ಈ ಆಹಾರಗಳನ್ನು ಸೇವಿಸುವ ಮೂಲಕ ನಿಮ್ಮ ಪ್ಲೇಟ್‌ಲೆಟ್‌ಗಳ ಸಂಖ್ಯೆಯನ್ನು ಹೆಚ್ಚಿಸಿ...
ವಿಟಮಿನ್ ಸಿ ಆಹಾರಗಳು:
ಕಿವಿ, ದ್ರಾಕ್ಷಿ ಮತ್ತು ಸ್ಟ್ರಾಬೆರಿಗಳು ಮತ್ತು ಬ್ರೊಕೊಲಿ, ಕೆಂಪು ಮತ್ತು ಹಸಿರು ಬೆಲ್ ಪೇಪರ್‌ಗಳು ಮತ್ತು ಬ್ರಸೆಲ್ಸ್ ಮೊಗ್ಗುಗಳಂತಹ ತರಕಾರಿಗಳಲ್ಲಿ ವಿಟಮಿನ್ ಸಿ ಅಂಶ ಕಂಡು ಬರುತ್ತದೆ. ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮತ್ತು ರೋಗ ನಿರೋದಕ ಶಕ್ತಿಯನ್ನು ಹೆಚ್ಚಿಸುತ್ತದೆ.
ವಿಟಮಿನ್ ಡಿ ಆಹಾರಗಳು:
ವಿಟಮಿನ್ ಡಿ ಪಡೆಯಲು ಪ್ರಮುಖ ಮೂಲ ಎಂದರೆ ಸೂರ್ಯ ಕಿರಣ. ವಿಟಮಿನ್ ಡಿ ಹೆಚ್ಚಿಸುವ ಆಹಾರಗಳೆಂದರೆ ಮೊಟ್ಟೆಗಳು, ಬಲವರ್ಧಿತ ಹಾಲು ಮತ್ತು ಮೊಸರು ಮತ್ತು ಕೊಬ್ಬಿನ ಮೀನು ಹಾಗೂ ಕಿತ್ತಳೆ ರಸ ಕೂಡ ಸೇರಿದೆ. ಇದನ್ನು ಸೇವಿಸುವುದರಿಂದ ವಿಟಮಿನ್ ಡಿ ಸತ್ವವನ್ನ ಹೆಚ್ಚಿಸ ಬಹುದಾಗಿದೆ.
ವಿಟಮಿನ್ ಕೆ ಆಹಾರಗಳು:
ವಿಟಮಿನ್ ಕೆ ಆಹಾರ ಮೂಲಗಳಲ್ಲಿ ಕೋಸುಗಡ್ಡೆ, ಕುಂಬಳಕಾಯಿ, ಸೋಯಾಬೀನ್ ಅಥವಾ ಅದರ ಎಣ್ಣೆ, ಮತ್ತು ಎಲೆಗಳ ತರಕಾರಿಗಳಾದ ಕೇಲ್, ಟರ್ನಿಪ್ ಗ್ರೀನ್ಸ್, ಪಾಲಕ ಮತ್ತು ಕೊಲಾರ್ಡ್‌ಗಳು ಸೇರಿವೆ. ಇವನ್ನು ಸೇವಿಸುವುದರ ಮೂಲಕ ನೀವು ಪ್ಲೇಟ್‌ಲೆಟ್‌ಗಳು ಕಡಿಮೆಯಾಗದಂತೆ ನೋಡಿಕೊಳ್ಳ ಬಹುದು.
ವಿಟಮಿನ್ B-12 ಆಹಾರಗಳು: ಮೊಟ್ಟೆ, ಮೀನು ಸೇರಿದಂತೆ ಪ್ರಾಣಿ ಮಾಂಸದಲ್ಲಿ ವಿಟಮಿನ್ B-12 ಅಂಶ ಹೇರಳವಾಗಿ ಕಂ+ಡುಬರುತ್ತದೆ. ನೀವು ಸಸ್ಯಾಹಾರಿಯಾಗಿದ್ದರೆ ಸೋಯಾ ಹಾಲು ಅಥವಾ ಬಾದಾಮಿ ಹಾಲುಗಳನ್ನು ಸೇವಿಸುವ ಮೂಲಕ ವಿಟಮಿನ್ B-12 ಅಂಶವನ್ನು ಹೆಚ್ಚಿಸಬಹುದು.