ಮುಂದಿನ 2 ದಿನ ಈ ಭಾಗಗಳಲ್ಲಿ ಭರ್ಜರಿ ಮಳೆ-ಜಲಪ್ರಳಯದ ಭೀತಿ: ಗುಡುಗು ಮಿಂಚು ಸಹಿತ ಬಿರುಗಾಳಿ ಬೀಸುವ ಮುನ್ನೆಚ್ಚರಿಕೆ
ಪಾಶ್ಚಿಮಾತ್ಯ ಅಡಚಣೆಯಿಂದಾಗಿ ಹಲವೆಡೆ ಗಾಳಿ ಮಳೆ ಬೀಳಲಾರಂಭಿಸಿದೆ. ಹವಾಮಾನ ವರದಿಯನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ ಇಂದಿನಿಂದ ಅಂದರೆ ಶುಕ್ರವಾರದಿಂದ ದೇಶದ ಹಲವು ಭಾಗಗಳಲ್ಲಿ ಭಾರೀ ಮಳೆ ಬೀಳಲಿದೆ.
ಮುಂದಿನ 6 ದಿನಗಳವರೆಗೆ 17 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸ್ಥಿರವಾಗಿರುತ್ತದೆ.
ಖಾಸಗಿ ಹವಾಮಾನ ವೆಬ್‌ಸೈಟ್ ಸ್ಕೈಮೆಟ್ ವೆದರ್ ಪ್ರಕಾರ, ವಾಯುವ್ಯ ಭಾರತದಲ್ಲಿ ಮತ್ತೊಂದು ಪಾಶ್ಚಿಮಾತ್ಯ ಅಡಚಣೆಯು ಸಕ್ರಿಯವಾಗುತ್ತಿದೆ. ಇದು ಅಕ್ಟೋಬರ್ 22 ರಂದು ವಾಯುವ್ಯ ಭಾರತವನ್ನು ತಲುಪುವ ಸಾಧ್ಯತೆಯಿದೆ. ಈ ಕಾರಣದಿಂದಾಗಿ, ರಾಜಸ್ಥಾನ, ಪಂಜಾಬ್, ಹರಿಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಧಾರಾಕಾರ ಮಳೆಯ ಜೊತೆಗೆ ಶೀತ ಗಾಳಿ ರಭಸವಾಗಿ ಬೀಸಲಿದೆ.
ಮುಂದಿನ 24 ಗಂಟೆಗಳ ಕಾಲ ಕೇರಳ ಮತ್ತು ಲಕ್ಷದ್ವೀಪದಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಕರಾವಳಿ ಆಂಧ್ರಪ್ರದೇಶ, ಕರಾವಳಿ ಕರ್ನಾಟಕ, ತಮಿಳುನಾಡು, ಸಿಕ್ಕಿಂ ಮತ್ತು ಈಶಾನ್ಯ ಭಾರತದಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ.
ಅಕ್ಟೋಬರ್ 21 ಮತ್ತು 22 ರಂದು ಪಶ್ಚಿಮ ರಾಜಸ್ಥಾನದಲ್ಲಿ ಅಲ್ಲಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ಲಕ್ಷದ್ವೀಪ, ಆಗ್ನೇಯ ಅರಬ್ಬಿ ಸಮುದ್ರ ಮತ್ತು ಮಧ್ಯ ಅರಬ್ಬಿ ಸಮುದ್ರದಲ್ಲಿ ಇನ್ನೆರಡು-ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದ್ದುಮ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.