Carrot Halwa Recipe: ಕೇವಲ 5 ನಿಮಿಷದಲ್ಲಿ ಮಾಡಿ ಬಾಯಲ್ಲಿ ನೀರೂರಿಸುವ ಕ್ಯಾರೆಟ್ ಹಲ್ವಾ.!
ಕ್ಯಾರೆಟ್ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ. ಅದಕ್ಕಾಗಿಯೇ ಮಕ್ಕಳಿಗೆ ಕ್ಯಾರೆಟ್‌ನಿಂದ ಮಾಡಿದ ಆಹಾರವನ್ನು ನೀಡಲಾಗುತ್ತದೆ. ಪ್ರತಿದಿನ ಬೆಳಗಿನ ಉಪಾಹಾರದ ಭಾಗವಾಗಿ ಒಂದರಿಂದ ಎರಡು ಕ್ಯಾರೆಟ್‌ಗಳನ್ನು ತಿನ್ನುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.
ಬಹುತೇಕರಿಗೆ ಕ್ಯಾರೆಟ್ ಎಂದಾಕ್ಷಣ ನೆನಪಾಗುವುದು ಹಲ್ವಾ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಈ ರೆಸಿಪಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಬಾಯಿಗೆ ರುಚಿಕರವಾಗಿರುವ ಈ ಕ್ಯಾರೆಟ್ ಹಲ್ವಾವನ್ನು ಕೆಲವು ಸಿಂಪಲ್ ಟಿಪ್ಸ್ ಬಳಸಿ ನೀವು ಸುಲಭವಾಗಿ ಮಾಡಬಹುದು.
ಕ್ಯಾರೆಟ್ ಹಲ್ವಾ ತಯಾರಿಸಲು ಒಂದು ಕಪ್ ಕತ್ತರಿಸಿದ ಡ್ರೈ ಫ್ರೂಟ್ಸ್, ಏಲಕ್ಕಿ ಪುಡಿ, ನಾಲ್ಕು ಚಮಚ ಹಾಲಿನ ಪುಡಿ, ಒಂದು ಕಪ್ ಹಾಲು, ಸಕ್ಕರೆ, 350 ಗ್ರಾಂ ಕಚ್ಚಾ ಕ್ಯಾರೆಟ್ ಅನ್ನು ತುರಿದು ಇಡಿ, ನಾಲ್ಕು ಚಮಚ ತುಪ್ಪ ಬೇಕು.
ಮೊದಲು ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಕುದಿಸಿ ತಣ್ಣಗಾದ ಕಂಡೆನ್ಸ್ಡ್ ಹಾಲನ್ನು ಹಾಕಿ ಅದಕ್ಕೆ ಬೇಕಾದಷ್ಟು ಹಾಲಿನ ಪುಡಿಯನ್ನು ಹಾಕಿ ಪಕ್ಕಕ್ಕೆ ಇಡಿ. ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ನಾಲ್ಕು ಚಮಚ ತುಪ್ಪ ಹಾಕಿ. ಇದರಲ್ಲಿ ಕ್ಯಾರೆಟ್ ತುರಿ ಹಾಕಿ ಮತ್ತು ತುರಿಯಲ್ಲಿನ ಹಸಿ ವಾಸನೆ ಮಾಯವಾಗುವವರೆಗೆ ಹುರಿಯಿರಿ. ಸುಡದಂತೆ ಎಚ್ಚರ ವಹಿಸಿ.
ನಂತರ ಕ್ಯಾರೆಟ್ ತುರಿಯಲ್ಲಿ ಪಕ್ಕಕ್ಕೆ ಇಟ್ಟಿರುವ ಹಾಲನ್ನು ಸೇರಿಸಿ ಮೂರ್ನಾಲ್ಕು ನಿಮಿಷ ಚೆನ್ನಾಗಿ ಕುದಿಯಲು ಬಿಡಿ. ನಂತರ ಅದರಲ್ಲಿ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಹತ್ತು ನಿಮಿಷ ಮಿಕ್ಸ್ ಮಾಡಿ, ಬೇಕಾದಷ್ಟು ಏಲಕ್ಕಿ ಪುಡಿ ಹಾಕಿ ಮತ್ತೆರಡು ನಿಮಿಷ ಚೆನ್ನಾಗಿ ಕಲಸಿ.
ಮತ್ತೆರಡು ಚಮಚ ತುಪ್ಪ ಹಾಕಿ ಚೆನ್ನಾಗಿ ಕಲಸಿ. ನಂತರ ಅದರಲ್ಲಿ ತುಪ್ಪದಲ್ಲಿ ಹುರಿದ ಡ್ರೈ ಫ್ರೂಟ್ಸ್ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಈಗ ಟೇಸ್ಟಿ ಕ್ಯಾರೆಟ್ ಹಲ್ವಾ ಸವಿಯಲು ರೆಡಿ. ಕ್ಯಾರೆಟ್ ಹಲ್ವಾವನ್ನು 15 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ, ಬಳಿಕ ಸವಿಯಿರಿ.