ದೀಪಾವಳಿಗೆ ಹೊರಬಂದೇ ಬಿಟ್ಟರು ದಾಸ.. ನಟ ದರ್ಶನ್‌ಗೆ ಮಧ್ಯಂತರ ಜಾಮೀನು! ಫ್ಯಾನ್ಸ್ ಫುಲ್ ಖುಷ್
Darshan: ರೇಣುಕಾಸ್ವಾಮಿ ಕೇಸ್‌ನಲ್ಲಿ ಅಂದರ್ ಆಗಿದ್ದ ದಾಸನಿಗೆ ಬಿಗ್ ರಿಲೀಫ್ ಸಿಕ್ಕಿದೆ. ಕೋರ್ಟ್ ದರ್ಶನ್ ಅವರಿಗೆ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದ್ದು, ಐದು ತಿಂಗಳುಗಳಿಂದ ಜೈಲಿನಲ್ಲಿದ್ದ ದಾಸ ಇದೀಗ ಹೊರಬರುತ್ತಿದ್ದಾರೆ. ವಿಷಯ ಕೇಳಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅಂದರ್ ಆಗಿದ್ದರು, ಜೈಲು ಸೇರಿದಾಗಿನಿಂದಲೂ, ಅರ್ಜಿ ಸಲ್ಲಿಸಿದ್ದ ದಾಸನಿಗೆ ಇಷ್ಟು ದಿನ ಬೇಲ್ ವಿಚಾರದಲ್ಲಿ ನಿರಾಸೆ ಉಂಟಾಗಿತ್ತು.
ಇದೀಗ ನಟ ದರ್ಶನ್‌ಗೆ ಬಿಗ್ ರಿಲೀಫ್ ಸಿಕ್ಕಿದೆ, ಬೇಲಿನ ನಿರೀಕ್ಷಿಯಲ್ಲಿದ್ದ ದಾಸನಿಗೆ ಇದೀಗ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಅನಾರೋಗ್ಯದಿಂದ ನಟ ದರ್ಶನ್ ಬಳಲುತ್ತಿದ್ದು, ಇದೇ ಕಾರಣದಿಂದಾಗಿ ನಟ ದರ್ಶನ್ ಅವರಿಗೆ ಇದೀಗ ಜಾಮೀನು ಮಂಜೂರಾಗಿದೆ.
131 ದಿನಗಳ ಕಾಲ ಸೆರೆವಾಸ ಅನೂಭವಿಸಿದ್ದ ನಟ ದರ್ಶನ್ ಅವರಿಗೆ ಬೇಲ್ ಕೊಟ್ಟು, ಹೈ ಕೋರ್ಟ್ ಮಹತ್ವದ ಆದೇಶ ನೀಡಿದೆ.
ಸದ್ಯ ಬೇಲ್ ಮೇಲೆ ಹೊರಬಂದ ದರ್ಶನ್ ಅವರಿಗೆ ಅವರು ಇಚ್ಛಿಸಿದ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ.
ಅಪೋಲೋ ಆಸ್ಪತ್ರೆಯಲ್ಲಿ ನಟ ದರ್ಶನ್ ಇದೀಗ ಚಿಕಿತ್ಸೆ ಪಡೆಯುತ್ತಿದ್ದು, ಕೋರ್ಟ್‌ಗೆ ಒಂದು ವಾರದಲ್ಲಿ ಇದರ ರಿಪೋರ್ಟ್ ಅನ್ನು ಸಲ್ಲಿಸಬೇಕಾಗುತ್ತದೆ.
ಸದ್ಯ ನಟ ದರ್ಶನ್ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದು, ದಾಸ ಹೊರಬಂದ ವಿಷಯ ತಿಳಿದು ಅಭಿಅನಿಗಳು ಫುಲ್ ಖುಷ್ ಆಗಿದ್ದಾರೆ.