How to Identify Fake Gold: ಅಸಲಿ, ನಕಲಿ ಚಿನ್ನವನ್ನು ಸುಲಭವಾಗಿ ಗುರುತಿಸುವುದು ಹೇಗೆ ತಿಳಿಯಿರಿ

Tue, 03 May 2022-8:39 am,

ಹಾಲ್‌ಮಾರ್ಕ್ ಮೂಲಕ ನಿಜವಾದ ಚಿನ್ನವನ್ನು ಗುರುತಿಸುವುದು ಸುಲಭ. ಭಾರತದಲ್ಲಿ, ಬಿಐಎಸ್ ಸಂಸ್ಥೆಯು ಗ್ರಾಹಕರಿಗೆ ಮಾರಾಟವಾಗುವ ಆಭರಣಗಳ ಗುಣಮಟ್ಟದ ಮಟ್ಟವನ್ನು ಪರಿಶೀಲಿಸುತ್ತದೆ. ಆದ್ದರಿಂದ ಬಿಐಎಸ್ ಹಾಲ್ಮಾರ್ಕ್ ನೋಡಿದ ನಂತರವೇ  ಚಿನ್ನವನ್ನು ಖರೀದಿಸಿ.  ಇನ್ನು  ಹಾಲ್‌ಮಾರ್ಕ್ ಅಸಲಿಯೋ ನಕಲಿಯೋ ಎನ್ನುವುದನ್ನುತಿಳಿದುಕೊಳ್ಳುವುದು ಕೂಡಾ ಅಗತ್ಯವೇ? ಮೂಲ ಹಾಲ್‌ಮಾರ್ಕ್ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್‌ನ ತ್ರಿಕೋನ ಚಿಹ್ನೆಯನ್ನು ಹೊಂದಿದೆ. 

ಇದಕ್ಕಾಗಿ, ಹಾರ್ಡ್‌ವೇರ್ ಅಂಗಡಿಯಿಂದ ಮ್ಯಾಗ್ನೆಟ್ ತೆಗೆದುಕೊಂಡು ಅದನ್ನು ಚಿನ್ನದ ಆಭರಣಗಳ ಮೇಲೆ ಹಿಡಿಯಿರಿ.  ಅದು ಅಂಟಿಕೊಂಡರೆ ನಿಮ್ಮ ಚಿನ್ನವು ನಿಜವಲ್ಲ ಮತ್ತು ಅದು ಅಂಟಿಕೊಳ್ಳದಿದ್ದರೆ ಅದು ನಿಜ. ಏಕೆಂದರೆ ಚಿನ್ನವು ಕಾಂತೀಯ ಲೋಹವಲ್ಲ. ಅದೇ ರೀತಿ, ಕೆಲವು ರಾಸಾಯನಿಕಗಳು ಮತ್ತು ಆಮ್ಲಗಳನ್ನು ಬಳಸಿ ಚಿನ್ನದ ಗುಣಮಟ್ಟವನ್ನು ಪರೀಕ್ಷಿಸಬಹುದು. .

ಇನ್ನೊಂದು ಸುಲಭವಾದ ಮಾರ್ಗವೆಂದರೆ ನೀರನ್ನು ಪರೀಕ್ಷಿಸುವುದು. ಇದಕ್ಕಾಗಿ, ಆಳವಾದ ಪಾತ್ರೆಯಲ್ಲಿ 2 ಲೋಟ ನೀರು ಹಾಕಿ ಮತ್ತು ಈ ನೀರಿನಲ್ಲಿ ಚಿನ್ನದ ಆಭರಣಗಳನ್ನು ಹಾಕಿ. ನಿಮ್ಮ ಚಿನ್ನ ತೇಲಿದರೆ ಅದು ಅಸಲಿಯಲ್ಲ.  ನಿಮ್ಮ ಆಭರಣಗಳು ಮುಳುಗಿ ಕುಳಿತರೆ ಅದು ನಿಜ.

ನಿಜವಾದ ಚಿನ್ನದ ಬಗ್ಗೆ ನೀವೇ ತಿಳಿದುಕೊಳ್ಳಲು ಬಯಸಿದರೆ, ಈ ಆಸಿಡ್ ಪರೀಕ್ಷೆಯಿಂದ ನೀವು ಸುಲಭವಾಗಿ ಕಂಡುಹಿಡಿಯಬಹುದು. ಇದಕ್ಕಾಗಿ, ನೀವು ಪಿನ್‌ ಮೂಲಕ ಸ್ವಲ್ಪ ಸ್ಕ್ರಾಚ್ ಮಾಡಿ ಮತ್ತು ನಂತರ ಆ ಸ್ಕ್ರಾಚ್‌ನ ಮೇಲೆ ನೈಟ್ರಿಕ್ ಆಸಿಡ್ ಹನಿಯನ್ನು ಹಾಕಿ. ನಕಲಿ ಚಿನ್ನವು ತಕ್ಷಣವೇ ಹಸಿರು ಬಣ್ಣಕ್ಕೆ ತಿರುಗುತ್ತದೆ. ಆದರೆ ನಿಜವಾದ ಚಿನ್ನದ ಮೇಲೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ.

ವಿನೆಗರ್ ಸಹಾಯದಿಂದ ಕೂಡಾ ಚಿನ್ನ ಅಸಲಿಯೋ ನಕಲಿಯೋ ಎನ್ನುವುದನ್ನು ಗುರುತಿಸಿಕೊಳ್ಳಬಹುದು. ಚಿನ್ನದ ಆಭರಣಗಳ ಮೇಲೆ ಕೆಲವು ಹನಿ ವಿನೆಗರ್ ಹಾಕಿ. ಅದರ ಬಣ್ಣದಲ್ಲಿ ಯಾವುದೇ ಬದಲಾವಣೆಯಾಗದಿದ್ದರೆ, ಅದು ಅಸಲಿ. ಬಣ್ಣ ಬದಲಾದರೆ  ನಕಲಿ ಚಿನ್ನ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link