ನಿಮ್ಮ ದುರ್ಬಲ ಕೂದಲನ್ನು ಸ್ಟ್ರಾಂಗ್ ಆಗಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್
ಬದಲಾದ ವಾತಾವರಣ, ಧೂಳು, ಮಾಲಿನ್ಯ, ಒತ್ತಡದ ಜೀವನಶೈಲಿ ಹೀಗೆ ಕೂದಲು ಉದುರುವಿಕೆ, ಕೂದಲು ದುರ್ಬಲಗೊಳ್ಳುವಿಕೆಗೆ ಹಲವು ಕಾರಣಗಳಿರಬಹುದು. ಆದರಿದು ಅತಿ ಚಿಕ್ಕ ವಯಸ್ಸಿನಲ್ಲಿಯೇ ಬೋಳು ತಲೆ ಸಮಸ್ಯೆಗೆ ಪ್ರಮುಖ ಕಾರಣವಾಗಬಹುದು. ಆದರೆ, ಕೆಲವು ಮನೆಮದ್ದುಗಳ ಸಹಾಯದಿಂದ ಈ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು. ಅಂತಕ ಕೆಲವು ಮನೆಮದ್ದುಗಳೆಂದರೆ...
ಕೂದಲು ದುರ್ಬಲಗೊಳ್ಳಲು ಈ ಒತ್ತಡಭರಿತ ಜೀವನಶೈಲಿ ಒಂದು ಬಹಳ ಮುಖ್ಯ ಕಾರಣ. ನಿಯಮಿತವಾಗಿ ಕೂದಲಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡುವುದರಿಂದ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಕೂದಲುದುರುವಿಕೆಗೆ ದೇಹದಲ್ಲಿನ ಪೋಷಕಾಂಶಗಳ ಕೊರತೆಯೂ ಕಾರಣ. ಇದನ್ನು ತಪ್ಪಿಸಲು ನಿಮ್ಮ ದೈನಂದಿನ ಆಹಾರದಲ್ಲಿ ಪ್ರೋಟೀನ್ ಮತ್ತು ವಿಟಮಿನ್‌ಗಳನ್ನು ಸೇರಿಸುವುದು ಉತ್ತಮ. ಇದು ಕೂದಲ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ.
ಈರುಳ್ಳಿಯಲ್ಲಿ ಆಂಟಿಮೈಕ್ರೊಬಿಯಲ್ ಮತ್ತು ಉರಿಯೂತ ನಿವಾರಕ ಅಂಶಗಳು ಕಂಡುಬರುತ್ತವೆ. ಹಾಗಾಗಿ, ಈರುಳ್ಳಿ ರಸವನ್ನು ಬಳಸುವುದರಿಂದ ಇದು ಕೂದಲನ್ನು ಬೇರುಗಳಿಂದ ಬಲಗೊಳಿಸುತ್ತದೆ.
ದೇಹದ ಕೊಬ್ಬನ್ನು ಕಡಿಮೆ ಮಾಡುವಲ್ಲಿ ತುಂಬಾ ಪ್ರಯೋಜನಕಾರಿ ಆಗಿರುವ ಗ್ರೀನ್ ಟೀ ಯನ್ನು ಹೇರ್ ಮಾಸ್ಕ್ ಬಲಸುವುದರಿಂದ ಇದು ಕೂದಲ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ.
ಮೆಂತ್ಯ ಬೀಜದಲ್ಲಿ ಪ್ರೋಟೀನ್, ಕಬ್ಬಿಣ ಮತ್ತು ನಿಕೋಟಿನಿಕ್ ಆಮ್ಲ ಕಂಡು ಬರುತ್ತದೆ. ಇದು ಕೂಡಲನ್ನು ಬೇರುಗಳಿಂದ ಬಲಪಡಿಸುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.