ಅಂಗಡಿಗಿಂತ ಮನೆಯಲ್ಲಿಯೇ ಈ ರೀತಿ ಚಿನ್ನದ ಆಭರಣಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು..! ಹಣ ಉಳಿಯುತ್ತೆ..

Sat, 31 Aug 2024-9:32 pm,

ಚಿನ್ನಾಭರಣ ಮಹಿಳೆಯರಿಗೆ ಪ್ರಾಣ. ಚಿನ್ನಾಭರಣ ಖರೀದಿಸುವುದು ಅನೇಕರ ಕನಸು. ಮದುವೆಯಿಂದ ಹಿಡಿದು ಇತರ ಶುಭ ಸಮಾರಂಭಗಳಿಗೆ ಚಿನ್ನಾಭರಣಗಳನ್ನು ಬಳಸಲಾಗುತ್ತದೆ. ಸದ್ಯ ಚಿನ್ನದ ಬೆಲೆ ಹೆಚ್ಚುತ್ತಿದೆ. ಇದರಿಂದ ಜನರು ಚಿನ್ನ ಖರೀದಿಸಲು ಭಯಪಡುವಂತಾಗಿದೆ.  

ಖರೀದಿಸಿದಾಗ ಹೊಳೆಯುವ ಚಿನ್ನ, ನಂತರ ತನ್ನ ಗುಣವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. ಚಿನ್ನವನ್ನು ಪಾಲಿಶ್ ಮಾಡಲು ಅಂಗಡಿಗೆ ಕೊಂಡೊಯ್ದರೆ ಮೋಸ ಹೋಗುವ ಭಯವೂ ಇದೆ. ಅದನ್ನು ಬೇರೆಡೆ ತೆಗೆದುಕೊಂಡು ಹೋಗಲು ಭಯವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮನೆಯಲ್ಲಿಯೇ ಚಿನ್ನವನ್ನು ಸ್ವಚ್ಛಗೊಳಿಸಿ ಪಾಲಿಶ್ ಮಾಡಬಹುದು.. ವಿಧಾನ ಈ ಕೆಳಗಿನಂತಿದೆ..   

ನಾವು ಮನೆಯಲ್ಲಿ ದಿನನಿತ್ಯ ಬಳಸುವ ಪೇಸ್ಟ್ ಅನ್ನು ಚಿನ್ನದ ಆಭರಣಗಳನ್ನು ಸ್ವಚ್ಛಗೊಳಿಸಲು ಸಹ ಬಳಸಬಹುದು. ಇದರಲ್ಲಿರುವ ಫ್ಲೋರೈಡ್ ಕಲೆಗಳನ್ನು ಸ್ವಚ್ಛಗೊಳಿಸುತ್ತದೆ ಮತ್ತು ಹೊಳಪನ್ನು ಮರುಸ್ಥಾಪಿಸುತ್ತದೆ. ಪೇಸ್ಟ್  ತೆಗೆದುಕೊಂಡು ಆಭರಣದ ಮೇಲೆ ಉಜ್ಜಿ. ಸ್ಕ್ರಬ್ ಮಾಡಿದ ನಂತರ ನೀರಿನಿಂದ ತೊಳೆಯಿರಿ. ನಂತರ ಹತ್ತಿ ಬಟ್ಟೆಯಿಂದ ಒರೆಸಿ. ಹೀಗೆ ಮಾಡುವುದರಿಂದ ಅವುಗಳಲ್ಲಿರುವ ಧೂಳು, ಕೊಳೆ ಮಾಯವಾಗುತ್ತದೆ.  

ಚಿನ್ನವನ್ನು ಸೋಪಿನ ನೀರಿನಿಂದ ಸುಲಭವಾಗಿ ಸ್ವಚ್ಛಗೊಳಿಸಬಹುದು, ಅಲ್ಲದೆ, ಹೊಳೆಯುವಂತೆಯೂ ಮಾಡಬಹುದು. ಒಂದು ಸಣ್ಣ ಬಟ್ಟಲಿನಲ್ಲಿ ಅರ್ಧದಷ್ಟು ಬಿಸಿನೀರನ್ನು ತೆಗೆದುಕೊಂಡು ಅದಕ್ಕೆ ಸಾಬೂನು ನೀರನ್ನು ಸೇರಿಸಿ. ಚಿನ್ನದ ಆಭರಣಗಳನ್ನು ಈ ನೀರಿನಲ್ಲಿ 15 ನಿಮಿಷಗಳ ಕಾಲ ನೆನೆಸಿಡಿ. ನಂತರ, ಹಲ್ಲುಜ್ಜುವ ಬ್ರಷ್ ನಿಂದ ಆಭರಣವನ್ನುಯ ಉಜ್ಜಿ..   

ಬಿಸಿ ನೀರಿನಲ್ಲಿ ಚಿನ್ನವನ್ನು ಮುಳುಗುವಂತೆ ಇರಿಸಿ 10 ನಿಮಿಷಗಳ ಕಾಲ ಬಿಡಿ.. ನಂತರ, ಕೊಳಕು ಹೋಗುವವರೆಗೆ ಹಲ್ಲುಜ್ಜುವ ಬ್ರಷ್‌ನಿಂದ ಉಜ್ಜಿ. ಉಜ್ಜಿದ ನಂತರ ಹತ್ತಿ ಬಟ್ಟೆಯಿಂದ ಸ್ವಚ್ಛಗೊಳಿಸಿದರೆ ಹೊಸದರಂತೆ ಹೊಳೆಯುತ್ತದೆ.   

ನಿಮ್ಮ ಚಿನ್ನಾಭರಣದಲ್ಲಿ ರತ್ನ, ಮುತ್ತು, ಹವಳ, ಪಚ್ಚೆ, ಮಾಣಿಕ್ಯ ಇತ್ಯಾದಿಗಳಿದ್ದರೆ ನೀವು ಅದನ್ನು ಬಹಳ ಎಚ್ಚರಿಕೆಯಿಂದ ಸ್ವಚ್ಛಗೊಳಿಸಬೇಕು. ಶಾಂಪೂ ಬಳಸಿ ಅವುಗಳನ್ನು ಸ್ವಚ್ಛಗೊಳಿಸಬಹುದು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link