ಡಾರ್ಕ್ ಸರ್ಕಲ್ ನಿವಾರಣೆಗೆ ಸುಲಭ ಪರಿಹಾರ ನೀಡುವ ಮನೆಮದ್ದುಗಳು
ಕಣ್ಣುಗಳ ಸುತ್ತ ಡಾರ್ಕ್ ಸರ್ಕಲ್ ಮೂಡಲು ನಿದ್ರಾಹೀನತೆ, ದೀರ್ಘ ಸಮಯ ಮೊಬೈಲ್, ಲ್ಯಾಪ್ ಟಾಪ್ ನೋಡುವುದು ಹೀಗೆ ಹಲವು ಕಾರಣಗಳಿರಬಹುದು. ಆದರೆ, ನಿಮ್ಮ ಮನೆಯಲ್ಲಿಯೇ ಇರುವ ವಸ್ತುಗಳ ಸಹಾಯದಿಂದ ಇದಕ್ಕೆ ಸುಲಭ ಪರಿಹಾರ ಪಡೆಯಬಹುದು. ಅಂತಹ ಮನೆಮದ್ದುಗಳೆಂದರೆ...
ಹಾಲು ಅದರಲ್ಲೂ ತಣ್ಣನೆಯ ಹಾಲು ಹೊಳೆಯುವ ತ್ವಚೆಗೆ ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದೇ ಇದೆ. ಇದು ನಿಮ್ಮ ಕಣ್ಣ ಸುತ್ತಲಿನ ಡಾರ್ಕ್ ಸರ್ಕಲ್ ಸಮಸ್ಯೆ ನಿವಾರಣೆಗೂ ಕೂಡ ಅಷ್ಟೇ ಪ್ರಯೋಜನಕಾರಿ ಆಗಿದೆ. ಇದಕ್ಕಾಗಿ, ಒಂದು ಬಟ್ಟಲಿನಲ್ಲಿ ಒಂದೆರಡು ಸ್ಪೂನ್ ತಣ್ಣನೆಯ ಹಾಲನ್ನು ತೆಗೆದುಕೊಂಡು ಅದರಲ್ಲಿ ಹತ್ತಿ ಉಂಡೆಗಳನ್ನು ಅಡ್ಡಿ ಆ ಉಂಡೆಯನ್ನು ಪೀಡಿತ ಪ್ರದೇಶದಲ್ಲಿ ಅನ್ವಯಿಸಬೇಕು. ಹತ್ತು ನಿಮಿಷಗಳ ಬಳಿಕ ಸಾಮಾನ್ಯ ನೀರಿನಿಂದ ಮುಖ ತೊಳೆಯಿರಿ. ನಿಯಮಿತವಾಗಿ ಈ ರೀತಿ ಮಾಡುತ್ತಾ ಬಂದರೆ ಕಣ್ಣಿನ ಸುತ್ತಲಿನ ಕಪ್ಪು ಕಲೆ ನಿವಾರಣೆ ಆಗುತ್ತದೆ.
ನೈಸರ್ಗಿಕ ರೀತಿಯಲ್ಲಿ ಕಣ್ಣಿನ ಕೆಳಗಿರುವ ಕಪ್ಪು ವರ್ತುಲಗಳನ್ನು ಹೋಗಲಾಡಿಸಲು ಟೊಮಾಟೊ ತುಂಬಾ ಪ್ರಯೋಜನಕಾರಿ ಆಗಿದೆ. ಟೊಮೆಟೊ ರಸದೊಂದಿಗೆ ಒಂದೆರಡು ಹನಿ ನಿಂಬೆ ರಸವನ್ನು ಬೆರೆಸಿ ಡಾರ್ಕ್ ಸರ್ಕಲ್ ಪ್ರದೇಶದಲ್ಲಿ ಹಚ್ಚುವುದರಿಂದ ತ್ವರಿತ ಪ್ರಯೋಜನ ದೊರೆಯುತ್ತದೆ.
ಡಾರ್ಕ್ ಸರ್ಕಲ್ ಅನ್ನು ತೆಗೆದುಹಾಕಲು ಅತ್ಯಂತ ಪರಿಣಾಮಕಾರಿ ಪರಿಹಾರಗಳಲ್ಲಿ ಸೌತೆಕಾಯಿ ಕೂಡ ಒಂದು. ಇದಕ್ಕಾಗಿ ತಣ್ಣನೆ ಸೌತೆಕಾಯಿಯನ್ನು ತೆಗೆದುಕೊಂಡು ಅದನ್ನು ರೌಂಡ್ ಆಗಿ ಕತ್ತರಿಸಿ 10-15 ನಿಮಿಷಗಳ ಕಾಲ ಕಣ್ಣುಗಳ ಮೇಲೆ ಇಡುವುದರಿಂದ ಡಾರ್ಕ್ ಸರ್ಕಲ್ ಸಮಸ್ಯೆಗೆ ಪರಿಹಾರ ಪಡೆಯಬಹುದು.
ಚರ್ಮದ ಬಹುತೇಕ ಸಮಸ್ಯೆಗಳಿಗೆ ಅಲೋವೆರಾ ಅತ್ಯುತ್ತಮ ಪರಿಹಾರ ಎಂದು ನಿಮಗೆ ತಿಳಿದೇ ಇದೆ. ಆಲೋವೆರಾ ಜೆಲ್ ಅನ್ನು ಕಣ್ಣಿನ ಕೆಳಗೆ ಹಚ್ಚಿ ಮತ್ತು 5-7 ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ಸ್ವಲ್ಪ ಸಮಯ ಬಿಟ್ಟು ಮುಖ ತೊಳೆಯಿರಿ. ನಿಯಮಿತವಾಗಿ ಈ ರೀತಿ ಮಾಡುತ್ತಾ ಬಂದರೆ ಡಾರ್ಕ್ ಸರ್ಕಲ್ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.