Holi 2023: ಚರ್ಮದಿಂದ ಗಾಢ ಬಣ್ಣಗಳನ್ನು ಸುಲಭವಾಗಿ ತೆಗೆಯಲು ಇಲ್ಲಿವೆ ಸಿಂಪಲ್ ಟಿಪ್ಸ್
ಹೋಳಿ ಬಣ್ಣವನ್ನು ತ್ವರಿತವಾಗಿ ತೆಗೆದುಹಾಕಲು ಚರ್ಮವು ಶುಷ್ಕವಾಗಿರಬಾರದು. ಒಂದು ಪಾತ್ರೆಯಲ್ಲಿ 2 ಚಮಚ ಮೊಸರು, 4-5 ಹನಿ ನಿಂಬೆ ಸೇರಿಸಿ ಮತ್ತು ಮಿಶ್ರಣ ಮಾಡಿ. ತಯಾರಾದ ಮಿಶ್ರಣವನ್ನು ಪೀಡಿತ ಪ್ರದೇಶಗಳಿಗೆ ಅನ್ವಯಿಸಿ ಮತ್ತು 10-15 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ತಾಜಾ ನೀರಿನಿಂದ ವಾಶ್ ಮಾಡಿ.
ಒಂದೆರಡು ಹನಿ ಆಲಿವ್ ಆಯಿಲ್ ತೆಗೆದುಕೊಂಡು ಅದರಲ್ಲಿ ಒಂದು ಚಮಚ ಹಾಲನ್ನು ಮಿಕ್ಸ್ ಮಾಡಿ. ನಂತರ ಕಲೆ ಇರುವ ಪ್ರದೇಶಕ್ಕೆ ಈ ಮಿಶ್ರಣವನ್ನು ಹಚ್ಚಿ, ಹತ್ತು ನಿಮಿಷಗಳ ಬಳಿಕ ತೊಳೆಯಿರಿ. ಇದರಿಂದ ಹೋಳಿಯ ರಂಗು ಕಡಿಮೆ ಆಗುತ್ತದೆ.
ಅಕ್ಕಿ ಹಿಟ್ಟನ್ನು ನೈಸರ್ಗಿಕ ಸ್ಕ್ರಬ್ಬರ್ ಎಂದು ಪರಿಗಣಿಸಲಾಗುತ್ತದೆ. ಇದು ಹೋಳಿಯ ರಂಗನ್ನು ತೆಗೆಯಲು ಸಹ ನಿಮಗೆ ಪ್ರಯೋಜನಕಾರಿ ಆಗಿದೆ. ಇದಾಕ್ಕಾಗಿ, ಅಕ್ಕಿ ಹಿಟ್ಟಿಗೆ ಸ್ವಲ್ಪ ಜೇನು ತುಪ್ಪವನ್ನು ಸೇರಿಸಿ ಈ ಮಿಶ್ರಣವನ್ನು ಕಲೆಯಿರುವ ಜಾಗಕ್ಕೆ ಹಚ್ಚಿ ನಯವಾಗಿ ಮಸಾಜ್ ರೀತಿಯಲ್ಲಿ ಉಜ್ಜಿರಿ. ಇದರಿಂದ ಕಲೆ ಮಾಯವಾಗುತ್ತದೆ.
ಸೌತೆಕಾಯಿಯ ರಸವನ್ನು ಹೊರತೆಗೆಯಿರಿ ಮತ್ತು ಅದರಲ್ಲಿ ಸ್ವಲ್ಪ ರೋಸ್ ವಾಟರ್ ಮತ್ತು ಒಂದು ಚಮಚ ವಿನೆಗರ್ ಅನ್ನು ಬೆರೆಸಿ ಪೇಸ್ಟ್ ತಯಾರಿಸಿ. ಗಾಢ ಬಣ್ಣಯಿರುವ ಜಾಗದಲ್ಲಿ ಲೇಪಿಸಿ. ಸ್ವಲ್ಪ ಸಮಯದ ನಂತರ ಸಾಮಾನ್ಯ ನೀರಿನಿಂದ ಸ್ವಚ್ಛಗೊಳಿಸಿ. ಹೋಳಿ ಕಲೆಯನ್ನು ಸುಲಭವಾಗಿ ತೆಗೆಯಬಹುದು.
ಒಂದು ಬಟ್ಟಲಿನಲ್ಲಿ ಒಂದು ಚಮಚ ಕಿತ್ತಳೆ ರಸವನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಕಲೆ ಇರುವ ಪ್ರದೇಶದಲ್ಲಿ ಹಚ್ಚಿ 10-15 ನಿಮಿಷಗಳ ಬಳಿಕ ಸರಳ ನೀರಿನಿಂದ ಸ್ವಚ್ಚಗೊಳಿಸಿ. ಇದೂ ಸಹ ಚರ್ಮದಲ್ಲಿ ನೆಲೆಯೂರಿರುವ ಗಾಢ ಬಣ್ಣದಿಂದ ನಿಮಗೆ ಮುಕ್ತಿ ನೀಡುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.