Home Loan Rates: ಈ ಬ್ಯಾಂಕ್ ಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಿಗುತ್ತಿದೆ ಗೃಹ ಸಾಲ

Tue, 24 Aug 2021-8:52 pm,

ಖಾಸಗಿ ವಲಯದ ಕೋಟಕ್ ಮಹೀಂದ್ರಾ ಬ್ಯಾಂಕಿನ ಗೃಹ ಸಾಲದ ಮೇಲಿನ ಬಡ್ಡಿದರಗಳು ಶೇಕಡಾ 6.65 ರಿಂದ 7.20 ರಷ್ಟಿದೆ. ಇನ್ನೊಂದು ಬ್ಯಾಂಕಿನಿಂದ ಸಾಲವನ್ನು ವರ್ಗಾಯಿಸಿದರೆ, ನೀವು ಹೆಚ್ಚಿನ ಲಾಭವನ್ನು ಪಡೆಯಬಹುದು. ಇದಕ್ಕಾಗಿ ಆರಂಭಿಕ ಬಡ್ಡಿ ದರ 6.60 ಶೇಕಡಾ. ಸ್ಯಾಲರೀಡ್  ಮತ್ತು ಸೆಲ್ಫ್ ಎಂಪ್ಲೋಯಡಗಳಿಗೆ ವಿಧಿಸುವ ಬಡ್ಡಿ ದರಗಳು ವಿಭಿನ್ನವಾಗಿರುತ್ತವೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗೃಹ ಸಾಲದ ಬಡ್ಡಿ ದರವು ವಾರ್ಷಿಕ 6.70 ರಿಂದ 7.75 % ವರೆಗೆ ಇರುತ್ತದೆ. ಇದೀಗ ಬ್ಯಾಂಕ್ ಗ್ರಾಹಕರಿಗಾಗಿ ಮಾನ್ಸೂನ್ ಧಮಾಕಾ ಆಫರ್ ನೀಡಿದೆ. ಇದರ ಅಡಿಯಲ್ಲಿ ಸಂಸ್ಕರಣಾ ಶುಲ್ಕ ಶೂನ್ಯವಾಗಿರುತ್ತದೆ. ಗ್ರಾಹಕರು ಇದರ ಲಾಭವನ್ನು 31 ಆಗಸ್ಟ್ 2021 ರವರೆಗೆ ಮಾತ್ರ ಪಡೆಯಬಹುದು.

ಬ್ಯಾಂಕ್ ಆಫ್ ಬರೋಡಾ (BoB) ಗೃಹ ಸಾಲದ ಮೇಲಿನ ಬಡ್ಡಿದರಗಳು ವರ್ಷಕ್ಕೆ 6.75 ರಿಂದ 8.25 % ವರೆಗೆ ಇರುತ್ತದೆ. ಈ ಬಡ್ಡಿದರಗಳು ಸಾಲದ ಮೊತ್ತ, ಆದಾಯ, ಅರ್ಜಿದಾರರ ಕ್ರೆಡಿಟ್ ಹಿಸ್ಟರಿ ಸೇರಿದಂತೆ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ.  

ನೀವು ಖಾಸಗಿ ವಲಯದ ಐಸಿಐಸಿಐ ಬ್ಯಾಂಕಿನಿಂದ ಗೃಹ ಸಾಲ ತೆಗೆದುಕೊಳ್ಳುವುದಾದರೆ, ಇಲ್ಲಿ ಬಡ್ಡಿ ದರಗಳು 6.75 ರಿಂದ 7.55 ಪ್ರತಿಶತದ ನಡುವೆ ಇರುತ್ತದೆ. ಇದರಲ್ಲಿ, ಸ್ಯಾಲರೀಡ್  ಮತ್ತು ಸೆಲ್ಫ್ ಎಂಪ್ಲೋಯಡಗಳಿಗೆ ಸಾಲದ ಮೊತ್ತದ ಆಧಾರದ ಮೇಲೆ ಬಡ್ಡಿದರಗಳು ಬದಲಾಗುತ್ತವೆ.  

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ((UBI) ನಲ್ಲಿ ಗೃಹ ಸಾಲದ ಆರಂಭಿಕ ಬಡ್ಡಿ ದರವು ಪ್ರತಿ ವರ್ಷಕ್ಕೆ 6.80 ಶೇಕಡಾವಾಗಿದೆ . ಗೃಹ ಸಾಲಗಳಿಗೆ ಗರಿಷ್ಠ ಬಡ್ಡಿ ದರ 7.65 ಪ್ರತಿಶತದವರೆಗೆ ಇರುತ್ತದೆ.  

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಗೃಹ ಸಾಲದ ಮೇಲಿನ ಬಡ್ಡಿದರಗಳು ವರ್ಷಕ್ಕೆ 6.80 ರಿಂದ 8 % ವರೆಗೆ ಇರುತ್ತದೆ. ವಿವಿಧ ಗೃಹ ಸಾಲ ಯೋಜನೆಗಳಿಗೆ PNB ವಿಭಿನ್ನ ಆರಂಭಿಕ ಬಡ್ಡಿದರಗಳನ್ನು ಹೊಂದಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link