ಇಲ್ಲಿ ಪತಿಯು ಗರ್ಭಿಣಿ ಪತ್ನಿಯನ್ನು ಹೊತ್ತು ಕೆಂಡದ ಮೇಲೆ ನಡಿತಾರೆ, ಕಾರಣ ತಿಳಿದರೆ ಶಾಕ್ ಆಗ್ತೀರಾ!
ವಾಸ್ತವವಾಗಿ ಚೀನೀ ಸಂಸ್ಕೃತಿಯಲ್ಲಿ (China Culture) ಒಂದು ಪದ್ಧತಿ ಇದೆ. ಇಲ್ಲಿ ಬೆಂಕಿಯನ್ನು ಅಂದರೆ ನಾವು ಸಾಮಾನ್ಯವಾಗಿ ಹೇಳುವಂತೆ ಕೆಂಡವನ್ನು ಸುಮಾರು 5-6 ಮೀಟರ್‌ಗಳವರೆಗೆ ಹಾಕಲಾಗುತ್ತದೆ. ಗಂಡಂದಿರು ತಮ್ಮ ಗರ್ಭಿಣಿ ಪತ್ನಿಯರನ್ನು ಎತ್ತಿಕೊಂಡು ಈ ಕೆಂಡದ ಮೇಲೆ ನಡೆಯುತ್ತಾರೆ.
ಕೆಂಡದ ಮೇಲೆ ನಡೆಯುವುದು ಎಂದರೆ ಒಂದು ಕ್ಷಣ ಎದೆ ಝಲ್ ಎಂದೆನಿಸುತ್ತದೆ. ಅಂತಹದರಲ್ಲಿ ಗರ್ಭಿಣಿ ಪತ್ನಿಯನ್ನು ಹೊತ್ತು ಅದರ ಮೇಲೆ ನಡೆಯುವುದು ಯಾವುದೇ ಸಾಹಸಕ್ಕೂ ಕಡಿಮೆಯಿಲ್ಲ. ಅದೇನೇ ಇದ್ದರೂ, ಬಹುತೇಕ ಎಲ್ಲಾ ಚೀನೀ ಪುರುಷರು ಅದನ್ನು ಮಾಡುವುದು ಅಗತ್ಯವೆಂದು ಪರಿಗಣಿಸುತ್ತಾರೆ. ಪತಿಯು ಗರ್ಭವತಿ ಪತಿಯನ್ನು ಹೊತ್ತು ಕೆಂಡದ ಮೇಲೆ ನಡೆಯುವುದರಿಂದ ಪತ್ನಿಯು ಮಗುವಿಗೆ ಜನ್ಮ ನೀಡುವ ಸಂದರ್ಭದಲ್ಲಿ ಆಕೆಯ ಹೆರಿಗೆ ನೋವು ಕಡಿಮೆಯಾಗುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.
ಗರ್ಭಾವಸ್ಥೆಯಲ್ಲಿ (Pregnancy) ಮಗುವಿನ ತಾಯಿಯ ದೇಹದಲ್ಲಿ 9 ತಿಂಗಳವರೆಗೆ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಇದರಿಂದಾಗಿ ಮಹಿಳೆ ಮೂಡ್ ಸ್ವಿಂಗ್ ಸೇರಿದಂತೆ ಇತರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರೊಂದಿಗೆ, ಆಕೆ ಗರ್ಭಧಾರಣೆಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಸಹ ಎದುರಿಸಬೇಕಾಗುತ್ತದೆ ಎಂಬುದನ್ನು ಚೀನೀ ಪುರುಷರು ಎಂದು ನಂಬುತ್ತಾರೆ.
ಇದನ್ನೂ ಓದಿ- ನೀವು ಮನೆಯಿಂದ ಹೊರಡುವ ವೇಳೆ ಇವುಗಳನ್ನು ಕಂಡರೆ ತುಂಬಾ ಶುಭವಂತೆ!
ಗಂಡಂದಿರು ತಮಗೆ ತಂದೆಯ ಸಂತೋಷವನ್ನು ನೀಡುತ್ತಿರುವ ತಮ್ಮ ಪತ್ನಿಯು ಗರ್ಭಾವಸ್ಥೆಯಲ್ಲಿ ಅನುಭವಿಸುವ ಹಲವು ಸಮಸ್ಯೆಗಳಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುವುದು ನಮ್ಮ ಸಾಮಾಜಿಕ ಜವಾಬ್ದಾರಿಯಾಗುತ್ತದೆ ಎಂದು ಹೇಳುತ್ತಾರೆ. ಗರ್ಭಿಣಿ ಪತ್ನಿಯನ್ನು ಹೊತ್ತು ಸುಡುವ ಕೆಂಡದ ಮೇಲೆ ನಡೆಯುವುದು ಪತಿಯು ಪತ್ನಿಯ ಮೇಲೆ ಅಚಲವಾದ ಪ್ರೀತಿಯನ್ನು ಹೊಂದಿದ್ದಾರೆ ಎಂಬುದರ ಪ್ರತೀಕ ಎಂದು ಇಲ್ಲಿನ ಪುರುಷರು ನಂಬುತ್ತಾರೆ. ಅದೇ ಸಮಯದಲ್ಲಿ, ಆತನು ಎಲ್ಲಾ ಸುಖ ಮತ್ತು ದುಃಖಗಳಲ್ಲಿ ನಿನ್ನ ಜೊತೆಯಾಗಿರುತ್ತೇನೆ ಎಂಬ ಭರವಸೆ ನೀಡುವ ಮಾರ್ಗ ಇದು ಎಂದವರು ಹೇಳುತ್ತಾರೆ.
ಇದನ್ನೂ ಓದಿ- Vegetable Peelings: ಈ ತರಕಾರಿಯ ಸಿಪ್ಪೆಯಲ್ಲಿದೆ ಭರಪೂರ ಪೋಷಕಾಂಶ
ಚೀನಾದಲ್ಲಿ 21 ನೇ ಶತಮಾನದಲ್ಲಿ ಮುಂದುವರಿಯುತ್ತಿರುವ ಈ ಅಭ್ಯಾಸವು ಅನೇಕ ಜನರಿಗೆ ನಿಷೇಧದಂತೆ ಕಾಣುತ್ತದೆ. ಈ ಅಭ್ಯಾಸವು ತುಂಬಾ ಅಪಾಯಕಾರಿ ಎಂದು ಅವರು ಹೇಳುತ್ತಾರೆ. ಉರಿಯುತ್ತಿರುವ ಕಲ್ಲಿದ್ದಲಿನ ಮೇಲೆ ನಡೆಯುವಾಗ ಗಂಡನ ಕಾಲು ಜಾರಿದರೆ, ಅವನ ಜೊತೆಯಲ್ಲಿ ಗರ್ಭಿಣಿ ಹೆಂಡತಿ ಮತ್ತು ಅವನ ಮಡಿಲಲ್ಲಿರು ಮಗು ಕೂಡ ಸಾಯಬಹುದು. ಹಾಗಾಗಿ ಇದು ಅಪಾಯಕಾರಿ ಆಗಿದೆ. ಹಾಗಾಗಿ ಈ ಪದ್ದತಿಯನ್ನು ನಿಷೇಧಿಸಬೇಕು ಕೆಲವರು ಹೇಳುತ್ತಾರೆ.