Soaked Almonds Benefits: ನೆನಸಿದ ಬಾದಾಮಿ ಸೇವಿಸುವುದರ ಅದ್ಭುತ ಪ್ರಯೋಜನಗಳು
ಒಣ ಬಾದಾಮಿ ಸೇವಿಸುವುದಕ್ಕಿಂತ ನೆನೆಸಿಟ್ಟು ಸೇವಿಸಿದ್ರೆ ಜೀರ್ಣಿಸಿಕೊಳ್ಳುವುದು ಸುಲಭ. ನೆನೆಸಿಟ್ಟ ಬಾದಾಮಿ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಅಲ್ಲದೇ ಪೋಷಕಾಂಶ ಹೀರಿಕೊಳ್ಳಲು ಹೆಚ್ಚಿನ ಸಹಾಯ ಸಿಗುತ್ತದೆ. ಈ ಪೋಷಕಾಂಶಗಳು ಜೀರ್ಣಕ್ರಿಯೆ ಉತ್ತೇಜಿಸುವ ಕಿಣ್ವಗಳ ಉತ್ಪಾದನೆಗೆ ಪ್ರಚೋದನೆ ನೀಡುತ್ತವೆ. ಪರಿಣಾಮ ಜೀರ್ಣಕ್ರಿಯೆ ಸುಲಭ ಮತ್ತು ಪರಿಪೂರ್ಣವಾಗುತ್ತದೆ.
ಬಾದಾಮಿಗಳಲ್ಲಿ ವಿಟಮಿನ್ E ಸಮೃದ್ಧವಾಗಿದೆ. ಈ ವಿಟಮಿನ್ E ನಮ್ಮ ಚರ್ಮ ಮತ್ತು ಕೂದಲಿನ ಪೋಷಣೆಗೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶ. ಬಾದಾಮಿಯಲ್ಲಿರುವ ವಿಟಮಿನ್ E ನಿಮ್ಮ ಚರ್ಮವನ್ನು ನಯವಾಗಿ ಮತ್ತು ಸೊಂಪಾಗಿಸಲು ನೆರವಾಗುತ್ತದೆ.
ಚರ್ಮಕ್ಕೆ ಬಾದಾಮಿ ಎಣ್ಣೆ ಬಳಸುವುದರಿಂದಲೂ ಹೆಚ್ಚಿನ ಪ್ರಯೋಜನವಿದೆ. ಕೂದಲಿನ ಸಮಸ್ಯೆಗಳ ವಿರುದ್ಧ ಹೋರಾಡಲು ಬಾದಾಮಿ ನೆರವಾಗುತ್ತದೆ. ವಿಶೇಷವಾಗಿ ಕೂದಲು ಉದುರುವಿಕೆ ತೊಂದರೆ ಇರುವ ವ್ಯಕ್ತಿಗಳಿಗೆ ಬಾದಾಮಿ ಎಣ್ಣೆ ಸಹಕಾರಿಯಾಗಿದೆ.
ಬಾದಾಮಿಯು ಮೆದುಳಿನ ಕ್ಷಮತೆ ಹೆಚ್ಚಿಸುತ್ತದೆ. ಪ್ರತಿದಿನ ಬೆಳಗ್ಗಿನ ಆಹಾರವಾಗಿ ಬಾದಾಮಿ ಸೇವಿಸುವ ವ್ಯಕ್ತಿಗಳ ಮೆದುಳಿನ ಕ್ಷಮತೆ ಉಳಿದವರಿಗಿಂತ ಹೆಚ್ಚಿರುತ್ತದಂತೆ. ಬಾದಾಮಿಯಲ್ಲಿರುವ ವಿಟಮಿನ್ E ಮೆದುಳಿನ ತಾರ್ಕಿಕ, ಸ್ಮರಣಾ ಮತ್ತು ಚಿಂತನಾ ಸಾಮರ್ಥ್ಯ ಹೆಚ್ಚಿಸುತ್ತದೆ.
ನಮ್ಮ ಆರೋಗ್ಯಕ್ಕೆ ಉತ್ತಮ ಕೊಲೆಸ್ಟ್ರಾಲ್ ಬೇಕು. ಇದರಲ್ಲಿ ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್‍ಗಳಿವೆ(HDL & LDL). ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಲು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಲು ಬಾದಾಮಿ ನೆರವಾಗುತ್ತವೆ.