ಪೋರ್ನ್ ವಿಡಿಯೋಗಳಿಗೆ ಅಡಿಕ್ಟ್‌ ಆಗಿದ್ದೀರಾ..? ಹೊರಬರಲು ಪ್ರತಿದಿನ ಈ ಕೆಲಸಗಳನ್ನು ಮಾಡಿ

Sun, 12 May 2024-6:37 pm,

ಪೋರ್ನ್ ನೋಡುವುದು ನಿಮ್ಮ ಆರೋಗ್ಯದ ಮೇಲೆ ಮಾತ್ರವಲ್ಲದೆ ನಿಮ್ಮ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಅಶ್ಲೀಲ ಚಿತ್ರಗಳನ್ನು ಪುರುಷರು, ಮಹಿಳೆಯರು, ಕಿರಿಯರು ಮತ್ತು ಹಿರಿಯರು ಎಂಬ ಭೇದವಿಲ್ಲದೆ ಎಲ್ಲರೂ ನೋಡುತ್ತಾರೆ.. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂಬುವುದುನ್ನು ನೆನಪಿನಲ್ಲಿಡಿ..  

18 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೂ ಸಹ, ಅಶ್ಲೀಲತೆಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಾನಿಕಾರಕವಾಗಿದೆ. ಅಷ್ಟೇ ಅಲ್ಲ, ಧೂಮಪಾನ ಮತ್ತು ಮದ್ಯಪಾನದಂತೆಯೇ ಪೋರ್ನ್ ವೀಕ್ಷಿಸುವುದು ಅನಾರೋಗ್ಯಕರ,. ಆದಷ್ಟು ಬೇಗ ನೀವು ಈ ಕ್ರೂರ ಪ್ರಪಂಚದಿಂದ ಹೊರ ಬಂದರೆ ಉತ್ತಮ..    

ನಿಮ್ಮಲ್ಲಿರುವ ಎಲ್ಲಾ ಅಶ್ಲೀಲ ಚಿತ್ರಗಳನ್ನು ಅಳಿಸಿ. ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳಿಗೆ ಪೇರೆಂಟಲ್ ಲಾಕ್ ಹಾಕುವ ಮೂಲಕ ಇಂಟರ್ನೆಟ್ ಬಳಕೆಯನ್ನು ನಿಯಂತ್ರಿಸಬಹುದು. ಅಲ್ಲದೆ, ಹೆಚ್ಚು ಕಾಲ ಡಿಜಿಟಲ್ ಜೀವನವನ್ನು ನಡೆಸಬೇಡಿ. ಸಾಧ್ಯವಾದಷ್ಟು ಕುಟುಂಬ, ಸ್ನೇಹಿತರ ಜೊತೆ ಕಾಲ ಕಳೆಯಿರಿ..      

ಪೋರ್ನ್‌ ವೀಕ್ಷಿಸಲು ನಿಮ್ಮನ್ನು ಪ್ರಚೋದಿಸುವ ಅಂಶಗಳು ಯಾವುವು ಎನ್ನುವುದನ್ನು ಮೊದಲು ಪರಿಗಣಿಸಿ. ಅದು ಹಾಡು, ದೃಶ್ಯ, ವ್ಯಕ್ತಿ ಅಥವಾ ಯುವತಿಯ ಫೋಟೋಗಳೂ ಸಹ ಆಗಿರಬಹುದು. ಒಮ್ಮೆ ನೀವು ನಿಮ್ಮನ್ನು ಪ್ರಚೋದಿಸುವ ವಿಷಯಗಳನ್ನು ಕಂಡುಕೊಂಡರೆ, ಅದರಿಂದ ಹೊರಬರುವ ಮಾರ್ಗವನ್ನು ಕಂಡುಕೊಳ್ಳಬಹುದು.    

ನೀವು ಪೋರ್ನ್ ನೋಡುವ ಪ್ರಲೋಭನೆಗೆ ಒಳಗಾಗಿದ್ದರೆ ತಕ್ಷಣವೇ ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯಿರಿ. ಉದಾಹರಣೆಗೆ ಪುಸ್ತಕಗಳನ್ನು ಓದುವುದು, ಯೋಗ ಮಾಡುವುದು, ಮನೆಗೆಲಸ ಮಾಡುವುದು. ನೀವು ಒತ್ತಡವನ್ನು ಅನುಭವಿಸಿದಾಗಲೂ, ಪೋರ್ನ್ ಮೇಲೆ ಕೇಂದ್ರೀಕರಿಸದೆ ಆರೋಗ್ಯಕರ ರೀತಿಯಿಂದ ಅದರಿಂದ ಹೊರ ಬರಲು ಪ್ರಯತ್ನಿಸಿ.  

ಅಲ್ಲದೆ, ದೀರ್ಘಕಾಲ ಒಂಟಿಯಾಗಿರುವುದು ಪೋರ್ನ್‌ಗೆ ಅಡಿಕ್ಟ್‌ ಆಗಲು ಕಾರಣವಾಗಬಹುದು. ಆದ್ದರಿಂದ, ನಿಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯಿರಿ. ಏಕಾಂಗಿ ಸಮಯವನ್ನು ಕಡಿಮೆ ಮಾಡಿ. ಇವುಗಳಲ್ಲಿ ಯಾವುದೂ ಸಹಾಯ ಮಾಡದಿದ್ದರೆ ತಕ್ಷಣ ಸರಿಯಾದ ವೈದ್ಯಕೀಯ ಸಲಹೆಯನ್ನು ಪಡೆಯಲು, ವೈದ್ಯರನ್ನು ಸಂಪರ್ಕಿಸಲು ಹಿಂಜರಿಯಬೇಡಿ.     

ZEENEWS TRENDING STORIES

By continuing to use the site, you agree to the use of cookies. You can find out more by Tapping this link