ಹೀಗೆ ಮಾಡಿದರೆ.. ಮೇಕಪ್ ಇಲ್ಲದಿದ್ದರೂ ತುಂಬಾ ಕ್ಯೂಟ್‌ ಆಗಿ ಕಾಣುತ್ತೀರಿ..! ದುಡ್ಡಾದ್ರೂ ಉಳಿಯುತ್ತೆ..

Sat, 17 Aug 2024-5:21 pm,

ಹೆಂಗಸರು ಸುಂದರವಾಗಿ ಕಾಣುವುವವರೆಗೂ ಮನೆಯಿಂದ ಹೊರಗೆ ಬೀಳುವುದಿಲ್ಲ. ಬ್ಯೂಟಿ ಪ್ರಾಡಕ್ಟ್ ಎಷ್ಟೇ ದುಬಾರಿಯಾದರೂ ಅದನ್ನು ಖರೀದಿಸಿ ಬಳಸುತ್ತಾರೆ. ಮೇಕಪ್ ಮಾತ್ರ ನಮ್ಮನ್ನು ಸುಂದರವಾಗಿಸುತ್ತದೆ ಎಂದು ಹಲವರು ನಂಬುತ್ತಾರೆ. ಆದರೆ ನೀವು ಮೇಕಪ್ ಇಲ್ಲದೆಯೂ ಸುಂದರವಾಗಿ ಕಾಣಬಹುದು... ಅದಕ್ಕಾಗಿ ಈ ಕೆಳಗೆ ನೀಡಿರುವ ಸಲಹೆ ಪಾಲಿಸಿ ಅಷ್ಟೇ...  

ಆರೋಗ್ಯಕರ ಆಹಾರವು ನಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ನೀಡುತ್ತದೆ. ನಮ್ಮ ದೇಹಕ್ಕೆ ಶಕ್ತಿ ನೀಡುವುದಲ್ಲದೆ, ನಮ್ಮ ತ್ವಚೆಯನ್ನು ಆರೋಗ್ಯವಾಗಿಡುತ್ತದೆ. ಗುಡ್‌ ಫುಡ್‌ ನಮ್ಮ ದೇಹವನ್ನು ಒಳಗಿನಿಂದ ಗಟ್ಟಿ ಮಾಡುವುದು ಮಾತ್ರವಲ್ಲದೆ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.   

ಅತಿಯಾದ ನಿದ್ರೆ ಒಳ್ಳೆಯದಲ್ಲ. ಕಡಿಮೆ ಉತ್ತಮ ಅಲ್ಲ. ಇದು ನಿಮ್ಮ ಮುಖದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ ನೀವು ನೈಸರ್ಗಿಕವಾಗಿ ಸುಂದರವಾಗಿ ಕಾಣಲು ಸಾಕಷ್ಟು ನಿದ್ರೆಯನ್ನು ಮಾಡಬೇಕು. ಇದರಿಂದ ನೀವು ಮೇಕಪ್ ಇಲ್ಲದೆಯೂ ಸುಂದರವಾಗಿ ಕಾಣುತ್ತೀರಿ.   

ವ್ಯಾಯಾಮ ಮಾತ್ರ ನಮ್ಮ ದೇಹವನ್ನು ಸದೃಢವಾಗಿ ಮತ್ತು ಆರೋಗ್ಯವಾಗಿರಿಸುತ್ತದೆ ಎಂದು ಭಾವಿಸುವುದು ತಪ್ಪು. ನೀವು ಪ್ರತಿದಿನ ಯೋಗ, ವ್ಯಾಯಾಮ, ಧ್ಯಾನ ಮತ್ತು ಬೆಳಗಿನ ವಾಕ್ ಮಾಡಿದರೆ, ಅದು ನಿಮ್ಮ ದೇಹ, ಮನಸ್ಸು ಮತ್ತು ದೇಹವನ್ನು ಒಳಗಿನಿಂದ, ಹೊರಗಿನಿಂದ ಆರೋಗ್ಯಕರವಾಗಿರಿಸುತ್ತದೆ. ಒತ್ತಡವನ್ನು ಕಡಿಮೆಮಾಡುತ್ತದೆ. ಇದರಿಂದ ನೀವು ಮಾನಸಿಕವಾಗಿ ಆರೋಗ್ಯವಂತರಾಗುತ್ತೀರಿ.   

ಸಾಕಷ್ಟು ನೀರು : ನಮ್ಮ ದೇಹಕ್ಕೆ ಸಾಕಷ್ಟು ನೀರು ಬೇಕು. ನೀರು ನಮ್ಮ ದೇಹವನ್ನು ಹೈಡ್ರೇಟ್ ಆಗಿ ಇರಿಸುತ್ತದೆ ಮತ್ತು ದೇಹವನ್ನು ಸಕ್ರಿಯವಾಗಿರಿಸುತ್ತದೆ. ಇದು ಒಣ ಚರ್ಮ ಮತ್ತು ಮೊಡವೆಗಳಂತಹ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯುತ್ತದೆ.   

ದೇಹ ಶುದ್ಧ : ಸುಂದರವಾದ, ಹೊಳೆಯುವ ಚರ್ಮವನ್ನು ಪಡೆಯಲು ನಿಮ್ಮ ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದಕ್ಕಾಗಿ ನೀವು ಪ್ರತಿದಿನ ಸ್ನಾನ ಮಾಡಬೇಕು. ಕಾಲಕಾಲಕ್ಕೆ ನಿಮ್ಮ ಕೂದಲನ್ನು ಸಹ ತೊಳೆಯಿರಿ. ಇದು ಬ್ಯಾಕ್ಟೀರಿಯಾ, ತುರಿಕೆ, ಅಲರ್ಜಿ ಮುಂತಾದ ಸಮಸ್ಯೆಗಳನ್ನು ತಡೆಯುತ್ತದೆ.  

ಫಿಟ್‌ ಡ್ರೇಸ್‌ : ನಿಮ್ಮ ದೇಹಕ್ಕೆ ಹೊಂದುವ ಬಟ್ಟೆಗಳನ್ನು ಧರಿಸುವುದರಿಂದ ನೀವು ಮತ್ತು ನಿಮ್ಮ ವ್ಯಕ್ತಿತ್ವವು ಉತ್ತಮವಾಗಿ ಕಾಣುತ್ತದೆ. ಇದು ಮೇಕ್ಅಪ್ ಇಲ್ಲದೆ ಸುಂದರವಾಗಿ ಕಾಣಲು ಸಹಾಯ ಮಾಡುತ್ತದೆ. ಆದ್ದರಿಂದ ನಿಮ್ಮ ದೇಹದ ಪ್ರಕಾರಕ್ಕೆ ಅನುಗುಣವಾಗಿ ಉಡುಗೆಯನ್ನು ಧರಿಸಿ.  

ಚರ್ಮ ಮತ್ತು ಕೂದಲಿನ ಆರೈಕೆ ಮುಖ್ಯ : ನೀವು ಮೇಕ್ಅಪ್ ಧರಿಸದಿದ್ದರೂ, ಸುಂದರವಾಗಿ ಕಾಣಲು, ಕೂದಲು ಮತ್ತು ಚರ್ಮ ಎರಡಕ್ಕೂ ಹೆಚ್ಚಿನ ಕಾಳಜಿ ಬೇಕು. ಇದಕ್ಕಾಗಿ ನೀವು ಚರ್ಮವನ್ನು moisturize ಮಾಡಬೇಕಾಗುತ್ತದೆ. ಅಲ್ಲದೆ ಕೂದಲನ್ನು ಬಾಚಿಕೊಳ್ಳಿ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link