How To Apply For Passport Through DigiLocker? ಇನ್ಮುಂದೆ Passport ಗಾಗಿ ದಾಖಲೆ ನೀಡುವ, ಲೈನ್ ನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ
1. How To Apply For Passport Through DigiLocker - ಈ ಮೊದಲು ಪಾಸ್ಪೋರ್ಟ್ ಪಡೆಯಲು ನೀವು ಈ ದಾಖಲೆಗಳನ್ನು ಕೊಂಡೊಯ್ಯಬೇಕಾಗಿತ್ತು : ಇದಕ್ಕೂ ಮೊದಲು ಪಾಸ್ಪೋರ್ಟ್ ಪಡೆಯಲು ಜನರಿಗೆ ಆಧಾರ್ ಕಾರ್ಡ್, ಚಾಲನಾ ಪರವಾನಗಿ, ಮತದಾರರ ಗುರುತಿನ ಚೀಟಿ, ಪ್ಯಾನ್ ಪರಿಶೀಲನಾ ದಾಖಲೆ, ಶಾಖೆ ಪರವಾನಗಿ ವಿತರಣೆ, ಜನನ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಪಡಿತರ ಚೀಟಿ, ಪಿಂಚಣಿ ಪ್ರಮಾಣಪತ್ರ, ವಿಮಾ ಪಾಲಿಸಿ ಪ್ರಮಾಣಪತ್ರಗಳನ್ನು ತೆಗೆದುಕೊಂಡು ಪಾಸ್ಪೋರ್ಟ್ ಕಚೇರಿಗೆ (Passport Seva Kendra) ಹೋಗಬೇಕಾಗುತ್ತಿತ್ತು.
2. DigiLocker Appನಲ್ಲಿ ಹೇಗೆ ಖಾತೆ ತೆರೆಯಬೇಕು ಮತ್ತು ದಾಖಲೆಗಳನ್ನು ಹೇಗೆ ಅಪ್ಲೋಡ್ ಮಾಡಬೇಕು?: ಒಂದು ವೇಳೆ ನೀವು ಡಿಜಿಲಾಕರ್ (DigiLocker) ಖಾತೆಗೆ ಸೈನ್ ಅಪ್ ಮಾಡಿದ್ದರೆ ಮತ್ತು ಅಪ್ಲಿಕೇಶನ್‌ನಲ್ಲಿ ಡಾಕ್ಯುಮೆಂಟ್‌ಗಳನ್ನು ಹೇಗೆ ಅಪ್‌ಲೋಡ್ ಮಾಡುವುದು ಎಂದು ತಿಳಿದಿದ್ದರೆ, ಪಾಸ್‌ಪೋರ್ಟ್ ಸೇವಾ ವೆಬ್‌ಸೈಟ್‌ಗೆ ಹೋಗಿ, ನಿಮ್ಮ ಡಾಕ್ಯುಮೆಂಟ್‌ಗಳನ್ನು (Passport Documents) ಅಪ್‌ಲೋಡ್ ಮಾಡಿ. ಡಿಜಿಲಾಕರ್‌ನಲ್ಲಿ ಖಾತೆಯನ್ನು ಹೇಗೆ ರಚಿಸುವುದು ಮತ್ತು ನಿಮ್ಮ ಡಾಕ್ಯುಮೆಂಟ್‌ಗಳನ್ನು ಹೇಗೆ ಅಪ್‌ಲೋಡ್ ಮಾಡುವುದು ಎಂದು ನಿಮಗೆ ತಿಳಿದಿಲ್ಲ ಎಂದಾದಲ್ಲಿ, ಈ ಕೆಳಗೆ ಸೂಚಿಸಲಾಗಿರುವ ವಿಧಾನ ಅನುಸರಿಸಿ.
3. DigiLocker ನಲ್ಲಿ ಸೈನ್ ಅಪ್ ಆಗುವುದು ತುಂಬಾ ಸುಲಭ: How To Apply For Passport Through DigiLocker - ಇದರಲ್ಲಿ ನೀವು ನಿಮ್ಮ ಸಂಪೂರ್ಣ ಹೆಸರು, ಆಧಾರ್ ಕಾರ್ಡ್ ನಲ್ಲಿರುವಂತೆ ಜನ್ಮ ದಿನಾಂಕ, ಲಿಂಗ, ಮೊಬೈಲ್ ನಂಬರ್, ಇ-ಮೇಲ್ ಐಡಿ ಹಾಗೂ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. - ಇದಾದ ಬಳಿಕ ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ OTP ಬರಲಿದೆ. ಅದನ್ನು ನಮೂದಿಸಿ ನೀವು ನಿಮ್ಮ ಡಿಜಿಲಾಕರ್ ಖಾತೆಗೆ ಲಾಗಿನ್ ಮಾಡಿ. - ಈಗ ನೀವು ನಿಮ್ಮ ಆಪ್ ನ ಹೋಮ್ ಸ್ಕ್ರೀನ್ ಗೆ ಭೇಟಿ ನೀಡುವಿರಿ. ಅಲ್ಲಿ ನಿಮಗೆ ನಿಮ್ಮ ಡ್ರೈವಿಂಗ್ ಲೈಸನ್ಸ್ ನಿಂದ ಹಿಡಿದು ಪ್ಯಾನ್ ಕಾರ್ಡ್, ಅಂಕಪಟ್ಟಿ ಇತ್ಯಾದಿ ದಾಖಲೆಗಳನ್ನು ಅಪ್ಲೋಡ್ ಮಾಡುವ ಆಯ್ಕೆ ಸಿಗಲಿದೆ. ಯಾವುದೇ ಒಂದು ವಿಶೇಷ ದಾಖಲೆಯನ್ನು ನೀವು ಕ್ಲಿಕ್ಕಿಸಿದಾಗ, ನಿಮಗೆ ಮಾಹಿತಿ ನಮೂದಿಸಲು ಹೇಳಲಾಗುತ್ತದೆ. ಇದಾದ ಬಳಿಕ ಆಪ್ ನಿಮ್ಮ ದಾಖಲೆಯನ್ನು ಸೆಳೆದುಕೊಳ್ಳಲಿದೆ. ಉದಾಹರಣೆಗೆ ಡ್ರೈವಿಂಗ್ ಲೈಸನ್ಸ್ ಅಪ್ಲೋಡ್ ಮಾಡಲು ನೀವು ನಿಮ್ಮ ಡ್ರೈವಿಂಗ್ ಲೈಸನ್ಸ್ ನಂಬರ್ ನಮೂದಿಸಬೇಕು.
