FD Interest Rate: ಈ 5 ದೊಡ್ಡ ಬ್ಯಾಂಕ್‌ಗಳಲ್ಲಿ ಎಫ್‌ಡಿ ಮೇಲೆ ಸಿಗುತ್ತೆ 8%ಕ್ಕಿಂತ ಹೆಚ್ಚಿನ ಬಡ್ಡಿ
ನಮ್ಮಲ್ಲಿ ಹೆಚ್ಚಿನ ಜನ ಸುರಕ್ಷಿತ ಯೋಜನೆ ಎಂದು ಬ್ಯಾಂಕ್ ಎಫ್‌ಡಿಗಳಲ್ಲಿ ಹಣ ಹೂಡಿಕೆ ಮಾಡುತ್ತಾರೆ. ಕೆಲವು ಬ್ಯಾಂಕ್‌ಗಳು ಹಿರಿಯ ನಾಗರೀಕರಿಗೆ ಎಫ್‌ಡಿ ಮೇಲೆ 8% ಕ್ಕಿಂತ ಹೆಚ್ಚಿನ ಬಡ್ಡಿಯನ್ನು ನೀಡುತ್ತಿವೆ. ಈ ಬ್ಯಾಂಕ್‌ಗಳಲ್ಲಿ ಮೂರು ವರ್ಷಗಳಲ್ಲಿ ಪಕ್ವವಾಗುವ ಎಫ್‌ಡಿಗಳ ಮೇಲೆ ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿ ದರವನ್ನು ನೀಡಲಾಗುತ್ತದೆ. ಆದಾಗ್ಯೂ, ಈ ಬಡ್ಡಿದಾರಗಳು 2 ಕೋಟಿ ರೂ.ಗಳಿಗಿಂತ ಕಡಿಮೆ ಠೇವಣಿಗಳ ಮೇಲೆ ಮಾತ್ರ ಅನ್ವಯಿಸುತ್ತದೆ. ಹಾಗಿದ್ದರೆ, ಯಾವ ಬ್ಯಾಂಕ್‌ಗಳಲ್ಲಿ ಎಫ್‌ಡಿಗಳ ಮೇಲೆ ಹೆಚ್ಚಿನ ಬಡ್ಡಿ ನೀಡಲಾಗುತ್ತದೆ ಎಂದು ನೋಡೋಣ...
ಡಿಸಿಬಿ ಬ್ಯಾಂಕ್‌ಗಳಲ್ಲಿ 25 ತಿಂಗಳಿಗಿಂತ ಹೆಚ್ಚು ಮತ್ತು 37 ತಿಂಗಳಿಗಿಂತ ಕಡಿಮೆ ಅವಧಿಗೆ ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರೀಕರಿಗೆ 8.35% ಬಡ್ಡಿಯನ್ನು ನೀಡಲಾಗುತ್ತಿದೆ. ಆದಾಗ್ಯೂ, ಬ್ಯಾಂಕ್ 37 ತಿಂಗಳ ಎಫ್‌ಡಿ ಮೇಲೆ 8.5% ಬಡ್ಡಿದರವನ್ನು ನೀಡುತ್ತಿದೆ.
IndusInd ಬ್ಯಾಂಕ್ 33 ತಿಂಗಳ ಅಂದರೆ 2 ವರ್ಷ 9 ತಿಂಗಳು ಮತ್ತು 39 ತಿಂಗಳ ಅಂದರೆ 3 ವರ್ಷ 3 ತಿಂಗಳ ಅವಧಿಯವರೆಗೆ ಎಫ್‌ಡಿ ಯೋಜನೆಯಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರೀಕರಿಗೆ ಶೇ. 8ರಷ್ಟು ಬಡ್ಡಿಯನ್ನು ನೀಡುತ್ತಿದೆ.
ಯೆಸ್ ಬ್ಯಾಂಕ್ ಮೂರು ವರ್ಷದಿಂದ 5ವರ್ಷಗಳವರೆಗೆ ಪಕ್ವವಾಗುವ ಎಫ್‌ಡಿಗಳಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರೀಕರಿಗೆ 8% ಬಡ್ಡಿಯನ್ನು ಮತ್ತು 18 ರಿಂದ 24 ತಿಂಗಳಿಗಿಂತ ಕಡಿಮೆ ಅವಧಿಯ ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರೀಕರಿಗೆ 8.25% ಬಡ್ಡಿಯನ್ನು ಪಾವತಿಸುತ್ತದೆ.
ಬಂಧನ್ ಬ್ಯಾಂಕ್ 3 ವರ್ಷಕ್ಕಿಂತ ಹೆಚ್ಚು ಮತ್ತು ಐದು ವರ್ಷಕ್ಕಿಂತ ಕಡಿಮೆ ಅವಧಿಗೆ ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರೀಕರಿಗೆ 7.75% ಬಡ್ಡಿಯನ್ನು ನೀಡುತ್ತಿದೆ. ಇದೇ ವೇಳೆ 500 ದಿನಗಳವರೆಗೆ ಎಫ್‌ಡಿ ಹೂಡಿಕೆ ಮಾಡುವ ಹಿರಿಯ ನಾಗರಿಕರಿಗೆ 8.35% ಬಡ್ಡಿಯನ್ನು ಪಾವತಿಸಲಾಗುತ್ತದೆ.
ಐಡಿಎಫ್‌ಸಿ ಫಸ್ಟ್ ಬ್ಯಾಂಕ್ 751 ರಿಂದ 1095 ದಿನಗಳವರೆಗೆ ಎಂದರೆ ಮೂರು ವರ್ಷಗಳಲ್ಲಿ ಪಕ್ವವಾಗುವ ಎಫ್‌ಡಿಗಳಲ್ಲಿ ಹೂಡಿಕೆ ಮಾಡಲು ಇಚ್ಛಿಸುವ ಹಿರಿಯ ನಾಗರೀಕರಿಗೆ 7.75% ಬಡ್ಡಿದರವನ್ನು ನೀಡುತ್ತಿದೆ.