ನೀವು ಸೇವಿಸುವ ಸಕ್ಕರೆಯಲ್ಲಿ ಪ್ಲಾಸ್ಟಿಕ್, ಯೂರಿಯಾದ ಕಲೆಬೆರಿಕೆ ಇರಬಹುದು ಹುಷಾರ್..!
Impurity In Sugar: ಮಾರುಕಟ್ಟೆಯಲ್ಲಿ ಆಹಾರ ಸಿಗುವುದು ಕಷ್ಟವಾಗಿ ಬಿಟ್ಟಿದೆ. ಸಕ್ಕರೆಯನ್ನೂ ಕಲಬೆರಕೆ ಮಾಡಿ ಮಾರಾಟ ಮಾಡಲಾಗುತ್ತಿದೆ. ಸಕ್ಕರೆಯನ್ನು ಸುಣ್ಣ, ಸರ್ಫ್ ಮತ್ತು ವಿಷಕಾರಿ ಯೂರಿಯಾದೊಂದಿಗೆ ಮಿಕ್ಸ್ ಮಾಡಿ ಮಾರಾಟ ಮಾಡಲಾಗುತ್ತಿದೆ.
ಸಕ್ಕರೆಯನ್ನು ಯೂರಿಯಾ ಬೆರೆಸಿ ಮಾರಾಟ ಮಾಡಲಾಗುತ್ತಿದೆ. ಇವುಗಳ ಜೊತೆಗೆ ಸಣ್ಣ ಪ್ಲಾಸ್ಟಿಕ್ ತುಂಡುಗಳನ್ನು ಪುಡಿ ಮಾಡಿ ಮಿಶ್ರಣ ಮಾಡಲಾಗುತ್ತದೆ. ಕಲಬೆರಕೆ ಸಕ್ಕರೆಯನ್ನು ತಯಾರಿಸಲು ಸೀಮೆಸುಣ್ಣದ ಪುಡಿ ಮತ್ತು ಬಿಳಿ ಮರಳನ್ನು ಬೆರೆಸಲಾಗುತ್ತದೆ.
ಈ ವಿಷಕಾರಿ ಸಕ್ಕರೆ ಸೇವನೆಯಿಂದ ಅನೇಕ ಮಾರಣಾಂತಿಕ ಕಾಯಿಲೆಗಳು ಬರುತ್ತಿವೆ. ಈ ರೀತಿ ಕಲಬೆರಕೆ ಸಕ್ಕರೆಯನ್ನು ಗುರುತಿಸುವುದು ಹೇಗೆ ಎಂದು ಎಲ್ಲರಿಗೂ ತಿಳಿದಿರಬೇಕು.
FSSAI ಕಲಬೆರಕೆ ಸಕ್ಕರೆಯನ್ನು ಪತ್ತೆಹಚ್ಚಲು ಕೆಲವು ಸುಲಭ ಮಾರ್ಗಗಳನ್ನು ನೀಡಿದೆ . ಇದರ ಸಹಾಯದಿಂದ ನೀವು ಶುದ್ಧ ಸಕ್ಕರೆ ಮತ್ತು ಕಲಬೆರಕೆ ಸಕ್ಕರೆಯನ್ನು ಸುಲಭವಾಗಿ ಗುರುತಿಸಬಹುದು.
ಸಕ್ಕರೆಯಲ್ಲಿ ಸುಣ್ಣ ಅಥವಾ ಪ್ಲಾಸ್ಟಿಕ್ ಪುಡಿ ಇದೆಯೇ ಎಂದು ಪರೀಕ್ಷಿಸಲು ಸಣ್ಣ ಪರೀಕ್ಷೆಯನ್ನು ಮಾಡಬೇಕು. ಇದಕ್ಕಾಗಿ ಒಂದು ಲೋಟ ನೀರು ತೆಗೆದುಕೊಳ್ಳಿ. ಆ ನೀರಿಗೆ ಒಂದು ಚಮಚ ಸಕ್ಕರೆ ಸೇರಿಸಿ ಕರಗಿಸಿ. ನೀರಿನಲ್ಲಿ ಚೆನ್ನಾಗಿ ಕರಗಿದರೆ ಸಕ್ಕರೆ ಶುದ್ಧವಾಗಿದೆ ಎಂದು ಅರ್ಥ.
ಸಕ್ಕರೆಗೆ ಯೂರಿಯಾ ಕಲೆಬೆರಿಕೆ ಮಾಡಿದ್ದಾರೆ ಎಂದು ಕಂಡು ಹಿಡಿಯಲು ಸಕ್ಕರೆಯನ್ನು ನೀರಿಗೆ ಹಾಕಿ ಕರಗಲು ಬಿಡಿ, ಸಕ್ಕರೆಯಲ್ಲಿ ಅಮೋನಿಯಾ ವಾಸನೆಯಾಗಿದ್ದರೆ, ಕಲಬೆರಕೆ ಸಕ್ಕರೆ ಎಂದರ್ಥ.