Railways: ಒಂದು ಲೀಟರ್ ಇಂಧನದಲ್ಲಿ ರೈಲು ಎಷ್ಟು ಕಿ.ಮೀ ಓಡುತ್ತದೆ? ರೈಲಿನ ಮೈಲೇಜ್ ಹೇಗಿದೆ ಗೊತ್ತಾ?

Wed, 15 Mar 2023-5:26 pm,

ಸಾಮಾನ್ಯವಾಗಿ ಹೆಚ್ಚಿನ ಜನರು ಭಾರತೀಯ ರೈಲ್ವೆಯನ್ನು ತಮ್ಮ ದೂರದೂರುಗಳ ಪ್ರಯಾಣಕ್ಕೆ ಬಳಸುತ್ತಾರೆ. ಖರ್ಚು ಕಡಿಮೆ, ಆರಾಮದಾಯಕ ಪ್ರಯಾಣವು ಸಿಗುತ್ತದೆ ಎಂಬ ಉದ್ದೇಶದಿಂದ ಜನಸಾಮಾನ್ಯರು ಈ ಸಾರಿಗೆಯನ್ನೆ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಆದರೆ ಈ ರೈಲಿಗೆ ಬೇಕಾಗಿರುವ ಇಂಧನ ಯಾವುದು? ಒಂದು ಲೀಟರ್ ಇಂಧನದಲ್ಲಿ ರೈಲು ಎಷ್ಟು ಕಿ.ಮೀ ಓಡುತ್ತದೆ? ಇದರ ಮೈಲೇಜ್ ಎಷ್ಟು ಎಂಬುದು ನಿಮಗೆ ತಿಳಿದಿದೆಯೇ? ಈ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.

ರೈಲಿನ ಮೈಲೇಜ್, ಪುನರಾವರ್ತಿತ ಬ್ರೇಕಿಂಗ್, ಕ್ಲೈಂಬಿಂಗ್ ಎತ್ತರ, ಹೆಚ್ಚು ಅಥವಾ ಕಡಿಮೆ ಲೋಡ್ ಎಳೆಯುವುದು ಸೇರಿದಂತೆ ಎಂಜಿನ್‌ನ ಶಕ್ತಿಯನ್ನು ಅವಲಂಬಿಸಿರುತ್ತದೆ. ಪ್ರತಿನಿತ್ಯ ದೇಶದ ಲಕ್ಷಗಟ್ಟಲೆ ಜನರನ್ನು ಅವರು ತಲುಪಬೇಕಾದ ಸ್ಥಳಕ್ಕೆ ಕರೆದೊಯ್ಯುವ ಸಾರಿಗೆ ವ್ಯವಸ್ಥೆಯಾಗಿದೆ. ಇನ್ನು ಈ ರೈಲಿನಲ್ಲಿ ಓಡಾಡುವಾಗ, ಡೀಸೆಲ್ ಇಂಜಿನ್‌ನಲ್ಲಿ ಚಲಿಸುವ ರೈಲಿನ ಮೈಲೇಜ್ ಎಷ್ಟಿರಬಹುದು ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿರಬಹುದು. ಮೈಲೇಜ್ ಎಂದರೆ ಒಂದು ಲೀಟರ್ ಇಂಧನದಲ್ಲಿ ಎಷ್ಟು ಕಿಲೋಮೀಟರ್ ಓಡುತ್ತದೆ ಎಂಬುದಾಗಿದೆ.

ರೈಲಿನ ಮೈಲೇಜ್ ಯಾವ ಅಂಶಗಳ ಮೇಲೆ ಅವಲಂಬಿತವಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಸಹ ಮುಖ್ಯವಾಗಿದೆ. ಏಕೆಂದರೆ ಒಂದಲ್ಲ ಹಲವು ಮಾನದಂಡಗಳು ಇದಕ್ಕೆ ಸೇರ್ಪಡೆಯಾಗುತ್ತವೆ.

ರೈಲಿನ ಮೈಲೇಜ್ ಕೂಡ ಆ ರೈಲಿನಲ್ಲಿರುವ ಕೋಚ್‌’ಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಕಡಿಮೆ ಬೋಗಿಗಳಲ್ಲಿ ಇಂಜಿನ್ ಮೇಲೆ ಕಡಿಮೆ ಒತ್ತಡವಿರುತ್ತದೆ. ಹೀಗಾಗಿ ಅದರ ಶಕ್ತಿ ಹೆಚ್ಚುತ್ತದೆ. ಆದರೆ ಡೀಸೆಲ್ ಇಂಜಿನ್ ರೈಲುಗಳ ಮೈಲೇಜ್ ಅನ್ನು ಗಂಟೆಗಳ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ.

ರೈಲಿನಲ್ಲಿ 12 ಕೋಚ್‌ಗಳಿದ್ದರೆ, ಆ ಪ್ಯಾಸೆಂಜರ್ ರೈಲು ಒಂದು ಕಿಲೋಮೀಟರ್ ಪ್ರಯಾಣಿಸಲು 6 ಲೀಟರ್ ಡೀಸೆಲ್ ಬಳಸುತ್ತದೆ. ಆದರೆ, ರೈಲಿನ ಮೈಲೇಜ್ ಅನ್ನು ಗಂಟೆಯ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಅಂದರೆ, ಒಂದು ಗಂಟೆಯಲ್ಲಿ ರೈಲು ಎಷ್ಟು ಪ್ರಯಾಣಿಸುತ್ತದೆ ಎಂಬುದರ ಆಧಾರದ ಮೇಲೆ ಮೈಲೇಜ್ ಅನ್ನು ಲೆಕ್ಕಹಾಕಲಾಗುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link