Hebah Patel : ʼಅಧ್ಯಕ್ಷʼನ ಗೊಂಬೆಗೆ ಬರ್ತ್ ಡೇ ಸಂಭ್ರಮ, ವಯಸ್ಸು ಎಷ್ಟು ಗೊತ್ತಾ..!
2014ರಲ್ಲಿ ಬಿಡುಗಡೆಯಾದ ಶರಣ್ ನಟನೆಯ ʼಅಧ್ಯಕ್ಷʼ ಸಿನಿಮಾ ಮೂಲಕ ಹೆಬ್ಬಾ ಪಟೇಲ್ ಸಿನಿರಂಗಕ್ಕೆ ಕಾಲಿಟ್ಟರು.
ಹೆಬ್ಬಾ ನಟಿಸಿದ ಮೊದಲು ಸಿನಿಮಾ ಅಧ್ಯಕ್ಷ ಯಶಸ್ಸು ಕಂಡಿತು. ಈ ಸಿನಿಮಾದಲ್ಲಿ ಹಳ್ಳಿ ಹುಡುಗಿ ಲುಕ್‌ನಲ್ಲಿ ಹೆಬ್ಬಾ ಕಾಣಿಸಿಕೊಂಡಿದ್ದರು.
1989 ರಲ್ಲಿ ನಟಿ ಹೆಬ್ಬಾ ಪಟೇಲ್ ಮುಂಬೈನಲ್ಲಿ ಹುಟ್ಟಿದರು. ಇಂದು ಅವರಿಗೆ ಈಗ 34ನೇ ಬರ್ತ್ಡೇ ಸಂಭ್ರಮ. ಫ್ಯಾನ್ಸ್, ಸ್ನೇಹಿತರು, ನಟ, ನಟಿಯರು ವಿಶ್ ಮಾಡ್ತಿದಾರೆ.
ಅಧ್ಯಕ್ಷ ಸಿನಿಮಾ ಹೆಬ್ಬಾಗೆ ಸಾಕಷ್ಟು ಮೈಲೇಜ್ ತಂದು ಕೊಟ್ಟಿತು. ಇದೀಗ ಅವರು ಕಾಲಿವುಡ್, ಟಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ʼಕುಮಾರಿ 21Fʼ ಮೂಲಕ ಹೆಬ್ಬಾ ಟಾಲಿವುಡ್‌ಗೆ ಪ್ರವೇಶ ಮಾಡಿದ್ರು. ಈ ಸಿನಿಮಾ ಮೂಲಕ ತೆಲುಗು ಪ್ರೇಕ್ಷಕರಿಗೆ ಹೆಬ್ಬಾ ಹತ್ತಿರವಾದರು.
ಸಿನಿಮಾಗಳಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಹೆಬ್ಬಾ ಸೌಂದರ್ಯಕ್ಕೆ ಸಾಕಷ್ಟು ಫ್ಯಾನ್ಸ್ ಪಾಲೋಯಿಂಗ್ ಇದೆ.