ಚೈತ್ರಾ ಕುಂದಾಪುರಗೆ ಕಾನೂನು ಸಂಕಷ್ಟ.. ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದ ಫೈರ್ ಬ್ರಾಂಡ್! ಈಕೆ ದೊಡ್ಮನೆಯಲ್ಲಿ ಪ್ರತಿ ಎಪಿಸೋಡ್‌ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
ಬಿಗ್ ಬಾಸ್ ಸ್ವರ್ಧಿ ಚೈತ್ರಾ ಕುಂದಾಪುರ ಇಂದು ಏಕಾಏಕಿ ಕೋರ್ಟ್ ಕಟಕಟೆಯಲ್ಲಿ ಹಾಜರಾಗಿದ್ದರು. ವಂಚನೆ ಕೇಸ್ ಸಂಬಂಧ ಸಮನ್ಸ್ ಜಾರಿ ಹಿನ್ನೆಲೆ ಬಿಗ್ ಬಾಸ್ ಮನೆಯನ್ನ ತೊರೆದು ೧ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರಾಗಿ ವಾಪಸ್ಸಾಗಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಇವತ್ತು ಬಿಗ್ ಬಾಸ್ ಮನೆಯನ್ನ ತೊರೆದು ಕೋರ್ಟ್‌ನ ಕಟಕಟೆಯಲ್ಲಿ ಕಾಣಿಸಿಕೊಂಡರು. ಬಿಗ್ ಬಾಸ್ ನಿಂದ ಎಲಿಮಿನೇಟ್ ಏನಾದ್ರು ಆಗಿ ಮನೆಯಿಂದ ಹೊರ ಬಂದ್ರಾ ಅಂತಾ ನೋಡಿದ್ರೆ ಖಂಡಿತಾ ಇಲ್ಲ. ವಂಚನೆ ಕೇಸಲ್ಲಿ ಕೋರ್ಟ್ ನಿಂದ ಸಮನ್ಸ್ ಜಾರಿಯಾದ ಹಿನ್ನೆಲೆ ಎಸಿಎಂಎಂ 1ರ ನ್ಯಾಯಾಧೀಶರ ಮುಂದೆ ಚೈತ್ರ ಹಾಜರಾಗಿದ್ದರು.
2023 ರಲ್ಲಿ ಸಿಸಿಬಿಯಿಂದ ಚೈತ್ರ ಕುಂದಾಪುರ ಆಂಡ್ ಗ್ಯಾಂಗ್ ವಂಚನೆ ಕೇಸಲ್ಲಿ ಅರೆಸ್ಟ್ ಆಗಿ ಜೈಲು ಸೇರಿತ್ತು. ಇದೀಗ ಅದೇ ಕೇಸ್‌ನ ವಾರೆಂಟ್ ರೀ ಕಾಲ್‌ಗಾಗಿ ಬಿಗ್ ಬಾಸ್ ಮನೆ ತೊರೆದು ಕೋರ್ಟ್ ಕಟಕಟೆ ಹತ್ತಿದ್ದಾರೆ.
ಇನ್ನು ಚೈತ್ರಾ ಅವರ ಹಿನ್ನೆಲೆ ಗಮನಿಸುವುದಾದರೆ, ಅವರು ಉಡುಪಿ ಜಿಲ್ಲೆಯ ಕುಂದಾಪುರದವರು. ತೆಕ್ಕಟ್ಟೆ ಎಂಬಲ್ಲಿ ಶಾಲಾ ಹಾಗೂ ಪಿಯುಸಿ ಶಿಕ್ಷಣವನ್ನು ಮುಗಿಸಿದ ಅವರು, ನಂತರ ಕೊಣಾಜೆಯಲ್ಲಿ ಪದವಿ ಪೂರ್ಣಗೊಳಿಸಿದರು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಶಿಕ್ಷಣ ಪೂರ್ತಿಗೊಳಿಸಿದ ಬಳಿಕ ಸುದ್ದಿ ವಾಹಿನಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ಆನಂತರ ಉಡುಪಿಯ ಸ್ಪಂದನಾ ಟಿವಿ ಹಾಗೂ ಮುಕ್ತ ನ್ಯೂಸ್, ಉದಯವಾಣಿ ಪತ್ರಿಕೆಯಲ್ಲೂ ಕೆಲಕಾಲ ಉಪಸಂಪಾದಕಿಯಾಗಿ ಕೆಲಸ ಮಾಡಿದ್ದರು.
ಪತ್ರಕರ್ತೆಯಾಗಿ, ನಿರೂಪಕಿಯಾಗಿ, ಭಾಷಣಕಾರರಾಗಿ ಗಮನ ಸೆಳೆದಿರುವ ಚೈತ್ರಾ ಹೆಚ್ಚು ಸುದ್ದಿಯಾಗಿದ್ದು ತಮ್ಮ ಆಕರ್ಷಣೀಯ ಭಾಷಣದಿಂದ. ಹಿಂದುತ್ವದ ವಿಚಾರಧಾರೆಗಳನ್ನು ತನ್ನದೇ ವಿಶೇಷ ಶೈಲಿಯ ಪ್ರಸ್ತುತ ಪಡಿಸುವ ಚೈತ್ರಾ ಸದ್ಯ ಬಿಗ್ ಬಾಸ್ ಮನೆಯಲ್ಲಿ ಪ್ರಮುಖ ಸ್ಪರ್ಧಿ ಎಂದೇ ಗುರುತಿಸಿಕೊಂಡಿದ್ದಾರೆ.
ಬಿಗ್ ಬಾಸ್‌ನಲ್ಲಿ ಪ್ರಬಲ ಸ್ಪರ್ಧಿಯಾಗಿರುವ ಚೈತ್ರಾಗೆ ವಾರಕ್ಕೆ 1 ಲಕ್ಷದವರೆಗೆ ಸಂಭಾವನೆ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಚೈತ್ರಾ ಅವರಿಗೆ ಈಗ 28 ವರ್ಷ ವಯಸ್ಸು.