ವಿಶ್ವಕಪ್’ನಲ್ಲಿ ಮ್ಯಾಚ್ ವಿನ್ನಿಂಗ್ ಕ್ಯಾಚ್ ಪಡೆದ ‘ನ್ಯಾಷನಲ್ ಹೀರೋ’ ಸೂರ್ಯಕುಮಾರ್ ಯಾದವ್ ಆಸ್ತಿ ಎಷ್ಟು ಕೋಟಿ?
ಫೈನಲ್’ನಲ್ಲಿ ವಿರಾಟ್ ಕೊಹ್ಲಿ ಇನ್ನಿಂಗ್ಸ್, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಬೌಲಿಂಗ್, ಇವೆಲ್ಲದರ ಜೊತೆಗೆ ಕೊನೆಯ ಕ್ಷಣಗಳಲ್ಲಿ ಒಂದೇ ಕೈಯಿಂದ ಸೂರ್ಯಕುಮಾರ್ ಯಾದವ್ ಪಡೆದ ಅದ್ಭುತ ಕ್ಯಾಚ್ ಎಲ್ಲರನ್ನೂ ಬೆರಗುಗೊಳಿಸಿತ್ತು.
ಸದ್ಯ ಟೀಂ ಇಂಡಿಯಾ ಮಾತ್ರವಲ್ಲದೆ, ಇಡೀ ಭಾರತದ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಹೀರೋ ಆಗಿ ಮಿಂಚುತ್ತಿರುವ ಸೂರ್ಯಕುಮಾರ್ ಯಾದವ್ ಅವರ ಒಟ್ಟು ಆಸ್ತಿ ಮೌಲ್ಯ ಎಷ್ಟು ಎಂಬುದನ್ನು ತಿಳಿಯೋಣ.
ಸೂರ್ಯಕುಮಾರ್ ಯಾದವ್ ಅವರನ್ನು ಮುಂಬೈ ಇಂಡಿಯನ್ಸ್ 2011 ರಲ್ಲಿ ಸಹಿ ಮಾಡಿತ್ತು. ನಂತರ 2013ರವರೆಗೆ ಪ್ರತಿ ವರ್ಷ 10 ಲಕ್ಷ ರೂಪಾಯಿ ಶುಲ್ಕ ಪಡೆಯುತ್ತಿದ್ದ ಅವರು 2014ರಿಂದ 2017ರವರೆಗೆ ಕೆಕೆಆರ್’ನಿಂದ ವಾರ್ಷಿಕ 70 ಲಕ್ಷ ರೂ. ಪಡೆದರು. ಸೂರ್ಯ 2018ರಲ್ಲಿ ಮುಂಬೈಗೆ ಮರಳಿ ಬಂದಾಗ 2018ರಿಂದ 2021ರವರೆಗೆ ವಾರ್ಷಿಕ 3 ಕೋಟಿ 20 ಲಕ್ಷ ರೂ. ಪಡೆದರು.
ಕಳೆದ ಎರಡು ವರ್ಷಗಳಲ್ಲಿ ಅವರ ನಿವ್ವಳ ಮೌಲ್ಯವನ್ನು ಸುಮಾರು ಮೂರು ಪಟ್ಟು ಹೆಚ್ಚಿಸಲು ಈ ಸಂಭಾವನೆ ಸಹಾಯ ಮಾಡಿದೆ. ಸದ್ಯ ಸೂರ್ಯ ವಾರ್ಷಿಕವಾಗಿ 8 ಕೋಟಿ ರೂಪಾಯಿ ಶುಲ್ಕವನ್ನು ಪಡೆಯುತ್ತಿದ್ದಾರೆ. ಒಟ್ಟಾರೆ ಐಪಿಎಲ್’ನಿಂದ ಈವರೆಗೆ 31 ಕೋಟಿ 90 ಲಕ್ಷ ರೂ. ಸಂಭಾವನೆಯನ್ನು ಸೂರ್ಯ ಪಡೆದಿದ್ದಾರೆ.
ಇದಲ್ಲದೆ, ಬಿಸಿಸಿಐ ಜೊತೆಗಿನ ವಾರ್ಷಿಕ ಒಪ್ಪಂದದಿಂದ 3 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ. ಇದಲ್ಲದೇ ಪ್ರತಿ ODIಗೆ 6 ಲಕ್ಷ ರೂಪಾಯಿ ಮತ್ತು ಪ್ರತಿ T20 ಪಂದ್ಯಕ್ಕೆ 3 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ.
