ಈ ಒಂದು ಟ್ರಿಕ್ ಬಳಸಿ, 10 ನಿಮಿಷದಲ್ಲಿ ನಿಮ್ಮ ಬಿಳಿ ಕೂದಲಿಗೆ ಗುಡ್ ಬೈ ಹೇಳಿ..!
ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.
ನಿಂಬೆ ತೆಂಗಿನ ಎಣ್ಣೆಯ ಸಹಾಯದಿಂದ ಕೂದಲು ಬಿಳಿಯಾಗುವುದನ್ನು ನಿಲ್ಲಿಸಬಹುದು. ತೆಂಗಿನೆಣ್ಣೆಯಲ್ಲಿ ನಿಂಬೆರಸ ಬೆರೆಸಿ ತಲೆಗೆ ಹಚ್ಚಿಕೊಳ್ಳಿ. ಹೀಗೆ ಮಾಡುವುದರಿಂದ ರಕ್ತ ಪರಿಚಲನೆ ಸಾಮಾನ್ಯವಾಗುತ್ತದೆ ಮತ್ತು ಬಿಳಿ ಕೂದಲು ಕಪ್ಪಾಗುತ್ತದೆ.
ನೀವು ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲು ಹೊಂದಿದ್ದರೆ, ನಿಂಬೆ ತೆಂಗಿನ ಎಣ್ಣೆ ಮಿಶ್ರಣವನ್ನು ನಿಮ್ಮ ತಲೆಗೆ ಪ್ರತಿದಿನ ಹಚ್ಚುವುದರಿಂದ ನಿಮ್ಮ ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುತ್ತದೆ. ದೇಹದಲ್ಲಿ ಮೆಲನಿನ್ ಉತ್ಪಾದನೆ ಕಡಿಮೆಯಾದಾಗ ಅಥವಾ ನಿಂತಾಗ ಕೂದಲು ಬಿಳಿ ಬಣ್ಣಕ್ಕೆ ತಿರುಗಲು ಆರಂಭಿಸುತ್ತದೆ. 10 ನಿಮಿಷಗಳಲ್ಲಿ ಕಪ್ಪು ಕೂದಲು ಪಡೆಯಲು, ಈ ಎಣ್ಣೆಯನ್ನು ಮೆಹೆಂದಿ ಮತ್ತು ಮೆಂತ್ಯದ ಪುಡಿಯೊಂದಿಗೆ ಬೆರೆಸಿ ನಿಮ್ಮ ಕೂದಲಿಗೆ ಹಚ್ಚಿ ನಂತರ ನಿಮ್ಮ ಕೂದಲನ್ನು ತೊಳೆಯಿರಿ.
ನಿಂಬೆಯನ್ನು ಕೂದಲಿಗೆ ಹಲವು ವಿಧಗಳಲ್ಲಿ ಬಳಸಲಾಗುತ್ತದೆ. ಈ ರೀತಿ ನಿಂಬೆಹಣ್ಣನ್ನು ಬಳಸುವುದರಿಂದ ಬಿಳಿ ಕೂದಲಿನ ಸಮಸ್ಯೆ ಅಷ್ಟೆ ಅಲ್ಲದೆ ಡ್ಯಾಂಡ್ರಫ್ ನಂತಹ ಸಮಸ್ಯೆಗಳನ್ನು ಹೋಗಲಾಡಿಸಬಹುದು. ನಿಂಬೆಯು ಆಂಟಿಫಂಗಲ್ ಗುಣಲಕ್ಷಣಗಳಿಂದ ಕೂಡಿದ್ದು, ಕೂದಲನ್ನು ಗಾಢವಾದ ರೇಷ್ಮೆಯಂತೆ ಮೃದುಗೊಳಿಸುತ್ತದೆ.
ತೆಂಗಿನ ಎಣ್ಣೆ ಕೂದಲಿನ ಬೆಳವಣಿಗೆ ಹಾಗೂ ಕಪ್ಪಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಷ್ಟೆ ಅಲ್ಲದೆ ಹೊಳೆಯುವಂತೆ ಮಾಡುತ್ತದೆ. ಹಾಗಾಗಿ ಕೊಬ್ಬರಿ ಎಣ್ಣೆಯನ್ನು ನಿಂಬೆ ರಸದೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿದರೆ ಬಿಳಿ ಕೂದಲು ಕಪ್ಪಾಗುತ್ತದೆ.
ಬಿಳಿ ಕೂದಲು ಕಪ್ಪಾಗಲು ವಿವಿಧ ಚಿಕಿತ್ಸೆಗಳು ಲಭ್ಯವಿದೆ. ಸರಿಯಾದ ಜೀವನಶೈಲಿಯನ್ನು ಪಾಲಿಸದೆ ಇದ್ದರೆ ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು. ಹಾಗಾದರೆ ಈ ಸಮಸ್ಯೆಗೆ ಪರಿಹಾರ ಏನು..? ತಿಳಿಯಲು ಮುಂದೆ ಓದಿ...