ಸೆಮೀಸ್’ನಲ್ಲಿ ಸೋಲುಂಡು ವಿಶ್ವಕಪ್’ನಿಂದ ಹೊರಬಿದ್ದ ನ್ಯೂಜಿಲೆಂಡ್ ತಂಡಕ್ಕೆ ಸಿಕ್ಕ ಮೊತ್ತ ಎಷ್ಟು ಕೋಟಿ ಗೊತ್ತಾ?
ನಾವಿಂದು ಈ ವರದಿಯಲ್ಲಿ ಸೆಮಿಫೈನಲ್’ನಲ್ಲಿ ಭಾರತದ ವಿರುದ್ಧ ಸೋಲು ಕಂಡು ವಿಶ್ವಕಪ್’ನಿಂದ ಹೊರಬಿದ್ದ ನ್ಯೂಜಿಲೆಂಡ್ ತಂಡ ಪಡೆದ ಸಂಭಾವನೆ ಎಷ್ಟು ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ,
ವಿಶ್ವಕಪ್ ಪ್ರಾರಂಭವಾಗುವ ಮೊದಲು ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ಕ್ರಿಕೆಟ್ ಅಂದರೆ ICC, ಒಟ್ಟು USD 10 ಮಿಲಿಯನ್ ಬಹುಮಾನ ಮೊತ್ತವನ್ನು ಘೋಷಣೆ ಮಾಡಿತ್ತು. ಜೊತೆಗೆ ಈ ಮೊತ್ತಗಳನ್ನು ವಿಭಾಗಿಸಿ ಯಾವ ಯಾವ ಅರ್ಹತೆಗೆ ಎಷ್ಟು ಸಂಭಾವನೆ ಎಂಬುದನ್ನು ಸಹ ಬಹಿರಂಗಪಡಿಸಿತ್ತು.
ಪ್ರತಿ ಭಾಗವಹಿಸುವ ತಂಡವು ಒಂದು ಪಂದ್ಯವನ್ನು ಗೆದ್ದರೂ ಸಹ ಈ ಹಣದ ಪಾಲನ್ನು ಪಡೆಯುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ.
ಆರು ತಂಡಗಳಾದ ಪಾಕಿಸ್ತಾನ, ಅಫ್ಘಾನಿಸ್ತಾನ, ಇಂಗ್ಲೆಂಡ್, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ನೆದರ್ಲ್ಯಾಂಡ್ಸ್ ಸೆಮಿ ಫೈನಲ್’ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ತಂಡಗಳಿಗೆ ತಲಾ USD 100,000 (ಅಂದಾಜು ರೂ 84 ಲಕ್ಷ) ಮೊತ್ತವನ್ನು ನೀಡಲಾಗಿದೆ.
ಇದಲ್ಲದೆ, ಲೀಗ್ ಪಂದ್ಯವನ್ನು ಗೆದ್ದರೆ ಆ ತಂಡವು USD 40,000 (ಅಂದಾಜು 33 ಲಕ್ಷ ರೂ.) ಪ್ರೋತ್ಸಾಹಕ ಧನವನ್ನು ಪಡೆಯುತ್ತದೆ.
ಪ್ರಸ್ತುತ ಟಾಪ್ 4ರ ಸ್ಥಾನದಲ್ಲಿ ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳಿವೆ, ಅದರಲ್ಲಿ ನ್ಯೂಜಿಲೆಂಡ್ ತಂಡ ಈಗಾಗಲೇ ವಿಶ್ವಕಪ್’ನಿಂದ ಹೊರಬಿದ್ದಿದೆ.
ಹೀಗಾಗಿ ನ್ಯೂಜಿಲೆಂಡ್ ತಂಡಕ್ಕೆ 1,600,000 ಯುಎಸ್ ಡಿ ಡಾಲರ್ ಸಿಗಲಿದೆ. ಇನ್ನು ವಿಜೇತ ತಂಡಕ್ಕೆ 4,000,000 ಯುಎಸ್ ಡಿ ಡಾಲರ್, ರನ್ನರ್ ಅಪ್ ತಂಡಕ್ಕೆ 2,000,000 ಸಿಗಲಿದೆ.