ಸೂರ್ಯಕುಮಾರ್ ಯಾದವ್ ಸುಮಾರು ಹತ್ತಾರು ದೊಡ್ಡ ಕಂಪನಿಗಳ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ. ಜಿಯೋ ಸಿನಿಮಾ, ರಾಯಲ್ ಸ್ಟಾಗ್, ಯುನಿಸ್ಕಾಲರ್ಸ್, ಮ್ಯಾಕ್ಸಿಮಾ ಸ್ಮಾರ್ಟ್ ವಾಚ್, ರೀಬಾಕ್, ಡ್ರೀಮ್ 11, ಪಿಂಟೋಲಾ, ಬೋಲ್ಟ್ ಆಡಿಯೋ ಮತ್ತು ಎಎಸ್ ಕಂಪನಿಗೆ ಜಾಹೀರಾತುಗಳನ್ನು ಮಾಡುತ್ತಾರೆ. ಇದಲ್ಲದೆ, ಇತರ ಬ್ರ್ಯಾಂಡ್’ಗಳನ್ನು ಸಹ ಹೊಂದಿದ್ದು, ವಿಶ್ವಕಪ್ ನಂತರ ಮತ್ತಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗುತ್ತದೆ.
2022ರ ಹೊತ್ತಿಗೆ, ಯಾದವ್ ಅವರ ಪ್ರತಿ ಜಾಹೀರಾತು ಶುಲ್ಕವು ವರ್ಷಕ್ಕೆ 65 ಲಕ್ಷ ರೂಪಾಯಿಗಳಷ್ಟಿತ್ತು, ಆದರೆ ಪ್ರಸ್ತುತ ಪ್ರತಿ ಬ್ರಾಂಡ್’ಗೆ ವಾರ್ಷಿಕವಾಗಿ ಸುಮಾರು 1.50-2.00 ಕೋಟಿ ರೂಪಾಯಿ ಪಡೆಯುತ್ತಾರೆ. ಮುಂದಿನ ವರ್ಷದ ಐಪಿಎಲ್ ಹರಾಜಿನಲ್ಲಿ ಅವರ ಬೆಲೆ ಕನಿಷ್ಠ 15 ಕೋಟಿ ಅಥವಾ ಅದಕ್ಕಿಂತ ಹೆಚ್ಚೂ ಇರಬಹುದು ಎಂದು ಹೇಳಲಾಗುತ್ತಿದೆ.
ಇನ್ನು ಮುಂಬೈನ ಚೆಂಬೂರ್ ಪ್ರದೇಶದ ಅನುಶಕ್ತಿ ನಗರದಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್ ಹೊಂದಿದ್ದಾರೆ. ಅವರು ವಾಸಿಸುವ ಮನೆಯ ಬೆಲೆ ಪ್ರಸ್ತುತ 8 ರಿಂದ 10 ಕೋಟಿ ರೂ. ಇನ್ನು ಸೂರ್ಯ ಅವರ ಪತ್ನಿ ದೇವಿಶಾ ಶೆಟ್ಟಿ ಮಂಗಳೂರು ಮೂಲದವರು. ಮುಂಬೈನಲ್ಲಿ ಬೆಳೆದರೂ ಸಹ ಕರ್ನಾಟಕಕ್ಕೆ ಆಗಾಗ್ಗೆ ಭೇಟಿ ನೀಡುತ್ತಿರುತ್ತಾರೆ.
ಇದಲ್ಲದೆ, ಸೂರ್ಯಕುಮಾರ್ ಸುಮಾರು ಹತ್ತು ವಾಹನಗಳ ಮಾಲೀಕರು ಕೂಡ ಹೌದು. Mercedes-Benz (2.15 ಕೋಟಿ), ರೇಂಜ್ ರೋವರ್ ವೆಲಾರ್ (90 ಲಕ್ಷ), Audi A-6 (60 ಲಕ್ಷ), ನಿಸ್ಸಾನ್ ಜೊಂಗಾ (15 ಲಕ್ಷ), Mercedes-Benz GLS 400 D (1.29 ಕೋಟಿ), BMW 5 ಸಿರೀಸ್ 53Od ಅನ್ನು ಹೊಂದಿದ್ದಾರೆ. ಎಂ ಸ್ಪೋರ್ಟ್ (74.49 ಲಕ್ಷ), ಹುಂಡೈ ಐ20 (11.20 ಲಕ್ಷ), ಫಾರ್ಚುನರ್ (50.74 ಲಕ್ಷ) ಮತ್ತು ಮಿನಿ ಕೂಪರ್ ಎಸ್ (41.20 ಲಕ್ಷ) ಸೇರಿದಂತೆ ಸುಮಾರು ಹತ್ತು ಕಾರುಗಳಾಗಿವೆ. ಯಾದವ್ ಅವರ ನಿವ್ವಳ ಮೌಲ್ಯ ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ.