ನಿಮಗೂ ರಾತ್ರಿ ವೇಳೆ ಹೀಗಾಗುತ್ತಿದ್ದರೆ ಬ್ಲಡ್ ಪ್ರೆಶರ್ ನಲ್ಲಿ ಏರುಪೇರಾಗಿರುವುದು ಖಂಡಿತಾ !ಸರಿಯಾಗಿ ಗಮನಿಸಿ
ರಾತ್ರಿ ವೇಳೆ ದೇಹದಲ್ಲಿ ಕಂಡು ಬರುವ ಈ ಲಕ್ಷಣಗಳು ಅಧಿಕ ರಕ್ತದೊತ್ತಡ ಇದೆ ಎನ್ನುವುದನ್ನು ತೋರಿಸುತ್ತವೆ.
ದಿನ ಪೂರ್ತಿ ಕೆಲಸ ಮಾಡಿದ ನಂತರ ದೇಹದಲ್ಲಿ ಸುಸ್ತು ಕಾಣಿಸುವುದು ಸಾಮಾನ್ಯ. ಆದ್ರೆ ರಾತ್ರಿ ವೇಳೆ ಕೂಡಾ ಸುಸ್ತು, ಮೈ ಕೈ ಭಾರ ಎನಿಸುತ್ತಿದ್ದರೆ ಒಮ್ಮೆ ಬಿಪಿ ಚೆಕ್ ಮಾಡಿಕೊಳ್ಳಿ.
ಮೂತ್ರ ವಿಸರ್ಜನೆಗಾಗಿ ರಾತ್ರಿ ಪದೇ ಪದೇ ಎಚ್ಚರವಾಗುತ್ತಿದ್ದರೆ ಇದು ಅಧಿಕ ರಕ್ತದೊತ್ತಡ ಸಮಸ್ಯೆಯಾಗಿರಬಹುದು.
ಪಾದಗಳು ಮತ್ತು ಕೆಳಗಿನ ಕಾಲುಗಳಲ್ಲಿ ಊತ ಮತ್ತು ನೋವು ಕಾಣಿಸಿಕೊಂಡರೆ ಅದು ಅಧಿಕ ರಕ್ತದೊತ್ತಡದ ಲಕ್ಷಣವಾಗಿರಬಹುದು.ರಾತ್ರಿ ಮಲಗಿ ಎದ್ದಾಗ ಕಾಲು ಬಾತುಕೊಂಡಿದ್ದರೆ ಅದಕ್ಕೆ ಬಿಪಿಯೇ ಕಾರಣವಾಗಿರಬಹುದು.
ವಿಶ್ರಾಂತಿ ಪಡೆಯುವಾಗ ಸರಿಯಾಗಿ ಉಸಿರಾಡಲು ತೊಂದರೆಯಾಗುತ್ತಿದ್ದರೆ ರಕ್ತದೊತ್ತಡದ ಮಟ್ಟ ಹೆಚ್ಚಾಗಿರಬಹುದು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