ಹಾವು ಕಚ್ಚಿದ ತಕ್ಷಣ ಇದನ್ನು ಅರೆದು ಹಚ್ಚಿದ್ರೆ ದೇಹಕ್ಕೆ ವಿಷ ಹರಡೋದಿಲ್ಲ! ಈ ಪರಮೌಷಧಿ ಪ್ರತಿ ಮನೆಯಲ್ಲೂ ಇರುತ್ತದೆ... ಒಗ್ಗರಣೆಗೆ ಬೇಕೇ ಬೇಕಿದು
ಒಂದು ವರದಿಯ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ 50 ಸಾವಿರಕ್ಕೂ ಹೆಚ್ಚು ಜನರು ಹಾವು ಕಡಿತದಿಂದ ಸಾಯುತ್ತಿದ್ದಾರೆ. ಹಾವು ಕಡಿತಕ್ಕೊಳಗಾದ ವ್ಯಕ್ತಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಪ್ರಾಣವೇ ಹೋಗಬಹುದು ಎಂದು ತಜ್ಞರು ಹೇಳುತ್ತಾರೆ.
ಹಾವು ಕಚ್ಚಿದಾಗ, ಅದರ ವಿಷಯುಕ್ತ ಹಲ್ಲುಗಳಿಂದ ವಿಷವು ಮಾಂಸವನ್ನು ಭೇದಿಸುತ್ತದೆ. ಅದೇ ವಿಷವು ಕ್ರಮೇಣ ರಕ್ತದ ಮೂಲಕ ದೇಹದಾದ್ಯಂತ ಹರಡುತ್ತದೆ. ಹಾವಿನ ವಿಷವು ದೇಹದಾದ್ಯಂತ ಹರಡಲು 3 ಗಂಟೆಗಳು ಬೇಕಾಗುತ್ತದೆ ಎಂಬುದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಈ 3 ಗಂಟೆ ಒಳಗಾಗಿ ಕಡಿತಕ್ಕೊಳಗಾದ ವ್ಯಕ್ತಿಯ ಜೀವವನ್ನು ಉಳಿಸಲು ಪ್ರಯತ್ನಿಸಬಹುದು.
WHO ಪ್ರಕಾರ, ಹಾವು ಕಚ್ಚಿದರೆ ತಕ್ಷಣ ಅವರನ್ನು ಆ ಸ್ಥಳದಿಂದ ಬೇರೆ ಸ್ಥಳಕ್ಕೆ ಕರೆದೊಯ್ಯಬೇಕು. ಮೊದಲನೆಯದಾಗಿ, ಹತ್ತಿರದ ಆಸ್ಪತ್ರೆ ಎಲ್ಲಿದೆ ಎಂದು ತಿಳಿದು ಮಾಹಿತಿ ನೀಡಿ.
ಹಾವು ಕಚ್ಚಿದ ವ್ಯಕ್ತಿಯನ್ನು ಧೈರ್ಯಗೆಡದಂತೆ ನೋಡಿಕೊಳ್ಳಿ. ಕೆಲವೊಮ್ಮೆ ವಿಷಕಾರಿಯಲ್ಲದ ಹಾವು ಕೂಡ ಕಚ್ಚುತ್ತದೆ. ಆದರೆ ಪ್ಯಾನಿಕ್ ಆಗುವುದರಿಂದ ಪರಿಸ್ಥಿತಿ ಹದಗೆಡಲು ಪ್ರಾರಂಭಿಸುತ್ತದೆ. ಹೀಗಾಗು ಏನೂ ಆಗುವುದಿಲ್ಲ ಎಂದು ಹಾವು ಕಚ್ಚಿದ ವ್ಯಕ್ತಿಗೆ ಭರವಸೆ ನೀಡಿ.
ಇನ್ನು ಹಾವು ಕಡಿತಗೊಂಡ ವ್ಯಕ್ತಿ ವಾಂತಿ ಮಾಡಿದರೆ, ಭಯಪಡಬೇಡಿ. ಹಾವು ಕಡಿತದಿಂದ ಹೀಗಾಗುತ್ತದೆ. ಆದರೆ ಆದಷ್ಟು ಬೇಗ ಪ್ರಥಮ ಚಿಕಿತ್ಸೆಯನ್ನು ನೀಡಿ, ವೈದ್ಯರ ಬಳಿ ಕರೆದುಕೊಂಡು ಹೋಗಬೇಕು.
ಹಾವು ಕಚ್ಚಿದ ಸ್ಥಳದಲ್ಲಿ ಎರಡು ಹಲ್ಲುಗಳ ಗುರುತುಗಳು ಗೋಚರಿಸುತ್ತವೆ. ಈ ಭಾಗದಿಂದ ಚುಚ್ಚುಮದ್ದಿನ ಸಹಾಯದಿಂದ ವಿಷವನ್ನು ಹೊರತೆಗೆಯಿರಿ. ಹೀಗೆ ಮಾಡುವುದರಿಂದ ವಿಷವು ಹೆಚ್ಚಿನ ಪ್ರಮಾಣದಲ್ಲಿ ಹೊರಬರುತ್ತದೆ.
ಆ ವ್ಯಕ್ತಿ ಆದಷ್ಟು ಬೇಗ ವಾಂತಿ ಮಾಡುವಂತೆ ಮಾಡಿ. ಇದಾದ ನಂತರ ಸ್ವಲ್ಪ ಬೆಳ್ಳುಳ್ಳಿಯನ್ನು ರುಬ್ಬಿ, ಜೇನುತುಪ್ಪದಲ್ಲಿ ಬೆರೆಸಿ ಆ ಜಾಗಕ್ಕೆ ಹಚ್ಚಿ. ಹೀಗೆ ಮಾಡುವುದರಿಂದ ಹಾವಿನ ವಿಷದ ಪರಿಣಾಮವೂ ಕಡಿಮೆಯಾಗುತ್ತದೆ. ದೇಹಕ್ಕೆ ಏರುವುದಿಲ್ಲ.
ಇಲ್ಲಿ ನೀಡಲಾದ ಎಲ್ಲಾ ಪರಿಹಾರಗಳು ಮನೆಮದ್ದುಗಳು, ನಿಖರವಾಗಿಲ್ಲ. ಇವುಗಳು ವಿಷವನ್ನು ಕಡಿಮೆ ಮಾಡಬಹುದು ಹೊರತಾಗಿ ಶಾಶ್ವತ ಪರಿಹಾರವಲ್ಲ. ರೋಗಿಯನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಿರಿ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.