಗುತ್ತದೆ.
ಚಕ್ರಮೊಗ್ಗು ಸೇವನೆಯಿಂದ ಅಜೀರ್ಣ ಸಮಸ್ಯೆ ಕಡಿಮೆಯಾಗುತ್ತದೆ. ಇದು ಚಯಾಪಚಯವನ್ನು ಉತ್ತಮಪಡಿಸುತ್ತದೆ.
ಚಕ್ರಮೊಗ್ಗು ಶಿಲೀಂದ್ರ ಸೋಂಕಿನ ವಿರುದ್ಧ ಹೋರಾಡುತ್ತದೆ. ಇದು ಹಲವಾರು ಕಾಯಿಲೆಗಳಿಂದ ನಿಮಗೆ ರಕ್ಷಣೆ ನೀಡುತ್ತದೆ.
ಚಕ್ರಮೊಗ್ಗು ಜಂತು ಹುಳುಗಳನ್ನು ಕೊಲ್ಲುತ್ತದೆ. ಇದು ನಿದ್ರಾಜನಕ ಗುಣವನ್ನು ಹೊಂದಿದ್ದು, ಶೀತದಿಂದಲೂ ನಿಮಗೆ ಪರಿಹಾರವನ್ನು ನೀಡುತ್ತದೆ.