4. ಪಾಸ್ಪೋರ್ಟ್ ಸೇವೆಯ ವೆಬ್ ಸೈಟ್ ನಲ್ಲಿ ದಾಖಲೆ ಅಪ್ಲೋಡ್ ಹೇಗೆ ಮಾಡಬೇಕು?: How To Apply For Passport Through DigiLocker - ಪಾಸ್ಪೋರ್ಟ್ ಗಾಗಿ ಬೇಕಾಗುವ ಎಲ್ಲ ದಾಖಲೆಗಳು ಡಿಜಿಲಾಕರ್ ನಲ್ಲಿ ಅಪ್ಲೋಡ್ ಆಗಿರುವುದನ್ನು ನೀವು ಮೊದಲು ಖಚಿತಪಡಿಸಿಕೊಳ್ಳಬೇಕು. ಬಳಿಕ ಪಾಸ್ಪೋರ್ಟ್ ಸೇವೆಗೆ ಲಾಗಿನ್ ಮಾಡಿ, ನಿಮ್ಮ ಮಾಹಿತಿ ತುಂಬಿ ದಾಖಲೆಗಳನ್ನು ಅಪ್ಲೋಡ್ ಮಾಡುವ ಹಂತಕ್ಕೆ ತಲುಪಿ. - ಸೆಲ್ಫ್ ಡಿಕ್ಲೆರೇಶನ್ ಪುಟಕ್ಕೆ ತಲುಪಿದಾಗ ನಿಮಗೆ 'ಪ್ರೂಫ್ ಆಫ್ ಬರ್ತ್' ನ ಎದುರಿಗೆ 'ಗ್ರಾಂಟ್ ಡಿಜಿಲಾಕರ್ ಎಕ್ಸಸ್' ಆಯ್ಕೆ ಕಾಣಿಸಲಿದ್ದು, ಅದನ್ನು ನೀವು ಕ್ಲಿಕ್ಕಿಸಬೇಕು. ಈ ಆಪ್ಶನ್ ಮೇಲೆ ಕ್ಲಿಕ್ಕಿಸಿದ ಬಳಿಕ ನೀವು ನಿಮ್ಮ ಮೊಬೈಲ್ ಸಂಖ್ಯೆ, ಯುಸರ್ ನೆಮ್ ಅಥವಾ ಆಧಾರ್ ಕಾರ್ಡ್ ಬಳಸಿ DigiLocker ಖಾತೆಗೆ ಲಾಗಿನ್ ಆಗಬೇಕು. - OTP ನಮೂದಿಸಿ ಹಾಗೂ ಡಿಜಿಲಾಕರ್ ಖಾತೆ ತಲುಪಲು ಪಾಸ್ಪೋರ್ಟ್ ಸೇವೆಗೆ ಅನುಮತಿ ನೀಡಿ. - 'Grant Digilocker Access'ಆಯ್ಕೆಯ ಬದಲು ನಿಮಗೆ 'Receive From Digilocker' ಆಯ್ಕೆ ಕಾಣಿಸಿಕೊಳ್ಳಲಿದೆ. ಈ ಆಯ್ಕೆ ಮೇಲೆ ಕ್ಲಿಕ್ಕಿಸಿದಾಗ 'ಡಿಜಿಲಾಕರ್ ನಿಂದ ದಾಖಲೆಗಳನ್ನು ಯಶಸ್ವಿಯಾಗಿ ಅಪ್ಲೋಡ್ ಮಾಡಲಾಗಿದೆ' ಎಂಬ ಸಂದೇಶ ನಿಮಗೆ ಕಾಣಿಸಲಿದೆ. ಒಂದು ವೇಳೆ ದಾಖಲೆ ನಿಮ್ಮ ಡಿಜಿಲಾಕರ್ ಖಾತೆಯಲ್ಲಿ ಇಲ್ಲ ಎಂದಾದಲ್ಲಿ, 'ನೀವು ಆಯ್ಕೆ ಮಾಡಿರುವ ದಾಖಲೆ ನಿಮ್ಮ ಡಿಜಿಲಾಕರ್ ನಲ್ಲಿ ಇಲ್ಲ. ಹೀಗಾಗಿ ದಾಖಲೆ ಅಪ್ಲೋಡ್ ಮಾಡಲಾಗಿಲ್ಲ' ಎಂಬ ಸಂದೇಶ ಪ್ರಕಟಗೊಳ್ಳಲಿದೆ.