WhatsApp ಸ್ಕ್ಯಾಮ್ ಕರೆಗಳನ್ನು ಈ ರೀತಿ ಸುಲಭವಾಗಿ ಕಂಡು ಹಿಡಿಯಿರಿ

Fri, 08 Mar 2024-3:17 pm,

ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್‌ನಲ್ಲಿಯೂ ಸ್ಕ್ಯಾಮರ್‌ಗಳ ಹಾವಳಿ ಹೆಚ್ಚಾಗಿದೆ. ಇದನ್ನು ತಪ್ಪಿಸಲು ವಾಟ್ಸಾಪ್‌ನಲ್ಲಿ ಅಪರಿಚಿತ ಸಂಖ್ಯೆಯಿಂದ ಕರೆ ಬಂದರೆ ಎಚ್ಚರದಿಂದ ಇರುವುದು ಬಹಳ ಮುಖ್ಯ. ವಾಸ್ತವವಾಗಿ, ಸ್ಕ್ಯಾಮರ್‌ಗಳು ತಮ್ಮ ನೈಜ ಗುರುತನ್ನು ಮರೆಮಾಡಲು ಈ ರೀತಿಯ ಸಂಖ್ಯೆಗಳನ್ನು ಬಳಸುತ್ತಾರೆ. 

ಪ್ರಸ್ತುತ, ಸಾಮಾನ್ಯ ಕರೆಗಳಂತೆಯೇ ವಾಟ್ಸಾಪ್ ಕರೆಯೂ ಕೂಡ ಹೆಚ್ಚು ಜನಪ್ರಿಯವಾಗುತ್ತಿದೆ. ಆದರೆ, ಯಾರಾದರೂ ನಿಮಗೆ ಅಪರಿಚಿತ ಸಂಖ್ಯೆಯಿಂದ ವಾಟ್ಸಾಪ್‌ನಲ್ಲಿ ಕರೆ ಮಾಡಿ ನಿಮ್ಮ ವೈಯಕ್ತಿಕ ಅಥವಾ ಬ್ಯಾಂಕ್ ಮಾಹಿತಿಯನ್ನು ಕೇಳಿದರೆ, ಅಂತಕ ಕರೆಗಳ ಬಗ್ಗೆ ಜಾಗರೂಕರಾಗಿರಿ. ಅದಕ್ಕೂ ಮೊದಲು ಅಪರಿಚಿತ ಸಂಖ್ಯೆಯಿಂದ ಕರೆ ಸ್ವೀಕರಿಸುವ ಮೊದಲು ಸ್ವಲ್ಪ ಯೋಚಿಸಿ. ವಾಟ್ಸಾಪ್ ಸ್ಕ್ಯಾಮ್ ಕರೆಗಳನ್ನು  ಪತ್ತೆಹಚ್ಚಲು ಇಲ್ಲಿವೆ ಸುಲಭ ಮಾರ್ಗ. 

ವಾಟ್ಸಾಪ್‌ನಲ್ಲಿ ಕರೆ ಮಾಡಿ ನೀವು ಬಹುಮಾನ ಗೆದ್ದಿದ್ದೀರಿ, ನಿಮ್ಮ ಖಾತೆ ಅಪಾಯದಲ್ಲಿದೆ ಎಂದು ಹೇಳುವವರ ಬಗ್ಗೆ ವಿಶೇಷವಾಗಿ ಜಾಗರೂಕರಾಗಿರಿ. ಈ ರೀತಿ ಹೇಳಿ ನಿಮ್ಮ ಮಾಹಿತಿಯನ್ನು ಪಡೆಯುವ ಮೂಲಕ ವಂಚಕರು ನಿಮ್ಮನ್ನು ವಂಚನೆಯ ಜಾಲದಲ್ಲಿ ಬೀಳಿಸಬಹುದು. 

ಅಪರಿಚಿತ ವ್ಯಕ್ತಿಯಿಂದ ಸ್ವೀಕರಿಸಿದ ವಾಟ್ಸಾಪ್ ಕರೆಯಲ್ಲಿ ಧ್ವನಿಯ ಗುಣಮಟ್ಟದ ಬಗ್ಗೆ ವಿಶೇಷವಾಗಿ ಗಮನಹರಿಸಿ. ಸಾಮಾನ್ಯವಾಗಿ ಸ್ಕ್ಯಾಮರ್‌ಗಳು ಕರೆಗಳಲ್ಲಿ ಧ್ವನಿ ಗುಣಮಟ್ಟವನ್ನು ಕಳಪೆಯಾಗಿರಿಸುತ್ತಾರೆ. ಇಲ್ಲವೇ ಅಂತಹ ಕರೆಯಲ್ಲಿ ವ್ಯಕ್ತಿಯ ಧ್ವನಿ  ರೋಬೋಟ್‌ನಂತೆ ಧ್ವನಿಸುತ್ತದೆ. 

ವಾಟ್ಸಾಪ್ ಕರೆ ಮಾಡುವಾಗ ಯಾರಾದರೂ ಲಿಂಕ್ ಕಳುಹಿಸಿ ಅದರ ಮೇಲೆ ಕ್ಲಿಕ್ ಮಾಡಿ ಎಂದು ಕೇಳಿದರೆ ಅದು ವಂಚಕರ ಜಾಲವಾಗಿರಬಹುದು. ವಾಸ್ತವವಾಗಿ, ಇಂತಹ ಅನುಮಾನಾಸ್ಪದ ಲಿಂಕ್‌ಗಳು ನಿಮ್ಮನ್ನು ನಕಲಿ ವೆಬ್‌ಸೈಟ್‌ಗೆ (ಫಿಶಿಂಗ್ ವೆಬ್‌ಸೈಟ್) ಕೊಂಡೊಯ್ಯಬಹುದು. ಇಲ್ಲವೇ, ಅಂತಹ ಲಿಂಕ್‌ಗಳು ನಿಮ್ಮ  ಫೋನ್‌ನಲ್ಲಿ ಮಾಲ್‌ವೇರ್ ಡೌನ್‌ಲೋಡ್ ಮಾಡಬಹುದು. ಇದರಿಂದ ನಿಮ್ಮ ಖಾತೆಯೇ ಖಾಲಿಯಾಗಬಹುದು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link