Health Tips: ಆಯುಷ್ ಪದ್ಧತಿ ಬಳಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಕ್ವಾಥ ಅಥವಾ ಜೋಶಾಂದಾ ಕಷಾಯ ಉತ್ತಮ ಆಯ್ಕೆಯಾಗಿದೆ. ಈ ಕಷಾಯ ತಯಾರಿಸಲು ಬೇಕಾಗುವ ಸಾಮಗ್ರಿಗಳ ಬಗ್ಗೆ ಇಲ್ಲಿದೆ ಮಾಹಿತಿ...
ಒಣಗಿದ ತುಳಸಿ ಎಲೆ - 4 ಭಾಗ ದಾಲ್ಚಿನ್ನಿ - 2 ಭಾಗ ಒಣಶುಂಠಿ - 2 ಭಾಗ ಕರಿಮೆಣಸು - 1 ಭಾಗ
ಮೇಲಿನ ನಾಲ್ಕು ಪದಾರ್ಥಗಳನ್ನು ಚೆನ್ನಾಗಿ ಪುಡಿಮಾಡಿ ಗಾಜಿನ ಬಾಟಲಿಯಲ್ಲಿ ಶೇಖರಿಸಿಕೊಳ್ಳಬೇಕು. 1/4 ಚಮಚ ಕಷಾಯದ ಪುಡಿಯನ್ನು 150 ಮಿಲಿ ನೀರಿನಲ್ಲಿ 5-10 ನಿಮಿಷ ಕುದಿಸಿ ಸೋಸಿ ದಿನಕ್ಕೆ 1 ಬಾರಿ ಕುಡಿಯಬೇಕು. ಅಗತ್ಯವಿದ್ದಲ್ಲಿ ಬೆಲ್ಲ, ಲಿಂಬೆರಸ ಅಥವಾ ಒಣದ್ರಾಕ್ಷಿಯನ್ನು ಬೆರೆಸಬಹುದು.
1/2 ಚಮಚ ಅಶ್ವಗಂಧ ಪುಡಿಯನ್ನು ಜೇನುತುಪ್ಪ ಅಥವಾ ಬಿಸಿ ಹಾಲಿನೊಂದಿಗೆ ದಿನಕ್ಕೆ ಒಂದು ಬಾರಿ ಸೇವಿಸಬೇಕು. ನಿಯಮಿತವಾಗಿ ಈ ಕಷಾಯ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಇದರ 2-3 ಹನಿಗಳನ್ನು ಟಿಶ್ಯು ಪೇಪರ್ ಅಥವಾ ಕರವಸ್ತ್ರಕ್ಕೆ ಹಾಕಿ ಆಗಾಗ ವಾಸನೆಯನ್ನು ತೆಗೆದುಕೊಳ್ಳಬೇಕು. ಕುದಿಯುವ ನೀರಿಗೆ 2 ಹನಿ ಹಾಕಿ ಆವಿಯನ್ನು ತೆಗೆದುಕೊಳ್ಳಬೇಕು.