ಕೆಟ್ಟ ಕೊಲೆಸ್ಟ್ರಾಲ್‌ಗೆ ಇದೊಂದೇ ಮದ್ದು; ಈ ಎಲೆಯನ್ನು ಜಗಿದು ತಿನ್ನಿ ಸಾಕು ರಕ್ತನಾಳದಲ್ಲಿ ಸಿಲುಕಿದ ಕೊಬ್ಬು ಕರಗಿ ಹೋಗುತ್ತೆ !

Thu, 14 Nov 2024-9:14 am,

ಕೊಲೆಸ್ಟ್ರಾಲ್ ಒಂದು ರೀತಿಯ ಕೊಬ್ಬು, ಇದು ದೇಹಕ್ಕೆ ಜೀವಕೋಶಗಳು ಮತ್ತು ಹಾರ್ಮೋನುಗಳನ್ನು ತಯಾರಿಸಲು ಕೆಲಸ ಮಾಡುತ್ತದೆ. ದೇಹದಲ್ಲಿ ಇದರ ಪ್ರಮಾಣ ಹೆಚ್ಚಾದಾಗ ಅನೇಕ ಆರೋಗ್ಯ ಸಮಸ್ಯೆಗಳೂ ಬರಲಾರಂಭಿಸುತ್ತವೆ. ದೇಹದಲ್ಲಿನ ಕೊಲೆಸ್ಟ್ರಾಲ್‌ನ ಸುರಕ್ಷಿತ ಮಟ್ಟವು ವಯಸ್ಸಿಗೆ ಅನುಗುಣವಾಗಿ ಬದಲಾಗುತ್ತದೆ.

ಕೆಟ್ಟ ಜೀವನಶೈಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವುದು. ಔಷಧಿಗಳನ್ನು ತೆಗೆದುಕೊಳ್ಳುವ ಮೂಲಕವೂ ಕೊಲೆಸ್ಟ್ರಾಲ್ ಮಟ್ಟ ಕಾಪಾಡಿಕೊಳ್ಳಬಹುದು. ಆದರೆ ಆರಂಭದಲ್ಲಿ ನೈಸರ್ಗಿಕ ವಿಧಾನಗಳ ಸಹಾಯದಿಂದ ಕೊಲೆಸ್ಟ್ರಾಲ್ ನಿಯಂತ್ರಿಸಲು ಪ್ರಯತ್ನಿಸುವುದು ಉತ್ತಮ.

ತುಳಸಿ ಎಲೆಗಳು ಕೊಲೆಸ್ಟ್ರಾಲ್ ಮಟ್ಟವನ್ನು ಸಾಮಾನ್ಯಗೊಳಿಸುವಲ್ಲಿ ಬಹಳ ಪ್ರಯೋಜನಕಾರಿ. ಚಯಾಪಚಯ ಒತ್ತಡವನ್ನು ಕಡಿಮೆ ಮಾಡುತ್ತದೆ. ದೇಹದ ತೂಕ ಮತ್ತು ಕೊಲೆಸ್ಟ್ರಾಲ್ ಅನ್ನು ಕಂಟ್ರೋಲ್‌ ಮಾಡುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಸೇವಿಸಬಹುದು. 5-6 ಎಲೆಗಳನ್ನು ಚೆನ್ನಾಗಿ ತೊಳೆದು ಒರೆಸಿ ತಿನ್ನಬೇಕು.

ಮೆಂತ್ಯ ಸೊಪ್ಪಿನಲ್ಲಿರುವ ಟ್ರೈಗ್ಲಿಸರೈಡ್‌ಗಳು ಅಧಿಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತವೆ. ಮೆಂತ್ಯ ಎಲೆಗಳನ್ನು ಸಾಮಾನ್ಯ ತರಕಾರಿಯಾಗಿ ಸೇವಿಸಬಹುದು. ಹಸಿಯಾಗಿ ತಿನ್ನುವುದು ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. 

ಕೊಲೆಸ್ಟ್ರಾಲ್ ಕಡಿಮೆ ಮಾಡಲು ನೇರಳೆ ಎಲೆಗಳು ಉತ್ತಮ ಆಯ್ಕೆಯಾಗಿದೆ. ಇದು ಉತ್ಕರ್ಷಣ ನಿರೋಧಕ ಮತ್ತು ಆಂಥೋಸಯಾನಿನ್‌ನಂತಹ ಗುಣಲಕ್ಷಣಗಳನ್ನು ಹೊಂದಿದೆ. ರಕ್ತನಾಳಗಳಲ್ಲಿ ಸಂಗ್ರಹವಾದ ಕೊಬ್ಬನ್ನು ಕಡಿಮೆ ಮಾಡುತ್ತದೆ. ನೇರಳೆ ಎಲೆಗಳ ಪುಡಿಯಿಂದ ಚಹಾ ಅಥವಾ ಕಷಾಯವನ್ನು ತಯಾರಿಸಬಹುದು. ದಿನಕ್ಕೆ 1-2 ಬಾರಿ ಕುಡಿಯಬಹುದು.

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಕರಿಬೇವು ತುಂಬಾ ಪರಿಣಾಮಕಾರಿ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಕೊಬ್ಬನ್ನು ಕರಗಿಸುತ್ತವೆ. ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸಲು ಅವಶ್ಯಕವಾಗಿದೆ. ಪ್ರತಿದಿನ 8-10 ಕರಿಬೇವಿ ಎಲೆಗಳನ್ನು ಅಡುಗೆಯಲ್ಲಿ ಬಳಸಬಹುದು. ಇದರ ಜ್ಯೂಸ್ ಕೂಡ ತಯಾರಿಸಿ ಕುಡಿಯಬಹುದು.  

ಕೊತ್ತಂಬರಿ ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯವನ್ನು ಸುಧಾರಿಸಲು ಪ್ರಯೋಜನಕಾರಿ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯನ್ನು ನಿವಾರಿಸಬಹುದು. ಕೊತ್ತಂಬರಿ ಸೊಪ್ಪನ್ನು ಸಲಾಡ್‌ಗೆ ಸೇರಿಸಿ ಅಥವಾ ಚಟ್ನಿ ಮಾಡಿ ತಿನ್ನಬಹುದು.

ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link