ದಿನಕ್ಕೆ ಎಷ್ಟು ಬಾರಿ ಮಲವಿಸರ್ಜಿಸುವುದು ಆರೋಗ್ಯಕರ; ಮಲಬದ್ಧತೆಯಿಂದ ಮುಕ್ತಿ ಹೊಂದಲು ಇಲ್ಲಿವೆ ಟಿಪ್ಸ್
ನೀವು ದಿನದಲ್ಲಿ ಎಷ್ಟು ಬಾರಿ ಮಲವಿಸರ್ಜನೆ ಮಾಡುತ್ತೀರಿ? ಇದು ಸಾಮಾನ್ಯವಾಗಿದೆಯೇ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಹಾಗಾದ್ರೆ ಆರೋಗ್ಯವಂತ ವ್ಯಕ್ತಿ ದಿನಕ್ಕೆ ಎಷ್ಟು ಬಾರಿ ಮಲವಿಸರ್ಜಿಸುವುದು ಉತ್ತಮ? ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ...
ಒಬ್ಬ ಆರೋಗ್ಯವಂತ ಸಾಮಾನ್ಯ ವ್ಯಕ್ತಿಯು ದಿನಕ್ಕೆ ಮೂರು ಬಾರಿಯಿಂದ ವಾರಕ್ಕೆ ಮೂರು ಬಾರಿ ಮಲವಿಸರ್ಜಿಸುವುದು ಆರೋಗ್ಯಕರ. ಆದರೆ ಮಲವು ಎಷ್ಟು ಸುಲಭವಾಗಿ ಹಾದುಹೋಗುತ್ತದೆ ಎನ್ನುವುದು ಬಹಳ ಮುಖ್ಯ.
ನಿಮಗೆ ಮಲವಿಸರ್ಜಿಸಲು ಕಷ್ಟವಾಗುತ್ತಿದ್ದು, ವಾರಕ್ಕೆ ಮೂರು ಬಾರಿಗಿಂತ ಕಡಿಮೆ ಹೋದರೆ ನೀವು ಮಲಬದ್ಧತೆ ಹೊಂದಿರಬಹುದು. ದಿನಕ್ಕೆ ಮೂರು ಬಾರಿಗಿಂತ ಹೆಚ್ಚು ನೀರು ನೀರಾಗಿ ಸ್ರವಿಸುತ್ತಿದ್ದರೆ ಅತಿಸಾರವೆಂದು ಪರಿಗಣಿಸಲಾಗುತ್ತದೆ.
ನೀವು ಸೇವಿಸುವ ಆಹಾರ ಮತ್ತು ಪಾನೀಯಗಳು ನೀವು ಎಷ್ಟು ಬಾರಿ ಮಲವಿಸರ್ಜನೆ ಮಾಡುತ್ತೀರಿ ಎಂಬುದನ್ನು ನಿರ್ಧರಿಸುತ್ತವೆ. ಅವುಗಳು ಮಲದ ಬಣ್ಣ ಮತ್ತು ಸ್ಥಿರತೆಯನ್ನೂ ಬದಲಿಸುತ್ತವೆ. ಹೀಗಾಗಿ ನೀವು ಹೆಚ್ಚು ನೀರು ಕುಡಿಯುವುದು ಮುಖ್ಯ.
ಹೆಚ್ಚು ನಾರಿನಾಂಶವಿರುವ ಆಹಾರಗಳು ಹೆಚ್ಚು ಮಲವಿಸರ್ಜನೆಗೆ ಸಹಾಯ ಮಾಡುತ್ತದೆ. ಒಂದು ವೇಳೆ ನಿಮಗೆ ಮಲವಿಸರ್ಜಿಸಲು ಕಷ್ಟವಾದರೆ, ತಾಜಾ ಹಣ್ಣುಗಳು, ತರಕಾರಿಗಳು, ಧಾನ್ಯಗಳನ್ನು ಸೇವಿಸಿರಿ. ಇವುಗಳು ನಿಮ್ಮ ಮಲವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
ಬೆಳಗ್ಗೆ ಎದ್ದು ಕಾಫಿ ಕುಡಿಯುವುದರಿಂದ ನಿಮ್ಮ ಮಲವಿಸರ್ಜನೆಗೆ ಸಹಾಯವಾಗುತ್ತದೆ. ಏಕೆಂದರೆ ಕಾಫಿಯಲ್ಲಿರುವ ಕೆಫೀನ್ ನಿಮ್ಮ ಕರುಳಿನಲ್ಲಿನ ಸಂಕೋಚನಗಳನ್ನು ಸಕ್ರಿಯಗೊಳಿಸುತ್ತದೆ. ಮಲವು ಹೆಚ್ಚು ವೇಗವಾಗಿ ಮುಂದಕ್ಕೆ ತಳ್ಳಲು ಇದು ಸಹಾಯ ಮಾಡುತ್ತದೆ.
ಅತಿಸಾರ ಅಥವಾ ಇತರ ಯಾವುದೇ ಕಾರಣಗಳಲ್ಲದೆ, ನೀವು ಹೆಚ್ಚು ಮಲವಿಸರ್ಜಿಸುತ್ತಿದ್ದರೆ, ಅನ್ನ, ಪಾಸ್ತಾ, ಮೊಟ್ಟೆಯಂತಹ ಆಹಾರಗಳನ್ನು ಸೇವಿಸುವುದರಿಂದ ನೀವು ಮಲವಿಸರ್ಜನೆಯನ್ನು ನಿಯಂತ್ರಿಸಬಹುದು.
ಮಲವಿಸರ್ಜನೆ ಎನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾದರೂ ನಿಯಮಿತ ಚಕ್ರವನ್ನು ಹೊಂದಿರುವುದು ಮುಖ್ಯ. ತಾಜಾ ಹಣ್ಣುಗಳು ಮತ್ತು ತರಕಾರಿಗಳಿಂದ ತುಂಬಿದ ಆಹಾರವನ್ನು ನೀವು ಸೇವಿಸಬೇಕು.